ಪಿಂಚಣಿ ವಿತರಣೆ ವಿಳಂಬ ಖಂಡಿಸಿ ಪ್ರತಿಭಟನೆ

ಹೊಳೆನರಸೀಪುರದ ಅಂಚೆ ಕಚೇರಿ ಆವರಣದಲ್ಲಿ ತಾಲೂಕಿನ ಸಿಂಗಾಪುರ ಅಂಚೆ ವ್ಯಾಪ್ತಿಯ 16 ಕ್ಕೂ ಹೆಚ್ಚು ಗ್ರಾಮಗಳ ವೃದ್ಧರು, ಅಂಗವಿಕಲ ಪಿಂಚಣಿದಾರರು ಹಾಗೂ ಇತರರು ಪಿಂಚಣಿ ವಿತರಣೆಯಲ್ಲಿ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು. ಪುಟ್ಟಮ್ಮ, ಚಂದ್ರಮ್ಮ, ಜಯಮ್ಮ, ಉಲಿವಾಲದ ಮಂಜುಮ್ಮ, ಸಾವಿತ್ರಮ್ಮ, ಈಡಿಗನ ಹೊಸೂರಿನ ಸಣ್ಣಮ್ಮ, ಗೌರಮ್ಮ, ಗುಂಜೇವು ಲಕ್ಷ್ಮಮ್ಮ, ರತ್ನಮ್ಮ ಇತರರು ಇದ್ದರು.
ಹೊಳೆನರಸೀಪುರದ ಅಂಚೆ ಕಚೇರಿ ಆವರಣದಲ್ಲಿ ತಾಲೂಕಿನ ಸಿಂಗಾಪುರ ಅಂಚೆ ವ್ಯಾಪ್ತಿಯ 16 ಕ್ಕೂ ಹೆಚ್ಚು ಗ್ರಾಮಗಳ ವೃದ್ಧರು, ಅಂಗವಿಕಲ ಪಿಂಚಣಿದಾರರು ಹಾಗೂ ಇತರರು ಪಿಂಚಣಿ ವಿತರಣೆಯಲ್ಲಿ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು. ಪುಟ್ಟಮ್ಮ, ಚಂದ್ರಮ್ಮ, ಜಯಮ್ಮ, ಉಲಿವಾಲದ ಮಂಜುಮ್ಮ, ಸಾವಿತ್ರಮ್ಮ, ಈಡಿಗನ ಹೊಸೂರಿನ ಸಣ್ಣಮ್ಮ, ಗೌರಮ್ಮ, ಗುಂಜೇವು ಲಕ್ಷ್ಮಮ್ಮ, ರತ್ನಮ್ಮ ಇತರರು ಇದ್ದರು.
Published on

ಹೊಳೆನರಸೀಪುರ: ತಾಲೂಕಿನ ಅಂಚೆ ವ್ಯಾಪ್ತಿಯ ಗ್ರಾಮಗಳ ವೃದ್ಧರು, ಅಂಗವಿಕಲರು, ಪಿಂಚಣಿದಾರರು ಹಾಗೂ ಇತರರು ಪಿಂಚಣಿ ಹಣ ವಿತರಣೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದು, ಹಣ ಪಡೆಯಲು ಹೋದರೆ ಹಣ ಇಲ್ಲವೆಂದು ವಾಪಸ್ ಕಳುಹಿಸುತ್ತಾರೆ ಎಂದು ಆರೋಪಿಸಿ, ಪಟ್ಟಣದ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ತಾಲೂಕಿನ ಸಿಂಗಾಪುರ ಅಂಚೆ ಕಚೇರಿ ವ್ಯಾಪ್ತಿಗೆ ಸಿಂಗಾಪುರ, ಈಡಿಗನಹೊಸೂರು, ಗುಂಜೇವು, ಮಾರನಾಯಕನಹಳ್ಳಿ, ಸೋಮನಹಳ್ಳಿ, ಜಕ್ಕವಳ್ಳಿ, ಜಕ್ಕವಳ್ಳಿಕೊಪ್ಪಲು, ಅಡಿಕೆಕೆರೆಹೊಸೂರು, ಉಲಿವಾಲ, ಉಲಿವಾಲಕೊಪ್ಪಲು, ಒಳಂಬಿಗೆ, ಮೂಳೆಕಾಳೇನಹಳ್ಳಿ, ಹಂಗರಹೊಸೂರು ಲಕ್ಷಿಪುರ ಹಾಗೂ ತಾಲೂಕಿನ ಇತರೆ ಗ್ರಾಮಗಳು ಒಳಪಡುತ್ತವೆ. ಪ್ರತಿದಿನ ಪಟ್ಟಣದ ಅಂಚೆ ಇಲಾಖೆಯಿಂದ ಒಂದರಿಂದ ಎರಡು ಲಕ್ಷ ರೂ.ಗಳನ್ನು ಮಾತ್ರ ಪಿಂಚಣಿದಾರರಿಗೆ ವಿತರಣೆ ಮಾಡಲು ಕಳುಹಿಸುತ್ತಾರೆ. ಆದರೆ ಸಿಂಗಾಪುರ ಅಂಚೆ ವ್ಯಾಪಿಗೆ 16 ಕ್ಕೂ ಹೆಚ್ಚು ಹಳ್ಳಿಗಳು ಒಳಪಡುತ್ತದೆ. 5-6 ಕಿ.ಮಿ. ದೂರದ ಈಡಿಗನಹೊಸೂರು, ಮಾರನಾಯಕನಹಳ್ಳಿ ಗುಂಜೇವು, ಅಡಿಕೆಕೆ ೆಹೊಸೂರು ಹಾಗೂ ಇತರೆ ಗ್ರಾಮದ ವೃದ್ಧರು ಪಿಂಚಣಿ ಪಡೆಯಲು ನಡೆದುಕೊಂಡು ಬರುವಷ್ಟರಲ್ಲಿ ಹಣ ಕೊಟ್ಟಾಗಿರುತ್ತದೆ. ಇದರಿಂದ ಇಳಿ ವಯಸ್ಸಿನಲ್ಲಿ ನಡೆದು ನಡೆದು ಸಾಕಾಗಿ ಹೋಗಿದೆ ಎಂದು ಹಿರಿಯ ನಾಗರಿಕರು ಬೇಸರ ವ್ಯಕ್ತ ಪಡಿಸಿದರು.

