ಪಿಎಂ ಸ್ವನಿಧಿ ಫಲಾನುಭವಿಗಳಿಗೆ ಶೀಘ್ರದಲ್ಲೇ ಪ್ರಧಾನಿಯಿಂದ ಪತ್ರ

CTD 3 PM SWANIDI--02
Published on

ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಅವರು ಫಲಾನುಭವಿಗಳನ್ನುದ್ದೇಶಿಸಿ ಬರೆಯುವ ಪತ್ರ ಹಾಗೂ ಫಲಾನುಭವಿಗಳ ಪರಿಚಯ ಪತ್ರ, ಶೀಘ್ರದಲ್ಲೇ ಪಿಎಂ ಸ್ವ ನಿಧಿ ಫಲಾನುಭವಿಗಳಿಗೆ ತಲುಪಲಿವೆ ಎಂದು ಪಿಎಂ ಸ್ವನಿಧಿ ಯೋಜನೆ ಅನುಷ್ಠಾನದ ರಾಜ್ಯಸಂಚಾಲಕ, ಮಾಜಿ ಸಚಿವ ಎಸ್.ಎ.ರಾಮದಾಸ್ ಹೇಳಿದರು.
ಬಿಜೆಪಿ ಜಿಲ್ಲಾ ಘಟಕ ನಗರದ ಜಗಳೂರು ಮಹಾಲಿಂಗಪ್ಪ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪಿಎಂ ಸ್ವ ನಿಧಿ ಹಾಗೂ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಕುರಿತ ಕಾರ‌್ಯಾಗಾರದಲ್ಲಿ ಮಾತನಾಡಿದ ಅವರು, ಫಲಾನುಭವಿಗಳಿಗೆ ಪ್ರಧಾನಿ ಭಾವಚಿತ್ರ, ಅವರ ಸಹಿ ಹಾಗೂ ಫಲಾನುಭವಿಗಳು ಭಾವಚಿತ್ರವಿರುವ ಪರಿಚಯ ಪತ್ರ ಬರಲಿದೆ.
ಅದು ತಮ್ಮ ವ್ಯಾಪಾರಕ್ಕೆ ಪರವಾನಗಿ ಇದ್ದಂತೆ. ಯೋಜನೆಗೆ ಬೀದಿ ಬದಿ ವ್ಯಾಪಾರಿಗಳೊಂದಿಗೆ ಪತ್ರಿಕಾವಿತರಕರು, ಹಾಲು ಮಾರಾಟ ಗಾರರು, ಕ್ಯಾಟರಿಂಗ್ ಇತ್ಯಾದಿ ವೃತ್ತಿಗಳಲ್ಲಿ ಇರುವರನ್ನು ಸೇರಿಸಲಾಗಿದೆ. ಕರ್ನಾಟಕದ ಕೋರಿಕೆ ಮನ್ನಿಸಿ ಇತರೆ ವೃತ್ತಿಗಳನ್ನು ಕೇಂದ್ರ ದೇಶ ದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿಗೊಳಿಸಿದೆ. ಸ್ವನಿಧಿ ಫಲಾನುಭವಿಗಳ ಮಕ್ಕಳ ಶಿಕ್ಷಣಕ್ಕಾಗಿ ಕುಟುಂಬದ ವಿವರವನ್ನು ಕೇಂದ್ರ ಸಂಗ್ರಹಿಸಲಿದೆ. ಹಳ್ಳಿಯಲ್ಲಿ ವಾಸವಿದ್ದು, ಪಟ್ಟಣ ಪ್ರದೇಶದಲ್ಲಿ ವೃತ್ತಿಯಲ್ಲಿರುವಂಥವರು ಯೋಜನೆ ಲಾಭ ಸಿಗಲಿದೆ.
