ಪಿಎಂಕೆಎಸ್‌ವೈಯಡಿ‘ಭದ್ರಾ’ಅನುದಾನ ಬಿಡುಗಡೆಗೆ ಕೋರಿಕೆ

CTD 5 BADRA--04
Published on

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯಡಿ ಕೆರೆಗಳ ಭರ್ತಿಗೆ ಮೊದಲ ಆದ್ಯತೆ ನೀಡುವಂತೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಅಧಿಕಾರಿ ಗಳಿಗೆ ತಾಕೀತು ಮಾಡಿದರು. ಜಿಪಂದಲ್ಲಿ ಶನಿವಾರ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಕೆರೆ ಗಳು ತುಂಬಿದರೆ ಹೆಚ್ಚಿನ ಜನರಿಗೆ ಅನುಕೂಲವಾಗಲಿದೆ.

ಆದ್ದರಿಂದ ಚಿತ್ರದುರ್ಗ,ದಾವಣಗೆರೆ,ಚಿಕ್ಕಮಗಳೂರು ಹಾಗೂ ತುಮಕೂರು ಜಿಲ್ಲೆಗಳ ವ್ಯಾಪ್ತಿಯ 367 ಕೆರೆಗಳನ್ನು ತುಂಬಿಸುವುದಕ್ಕೆ ಕ್ರಮ ಕೈ ಗೊಳ್ಳಬೇಕು. ಇದಕ್ಕೆ ಸಂಬಂಧಿಸಿದ ಕಾಮಗಾರಿಗಳ ಅನುಷ್ಠಾನಕ್ಕೆ ಅನುದಾನ ಬಳಸಿಕೊಂಡು,ನಂತರದಲ್ಲಿ ಹನಿ ನೀರಾವರಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳ ಬೇಕೆಂದರು.

ಯೋಜನೆಗೆ ಕೇಂದ್ರದ ಬಜೆಟ್‌ನಲ್ಲಿ ಹನಿ ನೀರಾವರಿಗೆ ಹಾಗೂ ಕೆರೆಗಳನ್ನು ತುಂಬಿಸಲು 5300 ಕೋಟಿ ರೂ.ಅನುದಾನವನ್ನು ಇಡಲಾಗಿದೆ. ಇ ದು ರಾಷ್ಟ್ರೀಯ ಯೋಜನೆ ಎಂದು ಕೇಂದ್ರ ಘೋಷಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆದಿದೆ. ಘೋಷಣೆ ಆಗುವುದು ವಿಳಂಬವಾದರೆ ಲೋಕಸಭೆ ಚುನಾವಣೆ ಎದುರಾಗ ಬಹುದೆಂದು ಆತಂಕ ವ್ಯಕ್ತಪಡಿಸಿದ ಸಚಿವರು,ಅನುದಾನಕ್ಕೆ ಇರುವ ತೊಡಕನ್ನು ಮೊದಲು ನಿವಾರಿಸಿಕೊಳ್ಳ ಬೇಕಿದೆ.
ಇದಕ್ಕಾಗಿ ಕೇಂದ್ರದ ಶೇ.60-ರಾಜ್ಯದ ಶೇ.40 ಅನುಪಾತದಡಿ ಕೇಂದ್ರ ಪಾಲು ಪಡೆಯಲು ರಾಜ್ಯಸರ್ಕಾರ,ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ(ಎಐಬಿಪಿ)ಯಡಿಅನುದಾನ ಬಿಡುಗಡೆಗೆ ಕೇಂದ್ರವನ್ನು ಶೀಘ್ರ ಕೋರುವ ನಿಟ್ಟಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಶೀಘ್ರ ಸಭೆ ನಡೆಸ ನಡೆಸಬೇಕೆಂದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಮಾತನಾಡಿ,ಯೋಜನೆ ಕಾಮಗಾರಿಗಳ ಪ್ರಗತಿ ಕುರಿತಂತೆ ನಾನು ಶಾಸಕರು,ಅಧಿಕಾರಿಗ
ಳೊಂದಿಗೆ ಪರಿಶೀಲನೆ ಮಾಡಿದ್ದೇನೆ. ಕಾಮಗಾರಿಗಳ ಅನುಷ್ಠಾನಕ್ಕೆ ಇರುವ ತೊಡಕುಗಳ ಮಾಹಿತಿ ಪಡೆಯಲಾಗಿದೆ ಎಂದರು. ಫಾರೆಸ್ಟ್ ಕ್ಲಿಯ ರೆನ್ಸ್‌ನ್ನು ರಾಜ್ಯಸರ್ಕಾರವೇ ಮಾಡಬಹುದು. ಅರಣ್ಯಕಾಯ್ದೆಗೆ ಕೇಂದ್ರ ತಿದ್ದುಪಡಿ ತಂದಿರುವುದರಿಂದ ಮುತ್ತಿನಕೊಪ್ಪದ ಬಳಿಯ ಸಮಸ್ಯೆ ಬಗೆಹರಿಯಲಿದೆ. ಅಬ್ಬಿನಹೊಳೆ ಸಮೀಪದ ಭೂ ಸ್ವಾಧೀನ ಸಮಸ್ಯೆಯನ್ನು ಎಲ್ಲರೂ ಕುಳಿತು ಬಗೆ ಹರಿಸಬೇಕಿದೆ ಎಂದರು.
ಯೋಜನೆ ಸಿಇ ಶಿವಪ್ರಕಾಶ್ ಅವರು ಮಾತನಾಡಿ,ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ 17. 4 ಟಿ.ಎಂ.ಸಿ ನೀರನ್ನು ಜೂನ್ 15ರಿಂದ ಅಕ್ಟೋಬರ್ 15ರವರೆಗೆ ಲಿಫ್ಟ್ ಮಾಡಲು ಅವಕಾಶವಿದೆ ಎಂದರು. ಡಿಸಿ ಜಿಆರ್‌ಜೆ ದಿವ್ಯಾಪ್ರಭು,ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಎಸಿ ಎಂ.ಕಾರ್ತಿಕ್ ಮತ್ತಿತರ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net