ಪಿಎಫ್ಐ ಸಂಘಟನೆ ಬ್ಯಾನ್, ಕೇಂದ್ರದ ನಿರ್ಧಾರ ಸ್ವಾಗತಿಸಿದ ಸಚಿವ ಸೋಮಣ್ಣ..

Published on

ಚಾಮರಾಜನಗರ: ಪಿಎಫ್ಐ ಸಂಘಟನೆ ಬ್ಯಾನ್ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದು ವಸತಿ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.

ನಗರದಲ್ಲಿ ಸುದ್ದಿಗಾರರೊದಿಗೆ ಮಾತನಾಡಿದ ಅವರು, ದುಷ್ಟ ಶಕ್ತಿಗಳು ಯಾವಾಗ್ಲೂ‌ ದುಷ್ಟ ಶಕ್ತಿಗಳೇ. ಚಾಮುಂಡಿಯನ್ನೂ ಏಕೆ ಆರಾಧನೆ ಮಾಡ್ತೀವಿ. ದುಷ್ಟರನ್ನು ಶಿಕ್ಷೆ ಮಾಡೋದು, ಶಿಷ್ಟರನ್ನು ರಕ್ಷಣೆ ಮಾಡೋದು. ಕಾಲ ಪಕ್ವವಾಗ್ತಿದೆ. ಯಾಂತ್ರಿಕ ಯುಗದತ್ತ ಹೆಜ್ಜೆ ಹಾಕ್ತಿದ್ದೀವಿ. ನಾವೆಲ್ಲಾ ಭಾರತೀಯರು, ಬದುಕುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಇನ್ನೊಬ್ಬರ ಪ್ರಾಣವನ್ನು ಕಿತ್ತುಕೊಳ್ಳುವುದು, ತಾತ್ಸಾರ ಮಾಡೋದು ಸರಿಯಲ್ಲ‌. ಇನ್ನೊಬ್ಬರ ಹಕ್ಕನ್ನು ಕಸಿಯುವುದು ಸರಿಯಲ್ಲ. ಬ್ಯಾನ್ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ನಾನು ಸ್ವಾಗತ ಮಾಡ್ತೀನಿ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net