ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ರಾಘವೇಂದ್ರ, ಉಪಾಧ್ಯಕ್ಷ ವಾಮದೇವ

JLR ph 2 Aug 7 PLD Bank Election
Published on

ಜಗಳೂರು: ತಾಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತದ ಅಧ್ಯಕ್ಷರಾಗಿ ಬಿದರಕೆರೆ ಎನ್. ರಾಘವೇಂದ್ರ, ಉಪಾಧ್ಯಕ್ಷರಾಗಿ ಗಡಿಮಾಕುಂಟೆ ಯು.ಜಿ. ವಾಮದೇವ ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬ್ಯಾಂಕಿನಲ್ಲಿ 14 ಜನ ನಿರ್ದೇಶಕರು, ಒಬ್ಬ ನಾಮನಿರ್ದೇಶಿತ ಸದಸ್ಯರು ಸೇರಿದಂತೆ ಒಟ್ಟು 15 ನಿರ್ದೇಶಕರನ್ನು ಹೊಂದಿದೆ. ಅಧ್ಯಕ್ಷ ಸ್ಥಾನಕ್ಕೆ ಬಿದರಕೆರೆ ಎನ್. ರಾಘವೇಂದ್ರ, ಉಪಾಧ್ಯಕ್ಷ ಸ್ಥಾನಕ್ಕೆ ಗಡಿಮಾಕುಂಟೆ ಯು.ಜಿ. ವಾಮದೇವ ತಲಾ ಒಂದೊಂದು ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿ ವಿ.ಹರೀಶ್‌ಕುಮಾರ್ ಅವಿರೋಧ ಆಯ್ಕೆ ಘೋಷಿಸಿದರು.
ಆಯ್ಕೆಯಾದ ಅಧ್ಯಕ್ಷರು-ಉಪಾಧ್ಯಕ್ಷರನ್ನು ಮುಖಂಡರಾದ ಸಿ. ತಿಪ್ಪೇಸ್ವಾಮಿ, ಜಿ.ಕೆ. ನಾಗರಾಜ್, ಎನ್.ಎಸ್ ರಾಜು, ಜೆ.ಎಸ್ ಮಲ್ಲಿಕಾರ್ಜುನ್ ಸೇರಿದಂತೆ ಇತರರು ಸನ್ಮಾನಿಸಿದರು.
ಪಿಎಲ್‌ಡಿ.ಬ್ಯಾಂಕಿನ ನಿರ್ದೇಶಕರಾದ ಕೆ.ಬಿ. ಸಿದ್ದೇಶ್, ಎನ್.ಎಂ. ಹಾಲಸ್ವಾಮಿ, ಬಿ.ಎಚ್. ನರೇಂದ್ರಬಾಬು, ಕೆ.ಬಿ.ಚೌಡಮ್ಮ, ಕೆ.ತಿಮ್ಮರಾಯಪ್ಪ, ಸಿ.ಟಿ.ರಾಘವೇಂದ್ರ, ಎಂ.ವಿ.ರಾಜ್, ಜೆ. ಶ್ರೀನಿವಾಸ್, ಎಂ.ಟಿ. ಧನಂಜಯರೆಡ್ಡಿ, ದ್ಯಾಮಕ್ಕ, ಜಿ.ಎಸ್. ವೀಣಾ, ಎಂ.ವಿ.ರಾಜ್, ಚಂದ್ರಪ್ಪ, ಬ್ಯಾಂಕಿನ ವ್ಯವಸ್ಥಾಪಕ ಟಿ.ಎನ್. ಭೂಷಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net