

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 2025-26ನೇ ಸಾಲಿನ ಆಯವ್ಯಯ ಅಂದಾಜು ಪತ್ರಿಕೆ ಮಂಜೂರಾತಿ ಕುರಿತು ಸಾಮಾನ್ಯ ಸಭೆ ಮಾ. 20ರಂದು ಬೆಳಗ್ಗೆ 11 ಗಂಟೆಗೆ ಇಲ್ಲಿಯ ಪಾಲಿಕೆ ಕಚೇರಿ ಸಭಾಭವನದಲ್ಲಿ ನಡೆಯಲಿದೆ.
ತೆರಿಗೆ ನಿರ್ಧರಣೆ, ಹಣಕಾಸು ಹಾಗೂ ಅಫೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಶೇಖರ ಮನಗುಂಡಿ ಬಜೆಟ್ ಮಂಡಿಸುವರು. ರಾಜ್ಯ ಸರ್ಕಾರದಿಂದ ಬರಬೇಕಾದ ಹಣಕಾಸು ನೆರವಿನ ಕೊರತೆಯ ನಡುವೆಯೂ ಬಜೆಟ್ ಗಾತ್ರ 1500 ಕೋಟಿ ರೂ, ಮೀರುವ ಸಾಧ್ಯತೆಗಳಿವೆ.
ಇದೇ ವೇಳೆ ಅವಳಿ ನಗರದ ನಿರಂತರ ನೀರು ಸರಬರಾಜು ಯೋಜನೆಯಾದ ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆಯ 2025-26ನೇ ಸಾಲಿನ ಆಯವ್ಯಯ ಸಹ ಮಂಡನೆಯಾಗಲಿದೆ ಎಂದು ಪಾಲಿಕೆಯ ಪರಿಷತ್ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.