ಪಿಎಸ್​ಐ ಅಕ್ರಮ ಮತ್ತೆ ಮೂವರ ಬಂಧನ

PSI Scam
Published on

ಕಲಬುರಗಿ: ರಾಜ್ಯವನ್ನೇ ತಲ್ಲಣಗೊಳಿಸಿದ್ದ ೫೪೫ ಪಿಎಸ್‌ಐ ನೇಮಕ ಪರೀಕ್ಷೆಯಲ್ಲಿ ಜರುಗಿದ್ದ ಅಕ್ರಮಕ್ಕೆ ಸಂಬAಧಿಸಿದAತೆ ಒಂದೂವರೆ ವರ್ಷದ ಬಳಿಕ ಸಿಐಡಿ ಅಧಿಕಾರಿಗಳು ಮತ್ತೇ ಮೂವರನ್ನು ಬಂಧಿಸಿದ್ದಾರೆ. ಈಗಾಗಲೇ ಮರು ಪರೀಕ್ಷೆ ನಡೆದಿದ್ದು, ಇನ್ನೂ ಯಾರನ್ನು ಸಿಐಡಿ ಬಂಧಿಸಲ್ಲ ಎಂದು ನಿರುಮ್ಮಳವಾಗಿದ್ದವರಿಗೆ ಶಾಕ್ ನೀಡಿದಂತಾಗಿದೆ.

ಶಹಾಬಾದ್ ಸಮುದಾಯ ಆಸ್ಪತ್ರೆಯಲ್ಲಿ ಎಫ್‌ಡಿಎ ಆಗಿರುವ ಚಂದ್ರಕಾಂತ ಪ್ಯಾಟಿ, ಅಫಜಲಪುರದ ಬಿಸಿಎಂ ಹಾಸ್ಟೆಲ್ ವಾರ್ಡನ್ ಬಸವರಾಜ ಜಮಾದಾರ, ಕಿಂಗ್‌ಪಿನ್ ಆರ್.ಡಿ.ಪಾಟೀಲ್ ಆಪ್ತನಾಗಿರುವ ಮತ್ತು ಡೀಲ್ ಕುದುರಿಸುತ್ತಿದ್ದ ಶಶಿಧರ ಜಮಾದಾರ ಬಂಧಿತರು. ಸಿಐಡಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆ ನಡೆಸುತ್ತಿರುವ ಡಿವೈಎಸ್ಪಿ ಕೇಶವಮೂರ್ತಿ ಹಾಗೂ ತಂಡ ಹೈಕೋರ್ಟ್ ಬಳಿಯ ರಿಂಗ್‌ರೋಡ್, ಶಹಾಬಾದ್ ಆಸ್ಪತ್ರೆಯಲ್ಲಿ ದಾಳಿ ನಡೆಸಿ ವಶಕ್ಕೆ ತೆಗೆದುಕೊಂಡಿದೆ.

ಬAಧಿತ ಶಶಿಧರ ಈ ಹಿಂದೆ ಪಿಎಸ್‌ಐ ಸ್ಕಾಮ್ ಬೆಳಕಿಗೆ ಬಂದಿದ್ದ ವೇಳೆಯಲ್ಲಿ ಸಿಐಡಿಯಿಂದ ತಪ್ಪಿಕೊಂಡಿದ್ದ. ಅಂದಿನಿಂದ ಇಂದಿನವರೆಗೂ ಆತನನ್ನು ಬಂಧಿಸಿರಲಿಲ್ಲ. ಅಲ್ಲದೆ ಕೆಇಎ ಅಕ್ರಮದಲ್ಲಿಯೂ ಬ್ಲೂ ಟೂತ್ ಕೊಡುವುದು ಇನ್ನಿತರ ಕಾರ್ಯಗಳಲ್ಲಿ ಶಾಮೀಲಾಗಿದ್ದ.
ಈ ಹಿಂದೆ ತನಿಖಾಧಿಕಾರಿಯಾಗಿದ್ದ ಡಿವೈಎಸ್ಪಿ ಶಂಕರಗೌಡ ಪಾಟೀಲ್ ಹಲವರನ್ನು ಬಂಧಿಸಿದ್ದರು. ಈಗ ಹೊಸ ತನಿಖಾಧಿಕಾರಿಗಳು ಮತ್ತೇ ಮೂವರನ್ನು ಬಂಧಿಸಿರುವುದರಿAದ ಕೇಸ್ ಮರುಜೀವ ಪಡೆದುಕೊಂಡಂತಾಗಿದೆ. ಅಕ್ರಮ ಜರುಗಿದಾಗ ತಲೆ ಮರೆಸಿಕೊಂಡಿದ್ದ ಮತ್ತು ಸುಳಿವುಗಳಿದ್ದರೂ ಬಂಧನವಾಗದೆ ಉಳಿದುಕೊಂಡಿದ್ದವರ ಮೇಲೆ ಸಿಐಡಿ ಕಣ್ಣಿಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net