ಪಿಎಂ ಕಿಸಾನ್ ಯೋಜನೆಯಲ್ಲಿ ಅನರ್ಹರನ್ನು ಗುರುತಿಸಿ ವರದಿ ನೀಡಿ ; ಆಡಳಿತಾಧಿಕಾರಿ ರಾಜಸುಲೋಚನಾ ಸೂಚನೆ

30 cnh TP meeting
Published on

ಚಿಕ್ಕನಾಯಕನಹಳ್ಳಿ : ಪ್ರಧಾನಮಂತ್ರಿ ಕಿಸಾನ್ ಯೋಜನೆಯಲ್ಲಿ ಕೆಲವು ತೆರಿಗೆದಾರರು, ನೌಕರರು ಫಲಾನುಭವಿಗಳಾಗಿದ್ದು, ಅನರ್ಹರನ್ನು ಗುರುತಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಎಂ.ಎನ್.ರಾಜಸುಲೋಚನಾ ತಿಳಿಸಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಸಾವಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ವಾತನಾಡಿದ ಅವರು, ಸರ್ಕಾರದ ಹಲವು ಯೋಜನೆಗಳಲ್ಲಿ ಅನರ್ಹರೇ ಹೆಚ್ಚಾಗಿ ಲಾನುಭವಿಗಳಾಗುತ್ತಿರುವುದು ವಿಷಾದದ ಸಂಗತಿಯಾಗಿದೆ. ರೈತರಿಗಾಗಿ ಇರುವ ಪಿಎಂ ಕಿಸಾನ್ ಯೋಜನೆಯಲ್ಲಿ ಅನರ್ಹರೇ ಸೌಲಭ್ಯ ಪಡೆಯುತ್ತಿದ್ದು, ಎಪಿಎಲ್ ಪಡಿತರ ಚೀಟಿ ಹೊಂದಿರುವ ಅನರ್ಹರನ್ನು ಗುರುತಿಸಿ ಪಟ್ಟಿ ನೀಡಬೇಕೆಂದು ತಿಳಿಸಿದರು.

ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ ಶೇ. 69.61 ಪಠ್ಯ ಪುಸ್ತಕಗಳು ಸರಬರಾಜಾಗಿವೆ. ಈ ಬಗ್ಗೆ ಯಾವ ಕ್ರಮಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಸಂಗಮೇಶ್, ಕರೊನಾ ಹಿನ್ನೆಲೆಯಲ್ಲಿ ಶಾಲೆಗಳ ಪ್ರಾರಂಭ ತಡವಾಗಿದ್ದರಿಂದ ಈ ರೀತಿಯಾಗಿದೆ. ಮಕ್ಕಳಿಗೆ ತೊಂದರೆಯಾಗದಂತೆ ಪ್ರತಿ ಶಾಲೆಯಲ್ಲೂ ಬುಕ್‌ಬ್ಯಾಂಕ್ ಸ್ಥಾಪಿಸಿ ಹಳೆಯ ಪಠ್ಯಪುಸ್ತಕಗಳನ್ನು ವಿತರಿಸುವ ಕೆಲಸ ವಾಡಲಾಗುತ್ತಿದೆ ಎಂದರು.

