ವೇಮಗಲ್: ಕೋಲಾರ ತಾಲೂಕಿನ ವೀರಾಪುರ ಮೊರಿ ಬಳಿಯ ಪಾಲಾರ್ ನದಿಯ ಕೆ.ಸಿ.ವ್ಯಾಲಿ ನೀರಿನಲ್ಲಿ ಅಂದಾಜು 65 ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ಮುಖದ ಗುರುತು ಸಿಗದ ರೀತಿಯಲ್ಲಿ ಶವ ಕೊಳೆತಿದ್ದು, ಅಗ್ನಿಶಾಮಕ ಸಿಬ್ಬಂದಿ ಶವ ಹೊರತೆಗೆದು, ಆಂಬುಲೆನ್ಸ್ನಲ್ಲಿ ಎಸ್ಎನ್ಆರ್ ಆಸ್ಪತ್ರೆಗೆ ರವಾನಿಸಿದ್ದಾರೆ. ಎರಡು ದಿನಗಳ ಒಳಗಾಗಿ ಸಂಬಂಧಪಟ್ಟವರು ಯಾರಾದರೂ ದೂರು ದಾಖಲಿಸಿದರೆ, ಪ್ರಕರಣವು ಆತ್ಮಹತ್ಯೆಯೋ, ಕೊಲೆಯೋ ಎಂದು ತನಿಖೆ ಕೈಗೊಳ್ಳಲಾಗುವುದು. ಇಲ್ಲವಾದಲ್ಲಿ ಅನಾಥ ಶವ ಎಂದು ಪರಿಗಣಿಸಿ ಅಂತ್ಯಕ್ರಿಯೆ ಮಾಡಲಾಗುವುದು ಎಂದು ವೇಮಗಲ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಬಿ.ಪಿ.ಮಂಜು ತಿಳಿಸಿದ್ದಾರೆ.