ಪಿಎಚ್‌ಸಿಗೆ ಮೆಡಿಕಲ್ ಕಿಟ್ ಕೊಡುಗೆ

bhr miedical kit
ಬಾಳೆಹೊನ್ನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಎನ್.ಆರ್.ಪುರದ ಜಿನಿ ವಿಶ್ವನಾಥ್ ಸೇವಾ ಕೇಂದ್ರದಿಂದ ಇಸಿಜಿ ಯಂತ್ರ ಹಾಗೂ ವಿವಿಧ ಪರಿಕರಗಳನ್ನು ಕೊಡುಗೆಯಾಗಿ ನೀಡಲಾಯಿತು. ಸಾಜು, ಭಾಸ್ಕರ್ ವೆನಿಲ್ಲಾ, ಡಾ. ಅಭ್ಯುದಯ, ಮನು, ವಿಕಾಸ್, ರಾಘವೇಂದ್ರ, ಭಗವಾನ್ ಇತರರಿದ್ದರು.
Published on

ಬಾಳೆಹೊನ್ನೂರು: ಎನ್.ಆರ್.ಪುರದ ಜಿನಿ ವಿಶ್ವನಾಥ್ ಸೇವಾ ಕೇಂದ್ರದಿಂದ ಶೃಂಗೇರಿ ಕ್ಷೇತ್ರಾದ್ಯಂತ ವಿವಿಧ ಸಾಮಾಜಿಕ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದು ಸದಸ್ಯ ಸಾಜು ಹೇಳಿದರು.

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿನಿ ವಿಶ್ವನಾಥ್ ಸೇವಾ ಕೇಂದ್ರದಿಂದ ಹೈಟೆಕ್ ಇಸಿಜಿ ಯಂತ್ರ ಹಾಗೂ ವಿವಿಧ ಪರಿಕರಗಳನ್ನು ಹಸ್ತಾಂತರಿಸಿ ಮಾತನಾಡಿದರು. ಕೆಲ ದಿನಗಳ ಹಿಂದೆ ಆರಂಭಗೊಂಡ ಜಿನಿವಿ ಸೇವಾ ಕೇಂದ್ರ ಹಲವು ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಿದ್ದು, ಆರೋಗ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡುತ್ತಿದೆ. ಎನ್.ಆರ್.ಪುರ ತಾಲೂಕಿನ ಆರು ಸರ್ಕಾರಿ ಆಸ್ಪತ್ರೆಗಳಿಗೆ ಅತ್ಯುನ್ನತ ಸೌಲಭ್ಯಗಳನ್ನು ಹೊಂದಿರುವ ಪ್ರಾಥಮಿಕ ಚಿಕಿತ್ಸಾ ಕಿಟ್‌ಗಳನ್ನು ನೀಡಲಾಗಿದೆ. ಇದರಲ್ಲಿ 17ಕ್ಕೂ ಅಧಿಕ ಪರಿಕರಗಳು ಇವೆ ಎಂದರು.

ಸೇವಾ ಕೇಂದ್ರದಿಂದ ನೀಡುವ ಸೌಲಭ್ಯಗಳು ಅರ್ಹರಿಗೆ ಪಾರದರ್ಶಕವಾಗಿ ತಲುಪಬೇಕಿದ್ದು, ಇದಕ್ಕಾಗಿ ಪ್ರತಿಯೊಬ್ಬರ ಸಹಕಾರವೂ ಅಗತ್ಯವಾಗಿ ಬೇಕಿದೆ. ಮುಂದಿನ ದಿನಗಳಲ್ಲಿ ಜಿನಿವಿ ಸೇವಾ ಕೇಂದ್ರದಿಂದ ಎರಡು ತಿಂಗಳಿಗೊಮ್ಮೆ ಜನಸಂಪರ್ಕ ಸಭೆ ನಡೆಸಲಿದ್ದು, ಇಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಅವುಗಳಿಗೆ ಪರಿಹಾರ ಒದಗಿಸುವ ಯೋಜನೆ ರೂಪಿಸಲಾಗಿದೆ ಎಂದರು.

ಕಾಫಿ ಮಂಡಳಿ ಸದಸ್ಯ ಭಾಸ್ಕರ್ ವೆನಿಲ್ಲಾ ಮಾತನಾಡಿ, ಉದ್ಯಮಿ ಗದ್ದೆಮನೆ ವಿಶ್ವನಾಥ್ ಅವರು ಸೇವಾ ಮನೋಭಾವ ಹೊಂದಿ ಕಾರ್ಯನಿರ್ವಹಿಸುತ್ತಿದ್ದು, ಪ್ರಮುಖವಾಗಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಆರೋಗ್ಯ ಕೇಂದ್ರದ ವೈದ್ಯ ಅಭ್ಯುದಯ ಮಾತನಾಡಿ, ಗದ್ದೆಮನೆ ವಿಶ್ವನಾಥ್ ಅವರು ಜನರ ಮನೆ ಬಾಗಿಲಿಗೆ ತೆರಳಿ ಸಾಮಾಜಿಕ ಸೇವೆ ನೀಡುತ್ತಿರುವುದು ಶ್ಲಾಘನೀಯ. ಇಂಥ ಸೇವಾ ಭಾವನೆ ಬಂದಾಗ ಮಾತ್ರ ಸಮಾಜ ಮುಂದುವರಿಯಲು ಸಾಧ್ಯ ಎಂದರು.

ಜಿನಿ ವಿಶ್ವನಾಥ್ ಸೇವಾ ಕೇಂದ್ರದ ಮನು, ವಿಕಾಸ್, ರಾಘವೇಂದ್ರ ಹಂಚಿನಮನೆ, ಹಿರಿಯ ಆರೋಗ್ಯ ನಿರೀಕ್ಷಕ ಭಗವಾನ್, ಪ್ರಮುಖರಾದ ಡಿ.ಎನ್.ಸುಧಾಕರ್, ಶಿವರಾಮ ಶೆಟ್ಟಿ, ಮಂಜು ಹೊಳೆಬಾಗಿಲು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net