ಪಿಎಲ್‌ಡಿ ಬ್ಯಾಂಕ್‌ ಪ್ರಸಕ್ತ ವರ್ಷ ೧೦ ಕೋಟಿ ರೂ ಸಾಲ ವಿತರಣೆ ಗುರಿ

5 ckm 5
ಚಿಕ್ಕಮಗಳೂರಿನ ಪಿಸಿಎಲ್‌ಡಿ ಬ್ಯಾಂಕಿನ ಸಭಾಂಗಣದಲ್ಲಿ ಜಿಲ್ಲಾ ಸಲಹಾ ಸಮಿತಿ ಸಭೆ ನಡೆಯಿತು. ಇ.ಆರ್.ಮಹೇಶ್, ರಂಗನಾಥ್, ನಾಗರತ್ನ, ಎಚ್.ಎಸ್.ದಿನೇಶ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ರಾಜ್ಯದಲ್ಲೇ ಚಿಕ್ಕಮಗಳೂರು ಜಿಲ್ಲೆಯ ೮ ಪಿಸಿಎಲ್‌ಡಿ ಬ್ಯಾಂಕ್‌ಗಳು ಪ್ರಥಮ ಸಾಧನೆಗೈದು ಲಾಭದಾಯಕವಾಗಿ ನಡೆಯುತ್ತಿದ್ದು, ಈ ವರ್ಷ ೧೦ ಕೋಟಿ ರೂ. ಸಾಲ ವಿತರಿಸುವ ಗುರಿಹೊಂದಲಾಗಿದೆ ಎಂದು ಬ್ಯಾಂಕಿನ ಜಿಲ್ಲಾ ನಿರ್ದೇಶಕ ಇ.ಆರ್ ಮಹೇಶ್ ತಿಳಿಸಿದರು.

ನಗರದ ಪಿಸಿಎಲ್‌ಡಿ ಬ್ಯಾಂಕಿನ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಅವರು, ಜಿಲ್ಲೆಯಲ್ಲಿ ಶೇ. ೩ರ ಬಡ್ಡಿದರಲ್ಲಿ ಕಳೆದ ವರ್ಷ ರೈತರಿಗೆ ೪೦ ಕೋಟಿ ರೂ. ಸಾಲವನ್ನು ವಿತರಿಸಲಾಗಿದೆ. ಇದರಿಂದಾಗಿ ರಾಜ್ಯದಲ್ಲೇ ಅತೀ ಹೆಚ್ಚು ಸಾಲ ನೀಡಿದ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಚಿಕ್ಕಮಗಳೂರಿನ ಪಿಸಿಎಲ್‌ಡಿ ಬ್ಯಾಂಕ್ ಪಾತ್ರವಾಗಿದೆ ಎಂದು ಹೇಳಿದರು.

ರಾಜ್ಯಸರ್ಕಾರ ಘೋಷಣೆ ಮಾಡಿರುವ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲು ಆದೇಶ ಬಂದ ಬಳಿಕ ಐದು ಲಕ್ಷದವರೆಗೆ ಸಾಲ ಸೌಲಭ್ಯ ನೀಡಲಾಗುವುದು ಎಂದರು. ಶೇ.೩ ರ ಬಡ್ಡಿದರದಲ್ಲಿ ೧೫ ಲಕ್ಷ ರೂಗಳವರೆಗೆ ಸಾಲ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಪಿಸಿಎಲ್‌ಡಿ ಬ್ಯಾಂಕಿನ ಅಧ್ಯಕ್ಷ ಸಿ.ಎಸ್ ರಂಗನಾಥ್, ಜಿಲ್ಲೆಯ ವಿವಿಧ ಪಿಎಲ್‌ಡಿ ಬ್ಯಾಂಕ್‌ಗಳ ಅಧ್ಯಕ್ಷರುಗಳಾದ ನಾಗರತ್ನ, ಎಚ್.ಎಸ್. ದಿನೇಶ್, ದಿನೇಶ್ ಹೆಗ್ಡೆ, ಸುಂದರೇಶ್, ಯೋಗೀಶ್, ಪುಟ್ಟರಾಜ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net