ತಾಲೂಕಿನಲ್ಲಿ ಗಂಗಾಕಲ್ಯಾಣ ಯೋಜನೆಯಡಿ ಎಸ್‌ಸಿ ಹಾಗೂ ಎಸ್‌ಟಿ ಜನಾಂಗದ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ನೀಡಿರುವ ಗ್ಗೆ ವಾಹಿತಿ ಪಡೆದ ಆಡಳಿತಾಧಿಕಾರಿ, ಸವಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಹಾಸ್ಟೆಲ್‌ಗಳಲ್ಲಿ ಎಸ್‌ಎಸ್‌ಎಲ್‌ಸಿ ನಂತರ ವಿದ್ಯಾಭ್ಯಾಸ ವಾಡುತ್ತಿರುವ ವಿದ್ಯಾರ್ಥಿಗಳಿಗೆ ರೈತ ವಿದ್ಯಾಸಿರಿ ಯೋಜನೆಯಡಿ ವಿದ್ಯಾರ್ಥಿ ವೇತನ ಪಡೆಯಲು ಅವಕಾಶವಿದ್ದು, ಅದರ ಅದರ ಸದುಪಯೋಗಪಡೆಯಬೇಕೆಂದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಗಳು ಆಗುತ್ತಿಲ್ಲ, ಈ ಬಗ್ಗೆಯಾವ ಕ್ರಮಕೈಗೊಂಡಿದ್ದೀರಿ ಎಂದು ರಾಜಸುಲೋಚನ ಪ್ರಶ್ನಿಸಿದಾಗ ಉತ್ತರಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ.ನವೀನ್, ಈ ಹಿಂದೆ ಅರಿವಳಿಕೆ ತಜ್ಞರು ಇಲ್ಲದಕಾರಣ ಕೆಲವೊಂದು ಸಿಸೇರಿಯನ್ ಪ್ರಕರಣಗಳು ಹೊರಗಡೆ ಹೋಗುತ್ತಿದ್ದವು. ಆದರೆ ಈಗ ಎಲ್ಲ ವ್ಯವಸ್ಥೆ ಸರ್ಕಾರಿ ಆಸ್ಪತ್ರೆಯಲ್ಲಿದ್ದು ಹೆರಿಗೆ ಪ್ರಮಾಣ ಹೆಚ್ಚಾಗಿವೆ ಎಂದರು.

ಸಭೆಯಲ್ಲಿ ಬೆಸ್ಕಾಂ ಇಲಾಖೆಯ ಎಇಇ ರಾಜಶೇಖರ್, ಸವಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ರೇಣುಕಾದೇವಿ, ಪಶುಇಲಾಖೆಯ ಸಹಾಯಕ ನಿರ್ದೇಶಕ ರೆ.ಮ.ನಾಗಭೂಷಣ್, ವಾರ್ಡ್‌ನ್ ಶಿವರಾಜು, ಸಿಡಿಪಿಒ ತಿಪ್ಪಯ್ಯ ಮತ್ತಿತರರು ಇದ್ದರು.

ಕಾಮಗಾರಿ ಪ್ರಾರಂಭಿಸಿ : ಮನರೇಗಾ ಯೋಜನೆಯಲ್ಲಿ ಶೆಟ್ಟಿಕೆರೆ ಹೋಬಳಿಯ ಯೋಗವಾಧವನಗರ, ಹಂದನಕೆರೆ ಹೋಬಳಿಯ ಗುಂಗುರಬಾಗಿ ಗ್ರಾಮಗಳಲ್ಲಿ ಅಂಗನವಾಡಿ ಕಟ್ಟಡ ನಿರ್ವಾಣಕ್ಕೆ 2020-21ನೇ ಸಾಲಿನಲ್ಲಿ ಅನುದಾನ ಮಂಜೂರಾಗಿದ್ದರೂ ಕಟ್ಟಡ ಪ್ರಾರಂಭಿಸಿಲ್ಲ ಎಂದು ರಾಜಸುಲೋಚನಾ ಕೇಳಿದಾಗ, ಇಒ ವಸಂತ್‌ಕುವಾರ್ ಸ್ಪಂದಿಸಿ, ಗ್ರಾಪಂ ಅಧಿಕಾರಿಗಳಿಗೆ ನೋಟಿಸ್ ನೀಡಿ ಕೂಡಲೇ ಕಟ್ಟಡದ ನಿರ್ವಾಣಕ್ಕೆ ಅಗತ್ಯ ಕ್ರಮಕೈಗೊಳ್ಳುವಂತೆ ತಿಳಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net