

ರಿಪ್ಪನ್‌ಪೇಟೆ: ಪಟ್ಟಣದ ನಾಡಕಚೇರಿಯಲ್ಲಿ ಕೆರೆಹಳ್ಳಿ ಹೋಬಳಿ ಕೇಂದ್ರ ವ್ಯಾಪ್ತಿಯ ಪಿಂಚಣಿ ಅದಾಲತ್ ನಡೆಯಿತು. ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಸಾಮಾಜಿಕ ಭದ್ರತಾ ಯೋಜನೆಗಳಾದ ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ವಿಧವಾ, ಅಂಗವಿಕಲ, ಮೈತ್ರಿ, ಮನಸ್ವಿನಿ, ಅಂತ್ಯಕ್ರಿಯೆ, ಆದರ್ಶ ವಿವಾಹ, ಆಮ್ ಆದ್ಮಿ ಬಿಮಾ ಮತ್ತು ರಾಷ್ಟ್ರೀಯ ಕುಟುಂಬ ಪರಿಹಾರ ಯೋಜನೆಗಳಿಗೆ ಅರ್ಹ ಫಲಾನುಭವಿಗಳಿಂದ ಅಹವಾಲುಗಳನ್ನು ಸ್ವೀಕರಿಸಿ, ಅಕಾರಿಗಳು ವಿಲೇವಾರಿಗೆ ಕ್ರಮ ಕೈಗೊಂಡರು. ಉಪತಹಸೀಲ್ದಾರ್ ಗೌತಮ್, ಕಂದಾಯ ನಿರೀಕ್ಷಕ ಅ್ರೆೆಜ್ ಅಹಮದ್, ಗ್ರಾಮಾಡಳಿತ ಅಕಾರಿಗಳಾದ ಜಾಕೀರ್ ಹುಸೇನ್, ಮಂಜುನಾಥ ಇತರರಿದ್ದರು.