ಪಿಎಂ ವಿಶ್ವಕರ್ಮ ಯೋಜನೆ ಜಾರಿಗೆ ತಂದ ಪ್ರಧಾನಿಗೆ ಅಭಿನಂದನೆ

ಪಿಎಂ ವಿಶ್ವಕರ್ಮ ಯೋಜನೆ ಜಾರಿಗೆ ತಂದ ಪ್ರಧಾನಿಗೆ ಅಭಿನಂದನೆ
Published on

 ಹಾಸನ : ವಿಶ್ವಕರ್ಮ ಯೋಜನೆಯನ್ನು ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶ್ವಕರ್ಮ ಬಾಂಧವರು ಹಾಗೂ ಜಿಲ್ಲಾ ವಿಶ್ವಕರ್ಮ ಬೆಳ್ಳಿ ಕೆಲಸಗಾರರ ಸಂಘ ಅಭಿನಂದನೆ ಸಲ್ಲಿಸುತ್ತದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ರಾಘವಾಚಾರ್ ತಿಳಿಸಿದರು.
ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ವಿಶ್ವಕರ್ಮ ಜಯಂತಿಯಂದು ಕರಕುಶಲ ಮತ್ತು ಕುಶಲಕರ್ಮಿಗಳಿಗೆ ವರದಾನವಾಗುವ ಪಿಎಂ ವಿಶ್ವಕರ್ಮ ಯೋಜನೆ ಜಾರಿಗೊಳಿಸುತ್ತಿರುವುದು ಅತ್ಯಂತ ಮಹತ್ವದ ಬೆಳವಣಿಗೆಯಾಗಿದೆ. ಈ ಯೋಜನೆ ನಮ್ಮ ಸಮುದಾಯದ ಬೆಳವಣಿಗೆ ಅತ್ಯಂತ ಮಹತ್ವದ್ದಾಗಿದೆ. ಸಮುದಾಯದ ಬೆಂಬಲಕ್ಕೆ ಪ್ರಧಾನಿ ನಿಂತಿರುವುದು ಶ್ಲಾಘನೀಯ. ತಮ್ಮ ಬೆಂಬಲ ಇದೆ ರೀತಿ ಮುಂದುವರಿಯಲಿ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಶಿಸಿದರು.
ಸ್ವಾತಂತ್ರೃ ಬಂದು 75 ವರ್ಷಗಳ ನಂತರ ವಿಶ್ವಕರ್ಮ ಎಂಬ ಹೆಸರನ್ನು ಇಡೀ ದೇಶಕ್ಕೆ ವ್ಯಾಪಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ರೈತರು ದೇಶದ ಬೆನ್ನೆಲುಬು. ಅದೇ ರೀತಿ ವಿಶ್ವಕರ್ಮ ಸಮುದಾಯ ರೈತರ ಬೆನ್ನೆಲುಬಾಗಿ ಅವರಿಗೆ ಅಗತ್ಯ ಇರುವ ಸಲಕರಣೆಗಳನ್ನು ಮಾಡಿ ಕೊಡುವ ಮೂಲಕ ಕೆಲಸ ಮಾಡುತ್ತಿದೆ. ಹೀಗಾಗಿ ಸಮುದಾಯದ ಶ್ರಮಕ್ಕೆ ಪಿಎಂ ವಿಶ್ವಕರ್ಮ ಯೋಜನೆ ಉತ್ತಮ ಮನ್ನಣೆ ನೀಡಿದಂತೆ ಆಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮುದಾಯದ ಮುಖಂಡರಾದ ಜಿ.ಕುಮಾರ್, ಆರ್.ನಾಗೇಶ್, ವೆಂಕಟೇಶರಾಜು, ರಾಘವೇಂದ್ರ ಸೇರಿದಂತೆ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net