ಕಲಬುರಗಿ :
ನಾಕಾಬಂದಿ ಹಾಕಿ ಕರ್ತವ್ಯ ನಿರತರಾಗಿದ್ದ ಪಿಎಸ್‌ಐ ಸೇವಾ ಪಿಸ್ತೂಲ್ ಜತೆಗೆ ಕುಖ್ಯಾತ ಅಂತಾರಾಜ್ಯ ಕಳ್ಳ ಪರಾರಿಯಾಗಿ ಹೋಗಿ ಮರವೇರಿ ಕುಳಿತುಕೊಂಡು ಘಟನೆ ಸೋಮವಾರ ಅಫಜಲಪುರ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಕೆಳಗಿಸಿ ಬಂಧಿಸಿದರೆ ಅದೇ ಪಿಸ್ತೂಲ್‌ನಿಂದ ಶೂಟ್ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿ ಹೈಡ್ರಾಮಾ ಸಹ ಜರುಗಿತು. ಕೊನೆಗೆ ಪೊಲೀಸರು ಇನ್ನಿಲ್ಲದ ಹರಸಾಹಸ ಮಾಡಿ ಕೆಳಗಿಳಿಸಿದರು. ಇನ್ನೊಂದು ಮೂಲದ ಪ್ರಕಾರ ಪಿಎಸ್‌ಐ ಬಳಿಯಿಂದ ರಿವಾಲ್ವಾರ್ ಕಿತ್ತುಕೊಂಡು ಹೋಗಿದ್ದಾನೆ ಎನ್ನಲಾಗಿದೆ.
ಖಾಜಾ ಅಲಿಯಾಸ್ ಖಾಜಪ್ಪ ಗಾಯಕವಾಡ ಎಂಬಾತನೇ ಪೊಲೀಸರನ್ನು ಹೈರಾಣ ಮಾಡಿದ ಕುಖ್ಯಾತ ಕಳ್ಳ. ಅಫಜಲಪುರ ತಾಲೂಕಿನ ಬಳೂರಗಿ ಗ್ರಾಮದವ. ನೆರೆಯ ಮಹಾರಾಷ್ಟçದಲ್ಲಿ ಕಳ್ಳತನ ಮಾಡಿ ಬಳೂರಗಿಗೆ ಬರುತ್ತಿz್ದÁನೆ ಎಂಬ ಮಾಹಿತಿ ಅಕ್ಕಲಕೋಟ ಪೊಲೀಸರು ನೀಡಿದ್ದರು. ಅದರಂತೆ ಅಫಜಲಪುರ ಪಿಎಸ್‌ಐ ಭೀಮರಾಯ ಬಂಕಲಗಿ ಹಾಗೂ ಪೊಲೀಸ್ ಸಿಬ್ಬಂದಿ ಸೇರಿಕೊಂಡು ಖಾಜಾನನ್ನು ಬಂಧಿಸಲು ಸೊನ್ನ ಕ್ರಾಸ್ ಬಳಿ ನಾಕಾಬಂದಿ ಹಾಕಿಕೊಂಡು ವಾಹನಗಳ ತಪಾಸಣೆ ಮಾಡುತ್ತಿದ್ದರು.
