ಪಿಂಚಣಿ ಹೆಚ್ಚಳ ಸಹಿತ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹ

CTD 30 TIPPESWAMI--003
Published on

ಚಿತ್ರದುರ್ಗ: ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನಕ್ಕೆ ಒತ್ತಾಯಿಸಿ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಕಾ ರ್ಮಿಕರು ಮಂಗಳವಾರ ನಗರದ ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಕಾರ್ಮಿಕರ ಕಲ್ಯಾಣ ಮಂಡಳಿ ಶೈಕ್ಷಣಿಕ ಸಹಾಯಧನ ಕೂಡಲೇ ಮಂಜೂರು ಮಾಡಬೇಕು. 2022-23ನೇ ಸಾಲಿನ ಈ ನೆರವನ್ನು ಸರ್ಕಾರ ಈವರೆಗೂ ಮಂಜೂರು ಮಾಡದೆ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ನೆರವು ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಕಾರ್ಮಿಕರ ಮಕ್ಕಳ ಮದುವೆ ಸಹಾಯಧನವನ್ನು ಒಂದು ಲಕ್ಷ ರೂ.ಗೆ ಹೆಚ್ಚಿಸಬೇಕು. ಹೆರಿಗೆ ಬಳಿಕ ಮಗುವಿನ ಪೋಷಣೆಗೆ,ಬಾಂಡ್ ನೊಂದಿಗೆ ಪ್ರತ್ಯೇಕವಾಗಿ ತಾಯಿಗೆ 60 ಸಾವಿರ ರೂ.ನೆರವು ನೀಡಬೇಕು. ಪಿಂಚಣಿ ಮೊತ್ತವನ್ನು 5 ಸಾವಿರ ರೂ.ಗೆ ಹೆಚ್ಚಿಸಬೇಕು. ಕಾರ್ಮಿ ಕರು ಸಹಜವಾಗಿ ಮೃತಪಟ್ಟರೆ ಅವರ ನೊಂದ ಕುಟುಂಬಕ್ಕೆ ಕೊಡುವ ಧನಸಹಾಯದ ಮೊತ್ತವನ್ನು 2 ಲಕ್ಷ ರೂ.ಗೆ ಹಾಗೂ ಅವಘಡದಲ್ಲಿ ಕಾರ್ಮಿಕ ಮೃತಪಟ್ಟರೆ ಅವರ ನೊಂದ ಕುಟುಂಬಕ್ಕೆ 10 ಲಕ್ಷ ರೂ.ನೆರವು ನೀಡುವಂತೆ ಆಗ್ರಹಿಸಿದರು.
ಇಎಸ್‌ಐ ಸೌಲಭ್ಯ,ಚಿತ್ರದುರ್ಗ ತಾಲೂಕು ಕೇಂದ್ರದಲ್ಲಿ ಕಾರ್ಮಿಕರ ಕಾಲನಿ ನಿರ್ಮಾಣ ಮಾಡುವುದು ಸೇರಿದಂತೆ ನಾನಾ ಬೇಡಿಕೆ ಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ,ರಾಜಣ್ಣಕಾಮನಬಾವಿ,ನಾಗ ರಾಜು, ಜಾವೀದ್‌ಬಾಷಾ,ಟಿ.ಬಸವರಾಜು, ಪಿ.ಲಕ್ಷ್ಮೀದೇವಿ,ತಿಪ್ಪೇಸ್ವಾಮಿ, ಮನ್ಸೂರ್‌ಬಾಷಾ,ಟಿ.ಅಶೋಕ್,ಎಚ್.ರಮೇಶ್,ರಾಜು,ಬಿ.ನಾಗೇಶ್,ರಮೇಶ್,ಪಿ.ಈರೇಶ್, ಸುರೇಶ್, ನಾಗಭೂಷಣ,ಡಿ.ಲಕ್ಷ್ಮಣ್,ಅಂಜಿನಪ್ಪ, ಎಂ.ತಿಪ್ಪೇಸ್ವಾಮಿ,ಚಳ್ಳಕೇರಪ್ಪ, ಹನುಮಂತಪ್ಪ, ಜೆ.ಎಂ.ರಾಜು ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net