

ಚಾಮರಾಜನಗರ: ನಿರುದ್ಯೋಗ ಯುವಕ, ಯುವತಿಯರು ಸ್ವಯಂಉದ್ಯೋಗ ಆರಂಭಿಸಲು ಸಾಲದ ಮೇಲೆ ಸಬ್ಸಿಡಿ ನೀಡುವ ಮೂಲಕ ಪ್ರೋತ್ಸಾಹಿಸುವುದೇ ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆಯ(ಪಿಎಂಇಜಿಪಿ) ಮುಖ್ಯ ಉದ್ದೇಶ ಎಂದು ಖಾದಿ ಮತ್ತು ಗ್ರಾಮೀಣ ಕೈಗಾರಿಕೆ ಉಪನಿರ್ದೇಶಕ ಕೆ.ಎ.ರಾಜೇಂದ್ರ ಪ್ರಸಾದ್ ಹೇಳಿದರು.
ನಗರದ ಸಿಡಿಎಸ್ ಭವನದಲ್ಲಿ ಶ್ರೀಗಂಗಾ ಚಾರಿಟಬಲ್ ಟ್ರಸ್ಟ್ ಹಾಗೂ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಸಹಯೋಗದಲ್ಲಿ ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆ (ಪಿಎಂಇಜಿಪಿ) ಕುರಿತು ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸುಜನ ಯೋಜನೆಯಡಿ ಯಾವುದೇ ಜಾತಿ, ಧರ್ಮ ಭೇದವಿಲ್ಲದೆ ಎಸ್ಸಿ/ಎಸ್ಟಿ, ಒಬಿಸಿ ಹಾಗೂ ಸಾಮಾನ್ಯರು ಸೇರಿದಂತೆ ಎ್ಲ ವರ್ಗದವರು ಈ ಯೋಜನೆಯಡಿಯಲ್ಲಿ ಸಾಲಸೌಲಭ್ಯ ಪಡೆಯಬಹುದು. ಇದರ ಸದುಪಯೋಗ ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ಸಲಹೆ ನೀಡಿದರು.
ಶ್ರೀಗಂಗಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ರಾಜ್ ಕಾಮಯ್ಯ, ಕಾರ್ಯದರ್ಶಿ ದಿವ್ಯಶ್ರೀ, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಸೆಂದಿಲ್ ಕುಮಾರ್, ರಾಮಸ್ವಾಮಿ, ನಿವೃತ್ತ ಸೈನಿಕ ಗಂಗಾಧರ್, ಸ್ಟೇಟ್ ಬ್ಯಾಂಕ್ ಆ್ ಇಂಡಿಯಾ ವ್ಯವಸ್ಥಾಪಕ ವೆಂಟಕರಾವ್, ಲೀಡ್ ಬ್ಯಾಂಕ್‌ನ ಸುರೇಖಾ ಮತ್ತು ಇತರರಿದ್ದರು.