ಪಿಎಲ್‌ಡಿ ಬ್ಯಾಂಕ್‌ಗೆ 26 ಲಕ್ಷ ರೂ. ಲಾಭ

Tkk pld
ತರಿಕೆರೆ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎ.ಎಂ.ಯೋಗೀಶ್, ಉಪಾಧ್ಯಕ್ಷ ಸಿ.ಎಚ್.ದಿವಾಕರಮೂರ್ತಿ ಅವರನ್ನು ನಿರ್ದೇಶಕ ಟಿ.ಎಲ್.ರಮೇಶ್ ಅಭಿನಂದಿಸಿದರು. ಕೆ.ಆರ್.ಆನಂದಪ್ಪ ಇತರರಿದ್ದರು.
Published on

ತರೀಕೆರೆ: ನಿಗದಿತ ಅವಧಿಯಲ್ಲಿ ರೈತರ ಸಾಲ ಮರುಪಾವತಿಯಾದ ಹಿನ್ನೆಲೆಯಲ್ಲಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ 20 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಎಲ್.ರಮೇಶ್ ತಿಳಿಸಿದರು.

ಪಟ್ಟಣದ ಪಿಎಲ್‌ಡಿ ಬ್ಯಾಂಕ್‌ನಲ್ಲಿ ಗುರುವಾರ ಅಧ್ಯಕ್ಷ ಎ.ಎಂ.ಯೋಗೀಶ್, ಉಪಾಧ್ಯಕ್ಷ ಸಿ.ಎಚ್.ದಿವಾಕರಮೂರ್ತಿ, ನಿರ್ದೇಶಕರನ್ನು ಅಭಿನಂದಿಸಿ ಮಾತನಾಡಿ, 20 ವರ್ಷಗಳಿಂದ ರೈತರು ಬಾಕಿ ಉಳಿದಿದ್ದ ಸಾಲ ರಾಜ್ಯ ಸರ್ಕಾರದ ಬಡ್ಡಿ ಮನ್ನಾ ನೀತಿಯಿಂದ ಮರು ಪಾವತಿಯಾಗಿ ಪಿಕಾರ್ಡ್ ಬ್ಯಾಂಕ್ ಲಾಭ ಗಳಿಸಿದೆ. ಈ ಯೋಜನೆಯ ಪ್ರಯೋಜನದಿಂದ ಕಳೆದ ಸಾಲಿನಲ್ಲಿ 3.50 ಕೋಟಿ ರೂ. ಹೊಸ ಸಾಲ ನೀಡಿದೆ. ಅದರಲ್ಲಿ 2.80 ಕೋಟಿ ರೂ. ಸಾಲ ಮರು ಪಾವತಿಯಾಗಿದೆ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಆರ್.ಆನಂದಪ್ಪ ಮಾತನಾಡಿ, ರೈತರ ಜೀವನಾಡಿಯಾಗಿರುವ ಪಿಎಲ್‌ಡಿ ಬ್ಯಾಂಕ್ ಸಹಕಾರ ಭಾರತಿ ನೇತೃತ್ವದಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಳೇ ನಿರ್ದೇಶಕರ ಜತೆ ಹೊಸ ನಿರ್ದೇಶಕರು ಸಹಕಾರ ನೀಡುವುದರ ಮೂಲಕ ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸಬೇಕು. ಹೊಸ ಆಡಳಿತ ಮಂಡಳಿ ಬ್ಯಾಂಕಿನ ಹೊಸ ಕಟ್ಟಡ ನಿರ್ಮಾಣಕ್ಕೆ ಒತ್ತು ನೀಡಬೇಕಿದೆ ಎಂದರು. ಬ್ಯಾಂಕಿನ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net