ಪಿಂಚಣಿದಾರರಿಗೆ ಸನ್ಮಾನ ಫೆ. 12ರಂದು

Published on

ಹುಬ್ಬಳ್ಳಿ: ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಪಿಂಚಣಿದಾರರ ಪ್ರಾದೇಶಿಕ ಸಮಿತಿ (ಹುಬ್ಬಳ್ಳಿ) ಯ ಸರ್ವ ಸದಸ್ಯರ ಸಭೆ ಹಾಗೂ 80 ವರ್ಷಗಳನ್ನು ಪೂರೈಸಿದ ಪಿಂಚಣಿದಾರರ ಸನ್ಮಾನ ಕಾರ್ಯಕ್ರಮ ಫೆ. 12ರಂದು ಬೆಳಗ್ಗೆ 10 ಗಂಟೆಗೆ ಗೋಪನಕೊಪ್ಪದಲ್ಲಿನ ಕವಿಪ್ರನಿ ನೌಕರರ ಸಂಘದ ಸಭಾಭವನದಲ್ಲಿ ಆಯೋಜಿಸಲಾಗಿದೆ.

ಹೆಸ್ಕಾಂ ಅಧ್ಯಕ್ಷ ಸೈಯದ್ ಆಜೀಮಪೀರ್ ಖಾದ್ರಿ ಉದ್ಘಾಟಿಸುವರು. ಸಂಘದ ರಾಜ್ಯಾಧ್ಯಕ್ಷ ಬಿ.ಪಿ. ಕುಮಾರಸ್ವಾಮಿ ಅಧ್ಯಕ್ಷತೆ ವಹಿಸುವರು. ಹೆಸ್ಕಾಂ ಎಂಡಿ ವೈಶಾಲಿ ಎಂ.ಎಲ್., ಸಂಘದ ಮಾಜಿ ಅಧ್ಯಕ್ಷ ಎಸ್.ಡಿ. ಉಕ್ಕಲಿ, ಹೆಸ್ಕಾಂ ತಾಂತ್ರಿಕ ನಿರ್ದೇಶಕ ಎಸ್. ಜಗದೀಶ, ಹಣಕಾಸು ನಿರ್ದೇಶಕ ಪ್ರಕಾಶ ಪಾಟೀಲ, ಪ್ರಧಾನ ವ್ಯವಸ್ಥಾಪಕ ವಿನಾಯಕ ಪಾಲನಕರ, ಇತರರು ಪಾಲ್ಗೊಳ್ಳುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net