ಪಿಎಸ್‌ಐ ಅಮಾನತು ಖಂಡನೀಯ

5Huk2
Published on

ಹುಕ್ಕೇರಿ: ತಾಲೂಕಿನ ಇಂಗಳಿ ಗ್ರಾಮದಲ್ಲಿ ಗೋ ರಕ್ಷಣೆಗೆ ಮುಂದಾಗಿದ್ದ ಶ್ರೀ ರಾಮಸೇನೆ ಕಾರ್ಯಕರ್ತರ ಮೇಲಿನ ಹಲ್ಲೆ ಪ್ರಕರಣ ಹುಕ್ಕೇರಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬಾರದಿದ್ದರೂ ಪಿಎಸ್‌ಐ ನಿಖಿಲ ಕಾಂಬಳೆ ಅವರನ್ನು ಅಮಾನತುಗೊಳಿಸಿರುವುದು ಖಂಡನೀಯ ಎಂದು ದಲಿತ ಮುಖಂಡ ಉದಯ ಹುಕ್ಕೇರಿ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿವಿಧ ದಲಿತಪರ ಸಂಘಟನೆಗಳು ಪಿಎಸ್‌ಐ ನಿಖಿಲ ಕಾಂಬಳೆ ಅಮಾನತು ಖಂಡಿಸಿ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಈ ಪ್ರಕರಣದಲ್ಲಿ ನಿಖಿಲ್ ಕಾಂಬಳೆ ತಪ್ಪಿಲ್ಲ. ಹೀಗಾಗಿ ಪ್ರಕರಣವನ್ನು ಕೂಲಂಕುಷವಾಗಿ ಪರಿಶೀಲಿಸಬೇಕು. ಪಿಎಸ್‌ಐ ನಿಖಿಲ ಕಾಂಬಳೆ ಅವರಿಗೆ ಮರು ನೇಮಕ ಮಾಡಿಕೊಳ್ಳಬೇಕು. ಇಲ್ಲದಿದ್ದರೇ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.

ಬಸವರಾಜ ತಳವಾರ, ರವಿ ಕಾಂಬಳೆ, ಬಾಹುಸಾಬ್ ಪಾಂಡ್ರೆ ಮಾತನಾಡಿದರು. ಮಹೇಶ ಹಟ್ಟಿಹೊಳಿ, ಶ್ರೀನಿವಾಸ ವ್ಯಾಪಾರಿ, ಅಪ್ಪಣ್ಣ ಖಾತೇದಾರ, ಮುತ್ತು ಕಾಂಬಳೆ, ಚಿದಾನಂದ, ಬಾಹುಸಾಬ್ ಪಾಂಡ್ರೆ, ಸದಾಶಿವ ಕರೆಪ್ಪಗೋಳ, ವಿಠ್ಠಲ ಮಾದರ, ರೇಖಾ ಬಂಗಾರಿ, ಶಾಂತಾ ಯರಗಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net