ಪಾಲಿಕೆ ಹಣ ದುರ್ಬಳಕೆಯಾದರೆ ಕ್ರಮ: ಶ್ರೀಶೈಲ್​ ಕಾಂಬಳೆ ಎಚ್ಚರಿಕೆ

29manju9
ಬೆಳಗಾವಿ ಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಶ್ರೀಶೈಲ್​ ಕಾಂಬಳೆ ಮಾತನಾಡಿದರು. ಗಿರೀಶ ದೋಂಗಡಿ ,ದೀಪಾಲಿ ಟೋಪಗಿ, ಮಾಧವಿ ರಾೂಟೆ,ಡಾ. ಸಂಜೀವ ನಾಂದ್ರೆ ಇತರರಿದ್ದರು.
Published on

ಬೆಳಗಾವಿ: ಮಹಾನಗರದಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪಾಲಿಕೆ ಅನುದಾನ ದುರ್ಬಳಕೆ ಮಾಡಿಕೊಂಡರೆ ಕ್ರಮ ವಹಿಸಬೇಕಾಗುತ್ತದೆ ಎಂದು ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯ ಶ್ರೀಶೈಲ್​ ಕಾಂಬಳೆ ಎಚ್ಚರಿಸಿದರು.

ನಗರದ ಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಆರೋಗ್ಯ ಸ್ಥಾಯಿ ಸಮಿತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿವರ್ಷ ಬಜೆಟ್​ನಲ್ಲಿ ಬೀದಿ ನಾಯಿಗಳ ನಿರ್ವಹಣೆಗಾಗಿ ಮೀಸಲಿಟ್ಟಿರುವ ಲಕ್ಷಾಂತರ ರೂ. ಅನುದಾನ ಖರ್ಚು ಮಾಡಲಾಗುತ್ತಿದೆ. ಆದರೆ, ನಾಯಿಗಳ ಹಾವಳಿ ಮಾತ್ರ ಕಡಿಮೆಯಾಗುತ್ತಿಲ್ಲ. ಈ ವಿಷಯದಲ್ಲಿ ಅಧಿಕಾರಿಗಳು ರ್ನಿಲಕ್ಷ ಮಾಡುವುದು ಸರಿಯಲ್ಲ ಎಂದರು.

ಪಾಲಿಕೆ 58 ವಾರ್ಡ್​ಗಳ ವ್ಯಾಪ್ತಿಯ ಮಾರುಕಟ್ಟೆ, ಜನವಸತಿ ಪ್ರದೇಶಗಳಲ್ಲಿ ಹೆಚ್ಚಿರುವ ಬೀದಿ ನಾಯಿಗಳ ಸಂತಾನ ಹರಣ ಮಾಡುವ ಕೆಲಸ ನಿರೀಕ್ಷಿತ ಪ್ರಮಾಣದಲ್ಲಿ ಆಗದಿರುವ ಹಿನ್ನೆಲೆ ಸಮಸ್ಯೆಗಳು ಜೀವಂತವಾಗಿ ಉಳಿದುಕೊಂಡಿವೆ. ಕೆಲ ಭಾಗದಲ್ಲಿ ಬೀದಿ ನಾಯಿಗಳ ಹಾವಳಿಯಿಂದ ರಸ್ತೆಯ ಮೇಲೆ ಓಡಾಡುವುದು ಕಷ್ಟವಾಗುತ್ತದೆ ಸದಸ್ಯರು ದೂರಿದರು.

ಪಾಲಿಕೆ ಆರೋಗ್ಯ ವಿಭಾಗದ ಅಧಿಕಾರಿಗಳು ಮಾತನಾಡಿ, ನಗರದಲ್ಲಿ ಬೀದಿ ನಾಯಿಗಳ ನಿರ್ವಹಣೆ ಮಾಡಲು ನಾನಾ ರೀತಿಯ ಸಮಸ್ಯೆ ಎದುರಿಸಲಾಗುತ್ತಿದೆ. ಎಬಿಸಿ ಸೆಕ್ಟರ್​ಗಾಗಿ ಸ್ಥಳ ಪರಿಶೀಲನೆ ನಡೆಸಲಾಗುತ್ತಿದ್ದು, ಇನ್ನೂ ಅಂತಿಮಗೊಂಡಿಲ್ಲ. ಬೀದಿ ನಾಯಿಗಳ ಸುರಕ್ಷತೆಯನ್ನು ನಾವು ನೋಡಿಕೊಳ್ಳಬೇಕಿದೆ. ಹೀಗಾಗಿ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಿ ಎಬಿಸಿ ಸೆಕ್ಟರ್​ಗೆ ಜಾಗ ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು. ಪಾಲಿಕೆ ಆಡಳಿತ ಪದ ನಾಯಕ ಗಿರೀಶ ದೋಂಗಡಿ, ದೀಪಾಲಿ ಟೋಪಗಿ, ಮಾಧವಿ ರಾೂಟೆ,ಡಾ.ಸಂಜೀವ ನಾಂದ್ರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net