ಪಾವಗಡದಲ್ಲಿ ಮೂವರು ಬೈಕ್​ ಕಳ್ಳರ ಬಂಧನ

2 8
Published on

ಪಾವಗಡ:- ಪಟ್ಟಣ ಠಾಣೆಯ ಪೊಲೀಸರು ಮೂವರು ಅಂತರ ರಾಜ್ಯ ಬೈಕ್​ ಕಳ್ಳರನ್ನು ಬಂಧಿಸಿ, 31 ದ್ವಿಚಕ್ರ ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ.

ಆಂಧ್ರಪ್ರದೇಶ ರಾಜ್ಯದ ಹರೀಶ್​ (23), ಮನೋಹರ್​ (23) ಮತ್ತು ಸಾಯಿ (23) ಬಂಧಿತರು. ಮೂವರು ಆರೋಪಿಗಳು ಪಾವಗಡ, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಸೇರಿ ವಿವಿಧೆಡೆ 31 ಬೈಕ್​ಗಳನ್ನು ಕಳವು ಮಾಡಿದ್ದು, ತನಿಖೆಯಿಂದ ತಿಳಿದು ಬಂದಿದೆ. ತುಮಕೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​, ಹೆಚ್ಚುವರಿ ಅಧೀಕ್ಷಕ ಮರಿಯಪ್ಪ ಮತ್ತು ಅಬ್ದುಲ್​ ಖಾದರ್​, ಡಿವೈಎಸ್​ಪಿ ರಾಮಚಂದ್ರಪ್ಪ ನೇತೃತ್ವದಲ್ಲಿ ಪಾವಗಡ ಪೊಲೀಸ್​ ಠಾಣೆಯ ವಿಜಯ್​ ಕುಮಾರ್​, ಗುರುನಾಥ, ರಾಮಚಂದ್ರಪ್ಪ ಹಾಗೂ ಸಿಬ್ಬಂದಿ ಎ.ಎಸ್​.ಐ ತಿಮ್ಮರಾಜು, ಕೇಶವರಾಜು, ರಾಮಕೃಷ್ಣ, ನಾಗೇಶ್​, ನವೀನ್​, ಪ್ರವಿಣ್​, ಮಾಳಪ್ಪ, ನಟೇಶ ಹಾಗೂ ವೈ.ಎನ್​.ಹೊಸಕೋಟೆ ಠಾಣೆಯ ಸಿಬ್ಬಂದಿ ಶ್ರೀಕಾಂತ್​ ನಾಯ್ಕ, ಸಂತೋಷ್​ಕುಮಾರ್​ ಕಾರ್ಯಚರಣೆಯಲ್ಲಿ ಇದ್ದರು. ತನಿಖಾ ತಂಡದ ಕಾರ್ಯವನ್ನು ಮೆಚ್ಚಿ ಸಿಬ್ಬಂದಿಯನ್ನು ಎಸ್ಪಿ ಕೆ.ವಿ.ಅಶೋಕ್​

ಶ್ಲಾಘಿಸಿದ್ದಾರೆ.

ಹೈಟೆಕ್​ ಬೈಕ್​ಗಳೇ ಟಾರ್ಗೆಟ್​: ಪಾವಗಡ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಿರುವ ಕಳ್ಳರಿಂದ 6 ರಾಯಲ್​ ಎನ್ಫೀಲ್ಡ್​ ಬುಲೆಟ್​, 7 ಬಜಾಜ್​ ಪಲ್ಸರ್​, 2 ಅಪಾಚಿ, 2 ಆರ್​ಎಕ್ಸ್​ &100, 2 ಕೆಟಿಎಂ ಡ್ಯೂಕ್​, 7 ಹಿರೋ ಸ್ಲಂಡರ್​, 3 ಪ್ಯಾಷನ್​ ಪ್ರೋ , 2 ಹೊಂಡ ಶೈನ್​ ಒಟ್ಟು 31 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದು, 42 ಲಕ್ಷ ರೂ. ಮೌಲ್ಯದ್ದಾಗಿವೆ ಎಂದು ಅಂದಾಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net