ಪಿಎಸ್‌ಎಸ್‌ಕೆಗೆ ಸುಧಾಮೂರ್ತಿ ಭೇಟಿ

2-pnp 2
Published on

ಪಾಂಡವಪುರ: ಮುರುಗೇಶ್ ಆರ್.ನಿರಾಣಿ ಒಡೆತನದ ಎಂಆರ್‌ಎನ್ ಸಂಸ್ಥೆ ಗುತ್ತಿಗೆ ಪಡೆದು ನಿರ್ವಹಿಸುತ್ತಿರುವ ಪಿಎಸ್‌ಎಸ್‌ಕೆ ಕಾರ್ಖಾನೆಗೆ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಮುಖ್ಯಸ್ಥೆ ಸುಧಾ ನಾರಾಯಣಮೂರ್ತಿ ಇತ್ತೀಚೆಗೆ ಭೇಟಿ ನೀಡಿ ಕಾರ್ಖಾನೆ ಒಳಾಂಗಣ ಹಾಗೂ ಸಕ್ಕರೆ ತಯಾರಿಕಾ ಘಟಕಗಳನ್ನು ವೀಕ್ಷಿಸಿ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪಾಂಡವಪುರ ಮಾರ್ಗವಾಗಿ ಪ್ರವಾಸ ತೆರಳುವಾಗ ಮಾರ್ಗ ಮಧ್ಯೆ ಕಾರ್ಖಾನೆ ನೋಡಿದ ತಕ್ಷಣ ವಾಹನದಿಂದ ಇಳಿದು ಪತಿ ನಾರಾಯಣಮೂರ್ತಿ ಹಾಗೂ ಇತರ ಸ್ನೇಹಿತರೊಡನೆ ಕಾರ್ಖಾನೆ ಒಳಾಂಗಣ ಸೇರಿದಂತೆ ಸಕ್ಕರೆ ತಯಾರಿಕಾ ಘಟಕ, ಕಬ್ಬು ನುರಿಸುವಿಕೆ ವಿಭಾಗ ಮತ್ತು ಕಾರ್ಖಾನೆಯಲ್ಲಿ ಅಳವಡಿಕೆಯಾಗಿರುವ ಯಂತ್ರಗಳ ತಾಂತ್ರಿಕತೆಯ ಬಗ್ಗೆ ವಿವರ ಪಡೆದುಕೊಂಡರು.

ಮಾರು ವರ್ಷಗಳಿಂದ ನಿಂತು ಹೋಗಿದ್ದ ಪಿಎಸ್‌ಎಸ್‌ಕೆ ಕಾರ್ಖಾನೆಯನ್ನು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು 40 ವರ್ಷಗಳಿಗೆ ಗುತ್ತಿಗೆ ಪಡೆದು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿ ಪ್ರಸಕ್ತ ಸಾಲಿನಲ್ಲಿ ಸುಮಾರು 5 ಲಕ್ಷಕ್ಕೂ ಅಧಿಕ ಟನ್ ಕಬ್ಬು ಅರೆದು ರೈತರಿಗೆ ಯಾವುದೇ ತೊಂದರೆಯಾಗದಂತೆ ಈವರೆಗೂ ಸರಬರಾಜು ಬಟವಾಡೆ ಮಾಡಿರುವ ಆಡಳಿತ ಮಂಡಳಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸುಮಾರು ಅರ್ಧ ತಾಸಿಗೂ ಹೆಚ್ಚು ಕಾಲ ಕಾರ್ಖಾನೆ ಆವರಣದಲ್ಲಿ ಕಾಲ ಕಳೆದ ಸುಧಾಮೂರ್ತಿ ಅವರು ಸಚಿವ ನಿರಾಣಿ ಅವರ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.

ಕಾರ್ಖಾನೆ ಸಿಜೆಎಂ ಶಿವಾನಂದ ಸಲಗಾರ, ಕಾರ್ಖಾನೆ ಮುಖ್ಯಸ್ಥ ಶಿವಾನಂದ ಯರಗಟ್ಟಿ, ಕಬ್ಬು ವಿಭಾಗದ ಮುಖ್ಯಸ್ಥ ರವಿ, ಸತೀಶ್‌ಗೌಡ, ಇಂಜಿನಿಯರ್ ಪರಮೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net