ಚಿಕ್ಕನಾಯಕನಹಳ್ಳಿ: -ಪಟ್ಟಣದ ಪಿಎಲ್ಡಿ ಬ್ಯಾಂಕ್ನ ಕಿಟಕಿಯನ್ನು ಮುರಿದು ಕಳ್ಳತನಕ್ಕೆ ಯತ್ನಿಸಿರುವ ಘಟನೆ ಚಿ.ನಾ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಟ್ಟಣದ ಮದ್ಯಭಾಗ ಬಿ.ಎಚ್.ರಸ್ತೆಯಲ್ಲಿರವ ಪಿಎಲ್ಡಿ ಬ್ಯಾಂಕ್ಗೆ ಶುಕ್ರವಾರ ತಡರಾತ್ರಿ ಬ್ಯಾಂಕ್ ಕಟ್ಟಡದ ಕಿಟಕಿಯನ್ನು ಮುರಿದು ಕಳ್ಳರು ಒಳನುಗ್ಗಿದ್ದು ಬ್ಯಾಂಕ್ನಲ್ಲಿ ಯಾವುದೇ ನಗದು ಒಡವೆ ಇಲ್ಲದ ಕಾರಣ ಬ್ಯಾಂಕ್ನಲ್ಲಿ ಯಾವುದು ಕಳ್ಳತನವಾಗಿಲ್ಲವೆಂದು ತಿಳಿದು ಬಂದಿದ್ದು, ಸ್ಥಳಕ್ಕೆ ಜಿಲ್ಲೆಯ ಕ್ರೆೃಂ ವಿಭಾಗದ ಎಎಸ್ಪಿ ಪುರುಷೋತ್ತಮ್, ತಿಪಟೂರು ಡಿವೈಎಸ್ಪಿ ವಿನಾಯಕ ಶಟಗೇರಿ, ಸಿಪಿಐ ನದಾಫ್ ಸೇರಿ ಪೊಲೀಸ್ ತಂಡ, ಬೆಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.