ಪಿಎಸ್‌ಎಸ್ ಗುತ್ತಿಗೆಗೆ ಅಂಗ್ರಿಮೆಂಟ್ ಆಗಿಲ್ಲ

8-pnp 4
Published on

ಪಾಂಡವಪುರ: ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಗುತ್ತಿಗೆ ಪಡೆದಿರುವ ಸಚಿವ ಮುರುಗೇಶ್ ಆರ್.ನಿರಾಣಿ ಅವರ ನಿರಾಣಿ ಸಂಸ್ಥೆಗೆ ಅಗ್ರಿಮೆಂಟ್ ಆಗದೆ ಸರ್ಕಾರಕ್ಕೆ ಪಾವತಿಸಬೇಕಾದ ಹಣ ಈವರೆಗೂ ಪಾವತಿಯಾಗಿಲ್ಲ ಎಂದು ಶಾಸಕ ಸಿ.ಎಸ್.ಪುಟ್ಟರಾಜು ಆರೋಪಿಸಿದರು.


ತಾಲೂಕಿನ ಬನ್ನಂಗಾಡಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ 3 ಕೋಟಿ ರೂ. ಅನುದಾನದಲ್ಲಿ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.


ಪಿಎಸ್‌ಎಸ್ ಕಾರ್ಖಾನೆ ಬಂದ್ ಆಗಿದ್ದಾಗ ಖಾಸಗಿಯವರಿಗೆ ಗುತ್ತಿಗೆ ನೀಡುವ ಮೂಲಕ ಬಾಗಿಲು ತೆಗೆಸಿದ್ದು ನಾನೆ. ಮೊದಲ ಬಾರಿಯ ಶಾಸಕ ಸ್ಥಾನದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್ ಸರ್ಕಾರದಲ್ಲಿ ಕಾರ್ಖಾನೆಯನ್ನು 7 ವರ್ಷಗಳ ಅವಧಿಗೆ ತಮಿಳುನಾಡು ಮೂಲದ ಕೊಠಾರಿ ಶುಗರ್ಸ್‌ ಗುತ್ತಿಗೆ ನೀಡುವ ಮೂಲಕ ಮೊದಲ ಬಾರಿಗೆ ಕಾರ್ಖಾನೆಯನ್ನು ಖಾಸಗಿ ಒಡೆಯತನಕ್ಕೆ ನೀಡಲಾಗಿತ್ತು. ಅಂದು ರೈತ ಸಂಘದ ಮುಖಂಡರು ಬಾಯಿ ಮುಚ್ಚಿಕೊಂಡು ಸುಮ್ಮನಿದಿದ್ದರೆ ಕೇವಲ 6 ವರ್ಷಗಳಲ್ಲಿ ಕಾರ್ಖಾನೆಯ ಸಾಲ ತೀರುವಳಿ ಆಗುತ್ತಿತ್ತು. ರೈತ ಸಂಘದವರು ಒಂದೇ ವರ್ಷಕ್ಕೆ ತಡೆ ಮಾಡಿ ಕೊಠಾರಿ ಅವರನ್ನು ಓಡಿಸಿದರು ಎಂದರು.
ಆದರೆ ಈಗ ಕಾರ್ಖಾನೆಯನ್ನು 40 ವರ್ಷದ ಅವಧಿಗೆ 405 ಕೋಟಿ ರೂ.ಗೆ ಗುತ್ತಿಗೆ ನೀಡಲಾಗಿದೆ. ಆದರೆ ಅಗ್ರಿಮೆಂಟ್ ಆಗಿಲ್ಲ ಎಂದು ತಿಳಿಸಿದರು.


ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅಲ್ಪಹಳ್ಳಿ ಗೋವಿಂದಯ್ಯ, ಜೆಡಿಎಸ್ ಮುಖಂಡರಾದ ಎಂ.ಎಸ್.ರವಿಕರ, ಬನ್ನಂಗಾಡಿ ವೆಂಕಟೇಶ್, ಯೋಗೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net