ಪಾಲಿಕೆ ಸದಸ್ಯನ ಮೇಲೆ ಹಲ್ಲೆ

Published on

ಬಳ್ಳಾರಿ : ಇಲ್ಲಿನ 38ನೇ ವಾರ್ಡ್‌ನ ಮಹಾನಗರ ಪಾಲಿಕೆಯ ಸದಸ್ಯ ಕುಬೇರನ ಮೇಲೆ, 39ನೇ ವಾರ್ಡ್‌ನ ಸದಸ್ಯರ ಸಂಬಂಧಿ ರವಿ ಹಾಗೂ ಸಹಚರರು ಹಲ್ಲೆ ಮಾಡಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ನಗರದ ವಿವಿಧ ಅಭಿವೃದ್ಧಿ ವಿಷಯಗಳು ಸೇರಿದಂತೆ ಮೇಯರ್ ಕಚೇರಿಯಲ್ಲಿ ಪಾಲಿಕೆ ಸದಸ್ಯರ ನಡುವೆ ಸಭೆ ನಡೆಸಲಾಗಿತ್ತು. ಇದೇ ವೇಳೆ ಸಭೆಗೆ ರವಿ, ಗೋವಿಂದ ಆಗಮಿಸಿ ಕುಳಿತಿದ್ದರು. ಸದಸ್ಯರ ಸಭೆ ನಡೆಯುತ್ತಿದ್ದು ನೀವು ಹೊರಗಡೆ ಹೋಗಿ ಎಂದು ಸದಸ್ಯ ಕುಬೇರ ವಿರೋಧ ವ್ಯಕ್ತಪಡಿಸಿದ್ದಾರೆ. ಆಗ ಇಬ್ಬರ ನಡುವೆ ವಾಗ್ವದ ನಡೆದಿದೆ. ಸಭೆ ಮುಗಿಸಿ ಮೇಯರ್ ಕಚೇರಿಯಿಂದ ಹೊರಗಡೆ ಬರುತ್ತಿದ್ದಂತೆ ರವಿ ಹಾಗೂ ಸಹಚರರು ಕುಬೇರ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಚಿಕಿತ್ಸೆಗೆಂದು ನಗರದ ಟ್ರಾಮ್ ಕೇರ್ ಆಸ್ಪತ್ರೆಗೆ ತೆರಳಿದ ವೇಳೆ ಅಲ್ಲಿಯೂ ಕೂಡ ಹಲ್ಲೆ ಮಾಡಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಹಾಗೂ ರೋಗಿಗಳ ಸಂಬಂಧಿಕರು ಬಂದು ಜಗಳ ಬಿಡಿಸಿದ್ದಾರೆ. ಈ ಕುರಿತು ರವಿಕುಮಾರ, ಗೋವಿಂದ, ಚಿರಂಜೀವಿ, ಜಗನ್, ಕಾಟೆಗುಡ್ಡ ಮಧು, ಸೂರಿ ಸೇರಿದಂತೆ ನಾಲವತ್ತು ಜನ ಹಲ್ಲೆ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net