ಫಲಾನುಭವಿಗಳಿಗೆ ವಿಮಾ ಸೌಲಭ್ಯ ಹಾಗೂ 60 ವರ್ಷ ದಾಟಿದವರಿಗೆ ಮಾಸಿಕ 3 ಸಾವಿರ ರೂ. ಪಿಂಚಣಿ ಸಿಗಲಿದೆ. ದೇಶದಲ್ಲಿ 42.86 ಲಕ್ಷ ಜನರಿಗೆ ಏಕಕಾಲಕ್ಕೆ 9 ಸಾವಿರ ಕೋಟಿ ರೂ.ಆರ್ಥಿಕ ನೆರವು ನೀಡಿದೆ. ಈ ನೆರವು ವಿತರಣೆ ವೇಳೆ ಕೇಂದ್ರಕ್ಕೆ ಕಾಣದ ಸರ್ವರ್ ಸಮಸ್ಯೆ, ರಾಜ್ಯಸರ್ಕಾರವನ್ನು ಪದೆ ಪದೇ ಕಾಡುತ್ತಿದೆ ಎಂದು ವ್ಯಂಗವಾಡಿದರು. ಪ್ರತಿ ಬುಧವಾರ ಬ್ಯಾಂಕ್‌ಗಳಲ್ಲಿ ಸಾಲ ಮೇಳ ನಡೆಯ ಲಿದೆ ಎಂದು ಪಿಎಂ ಸ್ವನಿಧಿ ಯೋಜನೆ ವಿವರಿಸಿದರು.
ಪ್ರಧಾನಿ ಜನ್ಮ ದಿನದ ಅಂಗವಾಗಿ ಕಳೆದ ಸೆಪ್ಟೆಂಬರ್ 18 ರಂದು ಪಿಎಂ ವಿಶ್ವಕರ್ಮ ಯೋಜನೆ ಜಾರಿಯಾಗಿದೆ. ಇದರಲ್ಲಿ 18 ವಿವಿಧ ವರ್ಗಗಳ ಕಸುಬುದಾರರು ಸಾಲ ಪಡೆಯಬಹುದಾಗಿದೆ. ಪ್ರಧಾನಿ ಡಿಜಿಟಲ್ ಇಂಡಿಯಾಕ್ಕೆ ಒತ್ತು ನೀಡಿದ್ದಾರೆ ಎಂದರು.
ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಜನಧನ್ ಖಾತೆ ಪರಿಚಯಿಸಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ. ದೇಶವಿಂದು ವಿಶ್ವ ಗುರುವಿನ ಸ್ಥಾನದಲ್ಲಿದೆ ಎಂದಾದರೆ ಅದಕ್ಕೆ ಮೋದಿ ಅವರ ದಕ್ಷ ಆಡಳಿತ ಕಾರಣವಾಗಿದೆ. ಈ ಬಾರಿ ಲೋಕಸಭೆಯಲ್ಲಿ ಬಿಜೆಪಿ ಗೆಲ್ಲ ದಿದ್ದರೆ ಭಾರತ ಅಭಿವೃದ್ಧಿಯಲ್ಲಿ ಹಿನ್ನಡೆ ಕಾಣಲಿದೆ ಅಮೆರಿಕ ಸೆನೆಟ್ ಸದಸ್ಯರೊಬ್ಬರು ಹೇಳಿದ್ದಾರೆ. 350 ಅಧಿಕ ಸೀಟು ಗಳೊಂದಿಗೆ ಕೇಂ ದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ನುಡಿದಂತೆ ಕೃಷಿಗೆ ವಿದ್ಯುತ್ ಜನರಿಗೆ ಅಕ್ಕಿಯನ್ನು ಕೊ ಡಲಾಗದ ರಾಜ್ಯಸರ್ಕಾರ ನಡೆ ಖಂಡಿಸಿದರು.
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ನೆ.ಲ.ನರೇಂದ್ರಬಾಬು, ಪಕ್ಷದ ಜಿಲ್ಲಾಧ್ಯಕ್ಷ ಎ.ಮುರುಳಿ, ಬಾಳೆಕಾಯಿ ರಾ ಮದಾಸ್, ಶಿವಣ್ಣಾಚಾರ್, ಮಾಧುರಿಗಿರಿ, ಅಲ್ಲಂಸೀತಾಂರೆಡ್ಡಿ, ವೆಂಕಟೇಶ್‌ಯಾದವ್, ನರೇಂದ್ರಹೊನ್ಯಾಳ್, ನವೀನ್‌ಚಾಲುಕ್ಯ, ವಿಶ್ವ ನಾಥ್, ಲಕ್ಷ್ಮೀಕಾಂತ್, ಸಿದ್ದೇಶ್, ಕಲ್ಲೇಶಯ್ಯ ಇತರರು ಇದ್ದರು. ಸಂಪತ್‌ಕುಮಾರ್ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net