ಖಾಜಾ ಮತ್ತು ಆತನ ಸಹಚರರು ಸಿಂದಗಿ ಮಾರ್ಗವಾಗಿ ಅಫಜಲಪುರ ಕಡೆ ಬರುತ್ತಿದ್ದಾರೆ ಎಂಬ ಸುಳಿವಿನಂತೆ ಪಿಎಸ್‌ಐ ಭೀಮರಾಯ ಬಂಕಲಗಿ ಮತ್ತು ಸಿಬ್ಬಂದಿ ಸೋಮವಾರ ನಸುಕಿನ ಜಾವ ೩ ಗಂಟೆ ಸುಮಾರಿಗೆ ಸೊನ್ನ ಕ್ರಾಸ ಹತ್ತಿರ ಬ್ಯಾರಿಕೇಡ ಹಾಕಿ ಬಂಧಿಸಲು ನಿಂತಿದ್ದರು. ಆತನಿದ್ದ ಕಾರ್ ಅಲ್ಲಿಗೆ ಬಂದಾಗ ಪೋಲಿಸರು ಇದ್ದುದ್ದರಿಂದ ಕಾರಿನ ಗ್ಲಾಸ್ ಇಳಿಸದೆ ಒಳಗಡೆ ಕುಳಿತುಕೊಂಡಿದ್ದ. ಗ್ಲಾಸ್ ತೆಗೆಯದಿದ್ದಾಗ ಪಿಎಸ್‌ಐ ತಮ್ಮ ಬಳಿಯಿದ್ದ ಸರ್ವಿಸ್ ಪಿಸ್ತೂಲಿನಿಂದ ಕಾರಿ ಗ್ಲಾಸ್ ಒಡೆದಿದ್ದಾರೆ. ಈ ವೇಳೆಯಲ್ಲಿ ಪಿಸ್ತೂಲï ಕೈಯಿಂದ ಜಾರಿ ಒಳಗೆ ಜಾರಿ ಬಿದಿತು. ತಕ್ಷಣವೇ ಖಾಜಪ್ಪ ಪಿಸ್ತೂಲïನೊಂದಿಗೆ ಕಾರನ್ನು ವೇಗವಾಗಿ ವಿಜಯಪುg ಕಡೆಗೆ ತಿರುಗಿಸಿಕೊಂಡು ಪರಿಯಾಗಿದ್ದಾನೆ. ಇನ್ನೊಂದು ಮೂಲ ಹೇಳುವಂತೆ ಪಿಎಸ್‌ಐ ಬಳಿಯಿಂದ ರಿವಾಲ್ವಾರ್ ಕಿತ್ತುಕೊಂಡು ಹೋಗಿದ್ದಾನೆ ಎನ್ನಲಾಗಿದೆ.
ಪೋಲಿಸರು ತಕ್ಷಣವೇ ಕಾರನ್ನು ಬೆನ್ನಟ್ಟಿದರೂ ಸಿಗಲಿಲ್ಲ. ಹಾಗೆ ಶೋಧ ಮುಂದುವರೆಸಿದಾಗ ಸೊನ್ನ ಗ್ರಾಮದ ಹೊಸ ಬಡಾವಣೆಯಲ್ಲಿ ಕಾರು ನಿಲ್ಲಿಸಿ ಕಾಲ ನಡುಗೆಯ ಮೂಲಕ ಅಫಜಲಪುರ ಪಟ್ಟಣದ ಸೀಮಾಂತರದಲ್ಲಿವ ತೋಟದಲ್ಲಿರುವ ಲಕ್ಷಿö್ಮÃ ದೇವಸ್ಥಾನವಿರುವ ಗಿಡಗಳ ಗುಂಪಿನಲ್ಲಿರುವ ದೊಡ್ಡದಾಗ ಬೇವಿನಮರವೇರಿ ಕುಳಿತ್ತಿರುವುದು ಗೊತ್ತಾಗಿದೆ.
ಸುದ್ದಿ ಅರಿಯುತ್ತಲೇ ಎಸ್ಪಿ ಇಶಾ ಪಂತ್, ಹೆಚ್ಚುವರಿ ಎಸ್ಪಿ ಶ್ರೀನಿಧಿ, ಡಿವೈಎಸ್ಪಿ ಗೋಪಿ ಇತರರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಆತ ಏರಿದ್ದ ಮರದ ಬಳಿಗೆ ಬಂದ ಪೊಲಿಸರು ಆತನನ್ನು ಮರದಿಂದ ಕೆಳಗಿಳಸಲು ಇನ್ನಿಲ್ಲದ ಪ್ರಯತ್ನ, ಹರಸಾಹಸ ಮಾಡಿದ್ದಾರೆ. ಕೆಳಗೆ ಇಳಿಯದಿದ್ದಾಗ ಬಳೂರಗಿಯಿಂದ ಆತನ ಕುಟುಂಬದವರನ್ನು ಕರೆಯಿಸಿಕೊಂಡು ಮನವೊಲಿಸುವ ಪ್ರಯತ್ನ ಮಾಡಿದರು. ಬಂಧಿಸಿದರೆ ಪೊಲೀಸ್‌ರ ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಳ್ಳುವೆ ಎಂದು ಬೆದರಿಕೆ ಹಾಕಿದ್ದಾನೆ. ಸುಮಾರು ಐದು ಘಂಟೆಗಳ ಕಾಲ ಪೊಲಿಸರು, ಕುಟುಂಬಸ್ಥರು ಸೇರಿಕೊಂಡು ಮನವೊಲಿಸಿದ್ದರಿಂದ ಕೊನೆಗೆ ಮರದಿಂದ ಕೆಳಗಿಳಿದು ಬಂದಿದ್ದಾನೆ. ಬರುತ್ತಲೇ ಪಿಎಸ್‌ಐ ಪಿಸ್ತೂಲ್‌ನನ್ನು ಜಿ¯್ಲÁ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರಿಗೆ ಒಪ್ಪಿಸಿದ್ದಾನೆ.
