ಪಿಎಸ್‌ಐ ಸೇರಿ ಮೂವರು ಪೊಲೀಸರ ಅಮಾನತು

Published on

ಚಾಮರಾಜನಗರ: ಕರ್ತವ್ಯ ಲೋಪವೆಸಗಿದ ಆರೋಪದಡಿ ಪಿಎಸ್‌ಐ ಸೇರಿ ಮೂವರು ಪೊಲೀಸರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಅಮಾನತು ಮಾಡಿದ್ದಾರೆ.

ಯಳಂದೂರು ಪಟ್ಟಣ ಪೊಲೀಸ್ ಠಾಣೆಯ ಪಿಎಸ್‌ಐ ಹನುಮಂತ ಉಪ್ಪಾರ್, ಎಎಸ್‌ಐ ಪೂವಯ್ಯ, ಮುಖ್ಯಪೇದೆ ಇಲಿಯಾಸ್ ಪಾಷಾ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ವಿಚಾರಣೆಯನ್ನು ಬಾಕಿ ಉಳಿಸಿ ಪ್ರಾಥಮಿಕ ತನಿಖೆ ಶುರು ಮಾಡಲಾಗಿದೆ. ಅಮಾನತಿಗೆ ಕಾರಣವೇನು?:ಚಾಮರಾಜನಗರ ತಾಲೂಕಿನ, ಯಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಇರಸವಾಡಿ ಗ್ರಾಮದಲ್ಲಿ ಮಹೇಶ್ ಮತ್ತು ಗ್ರಾಮಸ್ಥ ನಿಂಗರಾಜು ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಮಧ್ಯ ಪ್ರವೇಶ ತಮ್ಮ ನಾಗಯ್ಯನಿಗೆ ಅಣ್ಣ ಮಹೇಶ್ ಮಾರಾಣಾಂತಿಕ ಹಲ್ಲೆ ಮಾಡಿದ್ದ. ಗಾಯಾಳುವನ್ನು ಯಳಂದೂರು ಆಸ್ಪತ್ರೆಗೆ ದಾಖಲಿಸಿ, ಬಳಿಕ ಜಿಲ್ಲಾಸ್ಪತ್ರೆಗೆ ಕರೆದುಕೊಂಡ ಹೋಗಿ, ನಂತರ ಮೈಸೂರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದಾಗ ಸಿಕ್ಕ ಮಾಹಿತಿಯನ್ನು ಆಧರಿಸಿ ಪ್ರಕರಣ ದಾಖಲಿಸದ ಹಿನ್ನೆಲೆಯಲ್ಲಿ ಕರ್ತವ್ಯ ವಿಲವಾಗಿ, ನಿರ್ಲಕ್ಷ್ಯ ತೋರಿದ್ದರಿಂದ ಪಿಎಸ್‌ಐ ಹನುಮಂತ ಉಪ್ಪಾರ್, ಎಎಸ್‌ಐ ಪೂವಯ್ಯ, ಮುಖ್ಯಪೇದೆ ಇಲಿಯಾಶ್ ಪಾಷಾ ಅವರನ್ನು ಅಮಾತನು ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net