ಪಿಎಂ ನರೇಂದ್ರ ಮೋದಿ ಆಡಳಿತ ಜನರಿಗೆ ಮೆಚ್ಚುಗೆ

sri bjppp
ಶೃಂಗೇರಿ ಕುರುಬಕೇರಿ ಸರ್ಕಲ್‌ನಲ್ಲಿ ಬಿಜೆಪಿ ಮಂಡಲದಿಂದ ಸಂಭ್ರಮಾಚರಿಸಿದರು. ಉಮೇಶ್, ಎಚ್.ಎಸ್.ಸುಬ್ರಮಣ್ಯ, ಶ್ರೀಧರ್‌ರಾವ್, ಮಂಜುನಾಥ್ ಪಂಡಿತ್, ರಾಜೇಶ್ ಇತರರಿದ್ದರು.
Published on

ಶೃಂಗೇರಿ: ದೆಹಲಿ ವಿಧಾನಸಭೆ ಹಾಗೂ ಮ್ಯಾಮ್ಕೋಸ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಶನಿವಾರ ಬಿಜೆಪಿ ಮಂಡಲದಿಂದ ಕುರುಬಕೇರಿ ಸರ್ಕಲ್‌ನಲ್ಲಿ ಸಂಭ್ರಮಾಚರಿಸಲಾಯಿತು.

ಬಿಜೆಪಿ ಮಂಡಲ ಅಧ್ಯಕ್ಷ ತಲಗಾರು ಉಮೇಶ್ ಮಾತನಾಡಿ, ದೆಹಲಿಯಲ್ಲಿ 27 ವರ್ಷಗಳ ಬಳಿಕ ಬಿಜೆಪಿ ಗೆಲುವು ಸಾಧಿಸಿ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಮೂಡಿಸಿದೆ. ಆಮ್ ಆದ್ಮಿ ಪಕ್ಷ ಜನರ ಮನಸ್ಸು ಅರ್ಥೈಸಿಕೊಳ್ಳದೆ ಅದರದೇ ಮಾರ್ಗದಲ್ಲಿ ನಡೆದ ಕಾರಣಕ್ಕೆ ದೆಹಲಿ ಜನತೆ ತಕ್ಕ ಉತ್ತರ ನೀಡಿದ್ದಾರೆ. ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಜನಸಾಮಾನ್ಯರು ಮೆಚ್ಚಿಕೊಂಡಿದ್ದಾರೆ. ಬಿಜೆಪಿ ಚುಕ್ಕಾಣಿ ಹಿಡಿದ ರಾಜ್ಯದಲ್ಲಿ ನುಡಿದಂತೆ ನಡೆದು ಅಭಿವೃದ್ಧಿ ಕಾರ್ಯ ಮಾಡುತ್ತಿದ್ದು, ಮುಂಬರುವ ಎಲ್ಲ ಚುನಾವಣೆಗಳಲ್ಲೂ ಪಕ್ಷ ಗೆಲುವು ಸಾಧಿಸಲಿದೆ ಎಂದರು.

ನರೇಂದ್ರ ಮೋದಿ ಅವರನ್ನು ನಿರಂತರ ಟೀಕೆ ಮಾಡುತ್ತಿದ್ದ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕ್ರೇಜಿವಾಲ್ ಅವರ ವಿಚಾರಗಳು ಆಚರಣೆಗೆ ಬಾರದೆ ಇದ್ದ ಕಾರಣ ಜನರು ಮೋದಿ ನಾಯಕತ್ವವನ್ನು ಒಪ್ಪಿಕೊಂಡು ಬಿಜೆಪಿಯನ್ನು ಮುನ್ನಡೆಸಿದ್ದಾರೆ ಎಂದರು.

ಪಪಂ ಸದಸ್ಯ ಹರೀಶ್ ವಿ. ಶೆಟ್ಟಿ ಮಾತನಾಡಿ, ಸಾಧನೆಗೆ ಶ್ರದ್ಧೆ ಬಹಳಮುಖ್ಯ ಎಂಬುದನ್ನು ತೋರಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಚಿಂತನೆಗಳು ನಿರಂತರ ಸಕಾರಾತ್ಮಕವಾಗಿವೆ. ಹಾಗಾಗಿ ಕೇಂದ್ರ ಸರ್ಕಾರದ ಯೋಜನೆಗಳು ಸಮಾಜದ ಕಟ್ಟಕಡೆ ಜನರನ್ನು ತಲುಪಿವೆ. ಕಾಂಗ್ರೆಸ್ ಹತಾಶೆಯಲ್ಲಿ ಕಾಲಹರಣ ಮಾಡುತ್ತಿದೆ. ಬಿಜೆಪಿ ನಾಯಕರನ್ನು ನಿಂದನೆ ಮಾಡುವುದು ಅವರ ಗುರಿ. ತಾಲೂಕಿನಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ರೈತರ ಹಾಗೂ ಜನಸಾಮಾನ್ಯರ ಆಶಯಗಳಿಗೆ ಸ್ಪಂದಿಸದ ಕಾಂಗ್ರೆಸ್ ಮುಂದಿನ ಎಲ್ಲ ಚುನಾವಣೆಗಳಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತದೆ ಎಂದರು.

ಬಿಜೆಪಿ ಬೆಂಬಲಿತ ಸಹಕಾರಭಾರತಿ ಹತ್ತೊಂಬತ್ತು ಸದಸ್ಯರು ಮ್ಯಾಮ್ಕೋಸ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ತಾಪಂ, ಜಿಪಂ ಚುನಾವಣೆಯನ್ನು ಮಾಡದ ಕಾಂಗ್ರೆಸ್ ಸರ್ಕಾರ ಹತಾಶೆಯಲ್ಲಿದೆ ಎಂದರು. ಮ್ಯಾಮ್ಕೋಸ್ ನೂತನ ನಿರ್ದೇಶಕ ಅಂಬ್ಲೂರು ಸುರೇಶ್ಚಂದ್ರ, ಕೆ.ಎಂ.ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು.

ಮಂಡಲದ ಪ್ರಧಾನಕಾರ್ಯದರ್ಶಿಗಳಾದ ಎಚ್.ಎಸ್.ವೇಣುಗೋಪಾಲ್, ನೂತನ್‌ಕುಮಾರ್, ವಕ್ತಾರ ದಿನೇಶ್ ಅಂಗುರ್ಡಿ, ತಾಲೂಕು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಮೇಗಳಬೈಲು ರಾಜೇಶ್, ಬಿಜೆಪಿ ಮುಖಂಡರಾದ ಚೇತನ್ ಹೆಗಡೆ, ನಾಗೇಶ್ ಕಾಮತ್, ಕೆ.ಎಸ್.ರಮೇಶ್, ಮಂಜುನಾಥ್, ಡಿ.ಸಿ.ಶಂಕರಪ್ಪ, ಜಿ.ವಿ.ಮೋಹನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net