ಸಿಪಿಐಗಳಾದ ರಾಜಶೇಖರ ಬಡದೇಸಾರ, ಮಹಾದೇವ ಪಂಚಮುಖಿ ಸೇರಿದಂತೆ ವಿವಿಧ ಠಾಣೆಗಳ ಪಿಎಸ್‌ಐ ಹಾಗೂ ಸಿಬ್ಬಂದಿ, ಬೆರಳಚ್ಚು, ಶ್ವಾನದಾಳ ತಂಡದವರಿದವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಈಶಾನ್ಯ ವಲಯ ಡಿಐಜಿ ಅನುಪಮ್ ಅಗ್ರವಾಲ್ ಅವರು ಸ್ಥಳಕ್ಕೆ ಭೇಟಿ ನೀಡಿದರು. ಈ ಕುರಿತು ಅಫಜಲಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
==ಬಾಕ್ಸ್==
ಸಹಚರರು ಸೇರಿ ಮೂವರ ಬಂಧನ
ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಪತ್ರಕರ್ತರ ಜತೆಗೆ ಮಾತನಾಡಿದ ಎಸ್ಪಿ ಇಶಾ ಪಂತ್, ಕಳ್ಳತನ ಪ್ರಕರಣದಲ್ಲಿ ಆರೋಪಿಯಾಗಿದ್ದ ಖಾಜಪ್ಪ ಗಾಯಕವಾಡ ಆತನ ಸಹಚರರಾಗಿರುವ ಸಂಜು ಹಾಗೂ ರವಿಯನ್ನು ಬಂಧಿಸಲಾಗಿದೆ ಎಂದು ಹೇಳಿದರು. ಅಲ್ಲದೆ ಆತ ಪಿಸ್ತೂಲ್ ಕಿತ್ತುಕೊಂಡು ಹೋಗಿಲ್ಲ. ಬದಲಿಗೆ ಪಿಎಸ್‌ಐ ಕಾರಿನ ಗ್ಲಾಸ್ ಒಡೆದಾಗ ಕೈಜಾರಿ ಕಾರಿನಲ್ಲಿ ಬಿದ್ದಿದೆ ಎಂದು ಸ್ಪಷ್ಟಪಡಿಸಿದರು.
ಖಾಜಾ ವಿರುದ್ಧ ಮಹಾರಾಷ್ಟç, ತೆಲಂಗಾಣ, ಕಲಬುರಗಿ ಸೇರಿ ವಿವಿಧ ಕಡೆಗಳಲ್ಲಿ ೨೮ ಕೇಸ್‌ಗಳು ದಾಖಲಾಗಿವೆ. ಜಿಲ್ಲೆಯಲ್ಲಿ ಮೂರು ಪ್ರಕರಣಳಿವೆ. ಪಿಸ್ತೂಲï ಅವನ ಹತ್ತಿರ ಇರುವುದರಿಂದ ಮಾತಕತೆ ನಡೆಸಿ, ಮನವೊಲಿಸಿ ಆತನನ್ನು ಮರದಿಂದ ಕೆಳಗೆ ಇಳಿಸಿz್ದೆÃವೆ ಎಂದರು.