ಪಾಲಿಕೆಗೆ 15 ಇ ಎಲೆಕ್ಟ್ರಿಕಲ್ ಆಟೋ ಕೊಡುಗೆ

8
Published on

ಮೈಸೂರು: ಐಸಿಐಸಿಐ ಫೌಂಡೇಷನ್ ವತಿಯಿಂದ ಸಿಎಸ್‌ಆರ್ ಅನುದಾನದಲ್ಲಿ ಮೈಸೂರು ನಗರದಲ್ಲಿ ಮನೆ ಮನೆ ಕಸ ಸಂಗ್ರಹಣೆಗೆ 15 ಇ ಎಲೆಕ್ಟ್ರಿಕಲ್ ಆಟೋಗಳನ್ನು ಪಾಲಿಕೆಗೆ ಕೊಡುಗೆಯಾಗಿ ನೀಡಲಾಯಿತು.

ಪಾಲಿಕೆ ಕಚೇರಿ ಆವರಣದಲ್ಲಿ ಗುರುವಾರ ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ.ರೂಪಾ, ಆಯುಕ್ತ ಜಿ.ಲಕ್ಷ್ಮೀಕಾಂತ ರೆಡ್ಡಿ ಅವರಿಗೆ ಆಟೋಗಳನ್ನು ಹಸ್ತಾಂತರಿಸಲಾಯಿತು.

ಮೇಯರ್ ಶಿವಕುಮಾರ್ ಮಾತನಾಡಿ, ಸಿಎಸ್‌ಆರ್ ಅನುದಾನದಲ್ಲಿ ಪಾಲಿಕೆಗೆ ಎಲೆಕ್ಟ್ರಿಕಲ್ ಆಟೋಗಳನ್ನು ನೀಡಿದ ಐಸಿಐಸಿಐ ಸಂಸ್ಥೆಗೆ ಧನ್ಯವಾದ ಸಲ್ಲಿಸುತ್ತೇನೆ. ಬ್ಯಾಟರಿ ಚಾಲಿತ ವಾಹನ ಪರಿಸರಕ್ಕೆ ಪೂರಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೈಸೂರು ನಗರದ ಅಭಿವೃದ್ಧಿಗಾಗಿ ಇತರ ಕಂಪನಿಗಳು ತಮ್ಮ ಸಿಎಸ್‌ಆರ್ ಅನುದಾನದಲ್ಲಿ ಸಹಕಾರ ನೀಡಿದರೆ ಮತ್ತಷ್ಟು ಅಭಿವೃದ್ಧಿ ಕಾರ್ಯಗಳಿಗೆ ಸಹಕಾರಿಯಾಗುತ್ತದೆ. ಬೇರೆ ಸಂಸ್ಥೆಯವರು ಪಾಲಿಕೆಯೊಂದಿಗೆ ಕೈ ಜೋಡಿಸಬೇಕು ಎಂದು ಹೇಳಿದರು.

ಮುಂಬೈ ಐಸಿಐಸಿಐ ಫೌಂಡೇಷನ್‌ನ ಕಾರ್ಯಾಚರಣೆ ಮುಖ್ಯಸ್ಥ ಸುಕೇತುಕುಮಾರ್, ಬೆಂಗಳೂರು ವಲಯ ಮುಖ್ಯಸ್ಥ ಬಿ.ಕೆ.ವೆಂಕಟೇಶ್, ಪ್ರಾದೇಶಿಕ ಮುಖ್ಯಸ್ಥ ಸೋಮಶೇಖರ್, ಸ್ಥಾಯಿ ಸಮಿತಿ ಅಧ್ಯಕ್ಷರು, ಪಾಲಿಕೆ ಸದಸ್ಯರು, ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net