ಸಿಂಗಾಪುರ ಗ್ರಾಮಸ್ಥ ರಘು ಮಾತನಾಡಿ, ಗ್ರಾಮಗಳಿಗೆ ಅಂಚೆ ಪಾಲಕರ ಮೂಲಕ ಪಿಂಚಣಿ ಹಣ ವಿತರಣೆ ಮಾಡುತ್ತಿದ್ದ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಕೆಲವು ತಿಂಗಳ ಹಿಂದೆ ಅಂಚೆ ಇಲಾಖೆ ಬ್ಯಾಂಕಿಂಗ್ ವ್ಯವಸ್ಥೆ ಪ್ರಾರಂಭಿಸಿದ ನಂತರ ಸಿಂಗಾಪುರದಲ್ಲಿ ಒಂದು ಅಂಚೆ ಕಚೇರಿ ತೆರೆದು ಅಲ್ಲಿ ಹಣ ವಿತರಣೆ ಮಾಡುತ್ತಾರೆ. ಪಿಂಚಣಿದಾರರು ಸಿಂಗಾಪುರಕ್ಕೆ ಅಗತ್ಯ ಬಸ್ ವ್ಯವಸ್ಥೆ ಇಲ್ಲದ ಕಾರಣ ದೂರದ ಗ್ರಾಮಗಳಿಂದ ನಡೆದು ಬರುತ್ತಾರೆ. ತಿಂಡಿ ತಿನ್ನದೇ ನಡೆದು ಬರುವ ಗ್ರಾಮಸ್ಥರು ಹಣವಿಲ್ಲ ಎಂದಾಗ ಅವರ ಗೋಳನ್ನು ಕಂಡಾಗ ಬಹಳ ಬೇಸರವಾಗುತ್ತದೆ. ಆದ್ದರಿಂದ ಗ್ರಾಮೀಣ ಪ್ರದೇಶದ ಪಿಂಚಣಿದಾರರು ಅನಿವಾರ್ಯವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.

ಹೊಳೆನರಸೀಪುರ ಅಂಚೆ ಇಲಾಖೆಯ ಅಂಚೆ ಉಪ ನಿರೀಕ್ಷಕ ಮಹೇಶ್ ಮಾತನಾಡಿ, ನಮ್ಮ ಕಚೇರಿ ವ್ಯಾಪ್ತಿಯಲ್ಲಿ 18 ಕಚೇರಿಗಳು ಇದ್ದು, ಸಿಂಗಾಪುರ ಕಚೇರಿ ವ್ಯಾಪ್ತಿಯಲ್ಲಿ ಹೆಚ್ಚು ಹಳ್ಳಿಗಳು ಬರುತ್ತವೆ. ಇಂದಿನಿಂದ ಪ್ರತಿನಿತ್ಯ ಅಂಚೆ ಇಲಾಖೆಗೆ ಮೂರು ಲಕ್ಷ ರೂ. ಕಳುಹಿಸಿಕೊಡುತ್ತೇನೆ. ಮುಂದಿನ ದಿನಗಳಲ್ಲಿ ಸಮಸ್ಯೆ ಇರುವುದಿಲ್ಲ ಎಂದು ಭರವಸೆ ನೀಡಿದ ಬಳಿಕ ಪಿಂಚಣಿದಾರರು ಪ್ರತಿಭಟನೆ ಕೈ ಬಿಟ್ಟರು.

ಪ್ರತಿಭಟನೆಯಲ್ಲಿ ಮಾರನಾಯಕನಹಳ್ಳಿಯ ಪುಟ್ಟಮ್ಮ, ಚಂದ್ರಮ್ಮ, ಜಯಮ್ಮ, ಉಲಿವಾಲದ ಮಂಜುಮ್ಮ, ಸಾವಿತ್ರಮ್ಮ, ಈಡಿಗನಹೊಸೂರಿನ ಸಣ್ಣಮ್ಮ, ಗೌರಮ್ಮ, ಗುಂಜೇವು ಲಕ್ಷ್ಮಮ್ಮ, ರತ್ನಮ್ಮ, ಮೂಳೆಕಾಳೇನಹಳ್ಳಿಯ ಚನ್ನಬಸಪ್ಪ, ಸಿಂಗಾಪುರದ ಪರಮೇಶ, ರಾಮಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net