ಪಿ.ಎಲ್.ಡಿ ಬ್ಯಾಂಕ್ ರೈತರಿಗೆ ವರದಾನ

08-6
ಪಿಎಲ್‌ಡಿ ಬ್ಯಾಂಕ್‌ನ ಮಹಾಸಭೆಯಲ್ಲಿ ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಮಾತನಾಡಿದರು. ಅಧ್ಯಕ್ಷ ಶ್ರೀಶೈಲ ಯಡಳ್ಳಿ, ಉಪಾಧ್ಯಕ್ಷ ಜಗದೀಶ ಬಜೇರಿ, ಉಮೇಶ ಪಾಟೀಲ ಇತರರು ಇದ್ದರು.
Published on

ಬೈಲಹೊಂಗಲ, ಬೆಳಗಾವಿ: ಶತಮಾನಗಳಿಂದ ಪಿಎಲ್‌ಡಿ ಬ್ಯಾಂಕಗಳು ಗ್ರಾಮೀಣ ರೈತರ ಜೀವನಾಡಿಯಾಗಿ ಅತೀ ಕಡಿಮೆ ಬಡ್ಡಿದರದಲ್ಲಿ ಸಾಲ ವಿತರಿಸಿ ರೈತರ ಸರ್ವಾಂಗೀಣ ಪ್ರಗತಿಗೆ ಶ್ರಮಿಸುತ್ತವೆ. ಇವುಗಳ ಲಾಭ ಪಡೆದು ಸಾಲ ಮರುಪಾವತಿಸಿ ಬ್ಯಾಂಕ್ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಹೇಳಿದರು.

ಪಟ್ಟಣದ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ 61ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಬ್ಯಾಂಕ್‌ನ ಮಂಡಳಿ ಯುವಕರಿಂದ ತುಂಬಿದ್ದು, ನಿಸ್ವಾರ್ಥದಿಂದ ರೈತರ ಸೇವೆ ಮಾಡಿ ಪ್ರಸಕ್ತ ಸಾಲಿನಲ್ಲಿ 64.71 ಲಕ್ಷ ರೂ. ಲಾಭ ಗಳಿಸಿದ್ದು ಉತ್ತಮ ಸಾಧನೆಯಾಗಿದೆ ಎಂದರು.

ಬ್ಯಾಂಕ್ ಅಧ್ಯಕ್ಷ ಶ್ರೀಶೈಲ ಯಡಳ್ಳಿ ವರದಿ ಓದಿ, ಬ್ಯಾಂಕ್ 8902 ಅ ವರ್ಗದ ಸದಸ್ಯರಿಂದ 130.80 ಲಕ್ಷ ರೂ. ಷೇರು, ರಾಜ್ಯ ಬ್ಯಾಂಕ್‌ನ ಸಾಲ 900.93 ಲಕ್ಷ ರೂ., ಬರತಕ್ಕ ಸಾಲ 718.12 ಲಕ್ಷ ರೂ., ಪ್ರಸಕ್ತ ವಿವಿಧ ಯೋಜನೆಗಳಲ್ಲಿ 224.80 ಲಕ್ಷ ರೂ. ಸಾಲ ನೀಡಿ, 234.86 ಲಕ್ಷ ರೂ. ವಸೂಲಿ ಮಾಡಿದ್ದು, ಬರಬೇಕಾದ ಸಾಲ 708.06 ಲಕ್ಷಗಳಷ್ಟಿದೆ. ಶೇ. 75.19ರಷ್ಟು ವಸೂಲಾತಿ ಸಾಧನೆ ಮಾಡಿ, 175.09 ಲಕ್ಷ ರೂ.ಗಳಷ್ಟು ಕೂಡಿ ಬಿದ್ದ ಹಾನಿ ಮುಂದುವರಿದಿದ್ದು ಸುಸ್ತಿ ಬಾಕಿದಾರರು ಕಂತುಗಳನ್ನು ಮರುಪಾವತಿಸಿ ಬ್ಯಾಂಕ್‌ನ್ನು ಲಾಭದಲ್ಲಿರಿಸಿ, ಡಿವಿಡೆಂಟ್ ಹಂಚಲು ಸಹಕಾರ ಮಾಡಬೇಕೆಂದರು. ನಿರ್ದೇಶಕ ಉಮೇಶ ಪಾಟೀಲ ಮಾತನಾಡಿ, ಸರ್ಕಾರ ಅತಿವೃಷ್ಟಿ, ಕರೊನಾದಿಂದ ಸಾಲಗಾರರು ಸುಸ್ತಿ ಅಸಲು ತುಂಬಿದರೆ ಸಂಪೂರ್ಣ ಬಡ್ಡಿ ಮನ್ನಾ ಯೋಜನೆ ತಂದಿದೆ. ಶೇ. 90ರಷ್ಟು ರೈತರು ಇದರ ಲಾಭ ಪಡೆದಿದ್ದಾರೆ. ಇನ್ನ್ನುಳಿದವರು ಸಹಕರಿಸಲು ತಿಳಿಸಿದರು.

ಉಪಾಧ್ಯಕ್ಷ ಜಗದೀಶ ಬಜೇರಿ, ಮ್ಯಾನೇಜರ್ ಎಂ.ಟಿ. ಗಾಣಿಗೇರ, ನಿರ್ದೇಶಕರಾದ ಉಮೇಶ ಪಾಟೀಲ, ಶಂಕರಕುಮಾರ ಚಿಟ್ಟಿ, ಅಕ್ಷರ ಆನಿಕಿವಿ, ರುದ್ರಗೌಡ ಪಾಟೀಲ, ಪರ್ವತಗೌಡ ಪಾಟೀಲ, ಮಾಲತಿ ಪಾಟೀಲ, ಯಲ್ಲಪ್ಪ ಕೌಜಲಗಿ, ರತ್ನವ್ವ ಧಾರವಾಡ, ಲಕ್ಷ್ಮಪ್ಪ ಮಾಸ್ತಮರ್ಡಿ, ಗಂಗಾಧರ ಹೊಂಡದ, ಆನಂದ ಮೂಗಿ, ಸದಸ್ಯರಾದ ರಾಚಪ್ಪ ಮಟ್ಟಿ, ದುಂಡಪ್ಪ ಮೆಳವಂಕಿ, ಶ್ರೀಶೈಲ ಗೊರವರ, ಶಂಕರೆಪ್ಪ ತುರಮರಿ, ಅಶೋಕ ಮೆಟಗುಡ್ಡ, ಎಂ.ವಿ.ನೆಲ್ಲಿಗಣಿ, ಅಶೋಕ ಹುದ್ದಾರ, ಬಸಪ್ಪ ಗರ್ಜೂರ, ಶಿವನಗೌಡ ಪಾಟೀಲ, ಬಸವರಾಜ ಧಾರವಾಡ, ಬಾಬುಸಾಬ ಸುತಗಟ್ಟಿ, ಸತೀಶ ಹಣಮಶೇಟ, ಗಂಗಾಧರ ಹೊಂಡದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net