ಪಿಎಫ್ಐ-ಎಸ್ ಡಿಪಿಐ ನಿಷೇಧಿಸಿ

shreeram sene
Published on

ಬೀದರ್: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಹಾಗೂ ಸೋಶಿಯಲ್ ಡೆಮಾಕ್ರೆಟಿಕ್ ಫ್ರಂಟ್ ಆಫ್ ಇಂಡಿಯಾ (ಎಸ್ ಡಿಪಿಐ) ಸಂಘಟನೆಗಳನ್ನು ನಿಷೇಸಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನೆ ಜಿಲ್ಲಾ ಘಟಕದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ದೇಶಕ್ಕೆ ದ್ರೋಹ ಎಸಗುವ ಕೆಲಸವನ್ನು ಎರಡು ಸಂಘಟನೆಗಳು ಮಾಡುತ್ತಿವೆ. ಸಿಎಎ, ಎನ್ಆರ್ಸಿ ಹೋರಾಟ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಿಂಸಾತ್ಮಕ ಗಲಭೆಗಳಲ್ಲಿ ಸಂಘಟನೆಗಳ ಪಾತ್ರ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶದ ಹಲವು ರಾಜ್ಯಗಳಲಿ ಹಿಂದು ಕಾರ್ಯಕರ್ತರ ಕೊಲೆ ಬಹುತೇಕ ಪಿಎಫ್ಐ, ಎಸ್ಡಿಪಿಐ ಸಂಘಟನೆಗಳದ್ದು ಎಂದು ರುಜುವಾತಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೂ ಸಂಚು ಪಿಎಫ್ಐ ಸಿದ್ಧಗೊಳಿಸಿದ್ದು ಬಿಹಾರದಲ್ಲಿ ಬಯಲಾಗಿದೆ. ಜಗತ್ತಿನ ಹಲವು ಮುಸ್ಲಿಂ ರಾಷ್ಟ್ರಗಳಿಂದ ಕೋಟ್ಯಂತರ ರೂ. ಈ ಎರಡು ಸಂಘಟನೆಗಳಿಗೆ ಹರಿದು ಬರುತ್ತಿದೆ. ಹೀಗಾಗಿ ದೇಶದ ಸುರಕ್ಷತೆ ಹಾಗೂ ಹಿಂದುಗಳ ಭದ್ರತೆ ನಿಟ್ಟಿನಲ್ಲಿ ಎರಡು ಸಂಘಟನೆಗಳನ್ನು ತಕ್ಷಣ ನಿಷೇಸಬೇಕು ಎಂದು ಆಗ್ರಹಿಸಿವೆ. ಬೇಡಿಕೆ ಸಂಬಂಧ ಮುಖ್ಯಮಂತ್ರಿ ಅವರಿಗೆ ಬರೆದ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿದರು.

ಜಿಲ್ಲಾಧ್ಯಕ್ಷ ವೀರಶೆಟ್ಟಿ ಖ್ಯಾಮಾ, ಡಾ.ವಿಶ್ವನಾಥ ಉಪ್ಪೆ, ಶಂಕರ ಖ್ಯಾಮಾ, ಆಕಾಶ ಕೋಡಗೆ, ವಿನೋದ, ಶಿವಕುಮಾರ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net