ಪಿಂಜಾರ ಸಮುದಾಯ ಕಡೆಗಣನೆ

Published on

ಕೊಪ್ಪಳ: ಪಿಂಜಾರ/ನದ್​ಾ ಸಮುದಾಯ ಹಿಂದುಳಿದಿದ್ದು ಪ್ರತ್ಯೇಕ ನಿಗಮ ಘೋಷಿಸಿದರೂ ಸರ್ಕಾರ ಅನುದಾನ ನೀಡಿ ಅಸ್ತಿತ್ವಕ್ಕೆ ತರುತ್ತಿಲ್ಲವೆಂದು ರಾಜ್ಯ ನದ್​ಾ/ಪಿಂಜಾರ ಸಂದ ಜಿಲ್ಲಾಧ್ಯಕ್ಷ ಕಾಸಿಂಸಾಬ್​ ಮುದ್ದಾಬಳ್ಳಿ ಆರೋಪಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಸರ್ಕಾರ ಎರಡು ವರ್ಷಗಳ ಹಿಂದೆ ಹಿಂದುಳಿದ ವರ್ಗಗಳ ಪ್ರವರ್ಗ 1ರ ನದಾಫ್​/ಪಿಂಜಾರ ಹಾಗೂ ಇತರ 13 ಜಾತಿಗಳ ಅಭಿವೃದ್ಧಿ ನಿಗಮ ಸ್ಥಾಪಿಸಿ ಆದೇಶಿಸಿದೆ. ಆದರೆ, ಈವರೆಗೆ ಅನುಷ್ಠಾನಕ್ಕೆ ತಂದಿಲ್ಲ. ಸಮುದಾಯ ಅಭಿವೃದ್ಧಿಗೆ ಅನುದಾನವನ್ನೂ ನೀಡುತ್ತಿಲ್ಲ. ಈ ಬಜೆಟ್​ನಲ್ಲೂ ನಯಾ ಪೈಸೆ ಅನುದಾನ ನೀಡಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಬಜೆಟ್​ಗೂ ಮುನ್ನ ಅನುದಾನ ಕಲ್ಪಿಸುವಂತೆ ಹಿಂದುಳಿದ ವರ್ಗಗಳ ಸಂಘಟನೆಗಳ ಪ್ರಮುಖರೊಡಗೂಡಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದೇವೆ. ವಿವಿಧ ಸಚಿವರಿಗೂ ಮನವಿ ಮಾಡಿಕೊಂಡಿದ್ದೇವೆ. ನಮ್ಮ ಸಮುದಾಯ ಶೈಕ್ಷಣಿಕ, ರಾಜಕೀಯ, ಸಾಮಾಜಿಕವಾಗಿ ಹಿಂದುಳಿದಿದೆ. ಸರ್ವರಿಗೂ ಸಮಪಾಲು&ಸಮಬಾಳು ಎಂದು ಸರ್ಕಾರ ಹೇಳುತ್ತದೆ. ಆದರೆ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.

ಕೊಪ್ಪಳ ತಾಲೂಕು ಅಧ್ಯಕ್ಷ ಅಸ್ಮಾನಸಾಬ್​ ನದಾಫ್​, ರಾಜ್ಯ ಕಾರ್ಯದರ್ಶಿ ಶಾಬುದ್ದೀನ್​ ನೂರ್​ಬಾಷಾ, ಪದಾಧಿಕಾರಿ ಅಲ್ಲಾಸಾಬ್​ ಗೊಂದಿಹೊಸಳ್ಳಿ ಮತ್ತು ಜಿಲ್ಲಾ ಗೌರವಾಧ್ಯಕ್ಷ ಹೊನ್ನೂರಸಾಬ್​ ಬೈರಾಪುರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net