ಕೊಳ್ಳೇಗಾಲ: ಪಟ್ಟಣ ಪೊಲೀಸ್ ಠಾಣೆಯಲ್ಲಿದ್ದ ಪಿಎಸ್‌ಐ ಜತೆ ಅಸಭ್ಯ ವರ್ತನೆ ತೋರಿದ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಶುಕ್ರವಾರ ಯುವಕನೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಪಟ್ಟಣದ ಜಿ.ಪಿ.ಮಲ್ಲಪ್ಪಪುರಂ ಬಡಾವಣೆ ನಿವಾಸಿ ಕೆ.ಕೆ ಮೂರ್ತಿ ಅವರ ಪುತ್ರ ದುಷ್ಯಂತ್ (20) ಆರೋಪಿಯಾಗಿದ್ದು, ತಲೆಮರೆಸಿಕೊಂಡಿರುವ ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಜು.4 ರಂದು ಪಟ್ಟಣ ಪೊಲೀಸ್ ಠಾಣೆಯ ಪಿಎಸ್‌ಐ ವರ್ಷಾ ಅವರು ಊಟ ಮಾಡುತ್ತ ಕುಳಿತಿರುವಾಗ ಏಕಾಏಕಿ ಕೊಠಡಿಗೆ ನುಗ್ಗಿದ ದುಷ್ಯಂತ್ ಎದುರಿಗಿದ್ದ ಕುರ್ಚಿಯಲ್ಲಿ ಕಾಲ ಮೇಲೆ ಕಾಲು ಹಾಕಿ ಕುಳಿತುಕೊಂಡು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ, ಗಲಾಟೆ ಮಾಡಿದ್ದಾನೆ ಎಂದು ಪಿಎಸ್‌ಐ ವರ್ಷಾ ಠಾಣೆಗೆ ಲಿಖಿತ ದೂರು ನೀಡಿದ್ದಾರೆ.