ಪಿಎಸ್​ಐ ನೇಮಕಾತಿ ಹಗರಣದ ತನಿಖೆಯಲ್ಲಿ ಪೂರ್ಣ ಸತ್ಯ ಹೊರ ಬಂದಿಲ್ಲ

h6-sapna book house
Published on

ಹುಬ್ಬಳ್ಳಿ: ಪಿಎಸ್​ಐ ನೇಮಕಾತಿ ಹಗರಣದಲ್ಲಿ ಇಲ್ಲಿಯವರೆಗೆ ಪೂರ್ಣ ಸತ್ಯ ಹೊರ ಬಂದಿಲ್ಲ. ಪೂರ್ತಿ ಸತ್ಯ ಬಹಿರಂಗಕ್ಕೆ ಬರುವುದನ್ನೇ ಕಾಯುತ್ತಿದ್ದೇನೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ಬಿದರಿ ಹೇಳಿದರು.

ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2012ರಲ್ಲಿ ಪೊಲೀಸ್ ಕಾನೂನಿಗೆ ತಿದ್ದುಪಡಿ ತಂದು ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆಯನ್ನೇ ಸರ್ವನಾಶ ಮಾಡಿಬಿಟ್ಟಿದ್ದಾರೆ. ಪೊಲೀಸ್ ವ್ಯವಸ್ಥೆ ಹಾಳಾದರೆ ಕರ್ನಾಟಕವೇ ಸರ್ವನಾಶವಾದಂತೆ. ಪಿಎಸ್​ಐಯಿಂದ ಹಿಡಿದು ಡಿಜಿಪಿ ವರೆಗೆ 1 ವರ್ಷದೊಳಗೆ ವರ್ಗಾವಣೆ ಮಾಡುವ ನೀತಿ ಸರಿಯಲ್ಲ. ಕನಿಷ್ಠ 2 ವರ್ಷಗಳ ಅವಧಿ ಇರಬೇಕು ಎಂದು ಹೇಳಿದರು.

ಸದ್ಯದ ಪರಿಸ್ಥಿತಿಯಲ್ಲಿ ರಾಜಕಾರಣಕ್ಕೆ ಒಳ್ಳೆಯವರು ಬರಲು ಸಾಧ್ಯವಿಲ್ಲ. ರಾಜಕಾರಣವೆಂದರೆ ಸಾರ್ವಜನಿಕ ಸೇವೆ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಅಲ್ಲಿ ಸ್ವಾರ್ಥ, ಸಂಕುಚಿತ ಭಾವನೆ, ಲೂಟಿ ಹೆಚ್ಚಾಗಿದೆ. ನನ್ನ ನಿವೃತ್ತಿ ಜೀವನ ಸುಖಮಯವಾಗಿದೆ. ಅಯೋಗ್ಯರ (ರಾಜಕಾರಣಿ) ಜತೆ ಸೇರಿಯೂ ಸೇರದಂತೆ ಇದ್ದಿದ್ದೇ ನನ್ನ ಪಾಲಿನ ಸುದೈವ. ಸತ್ಯಮೇವ ಪುಸ್ತಕ ಬರೆಯಲು ನನ್ನ ಸಾಧನೆಗಿಂತ ಪೊಲೀಸರೇ ಪ್ರೇರಣೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net