ಪಾಳುಬಾವಿಯಲ್ಲಿ ಅಪರಿಚಿತ ಶವ ಪತ್ತೆ

Published on

ಮಳವಳ್ಳಿ: ತಾಲೂಕಿನ ಬೆಳಕವಾಡಿ ಗ್ರಾಮದ ಸಮೀಪವಿರುವ ಪಾಳುಬಾವಿಯಲ್ಲಿ 20 ವರ್ಷ ವಯೋಮಾನದ ಅಪರಿಚಿತ ಯುವಕನ ಶವ ಪತ್ತೆಯಾಗಿದೆ.


ಗ್ರಾಮದ ದಾಕ್ಷಾಯಿಣಿ ಅವರ ಜಮೀನಿನಲ್ಲಿರುವ ಪಾಳುಬಾವಿಯಲ್ಲಿ ಮೃತದೇಹ ಕೊಳೆತ ಸ್ಥಿಯಲ್ಲಿ ಕಂಡುಬಂದಿದೆ. ಸುಮಾರು 15 ದಿನಗಳ ಹಿಂದೆಯೇ ಮೃತಪಟ್ಟಿರಬಹುದೆಂದು ಹೇಳಲಾಗುತ್ತಿದೆ. ಹೊಸಹಳ್ಳಿಯಿಂದ ಬೆಳಕವಾಡಿಗೆ ಸೇರುವ ಮುಖ್ಯರಸ್ತೆ ಬದಿಯಲ್ಲೇ ಪಾಳು ಬಾವಿ ಇದ್ದು, ಕಳೆದೆರಡು ದಿನಗಳಿಂದ ಸುತ್ತಲಿನ ನಿವಾಸಿಗಳಿಗೆ ಕೆಟ್ಟವಾಸನೆ ಬಡಿಯುತ್ತಿದ್ದ ಕಾರಣ ಪರಿಶೀಲಿಸಿದಾಗ ಬಾವಿಯಲ್ಲಿ ಮೃತದೇಹ ಕಂಡುಬಂದಿದೆ.


ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪಿಎಸ್‌ಐ ಅಶೋಕ್ ಹಾಗೂ ಸಿಬ್ಬಂದಿ ಮೃತದೇಹವನ್ನು ಬಾವಿಯಿಂದ ಹೊರತೆಗಿಸಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಿದರು. ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net