ಹೊಸಪೇಟೆ: ಕೂಡ್ಲಿಗಿ ತಾಲೂಕಿನ ಪಾಲಯ್ಯನಕೋಟೆ ಸರ್ಕಾರಿ ಪ್ರಾಥಮಿಕ ಶಾಲೆಗೆ ಆವರಣದ ಕರೆಯಂತಾಗಿದ್ದು, ಪರಿಹಾರ ಒದಗಿಸುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ನಗರದಲ್ಲಿ ಬುಧವಾರ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಅಧ್ಯಕ್ಷ ಸಿ.ಎ.ಗಾಳೇಪ್ಪ ಮಾತನಾಡಿ, ಪಾಲಯ್ಯನಕೋಟೆ ಗ್ರಾಮದಲ್ಲಿ 25 ವರ್ಷಗಳ ಹಿಂದೆ ಕಾರಣಾಂತರಗಳಿAದ ಕೆರೆ ಹಳ್ಳದ ಜಾಗದಲ್ಲಿ ತರಾತುರಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ನಿರ್ಮಾಣ ಮಾಡಲಾಗಿದೆ. ಆದರೆ ಕಳೆದ ಎರಡು ವರ್ಷಗಳಿಂದ ಪ್ರತಿಬಾರಿಯು ಕೆರೆ ತುಂಬಿದಾಗೆಲ್ಲಾ ಕೆರೆಯ ನೀರು ಬಸಿದು ಶಾಲಾ ಆವರಣ ಕೆರೆಯಂತಾಗುತ್ತದೆ. ಇದರಿಂದ ಶಾಲಾ ಅಂದಾಜು ಮೂರು ಅಡಿ ತುಂಬಾ ನೀರು ನಿಲ್ಲುತ್ತದೆ. ವಿದ್ಯಾರ್ಥಿಗಳು ತರಗತಿಗಳಿಗೆ ಹೋಗಲೂ ಪರದಾಡಬೇಕು. ಒಂದು ತಿಂಗಳಿAದ ಶಾಲೆಗೆ ಮಕ್ಕಳೂ ಹೋಗುತ್ತಿಲ್ಲ. ನಿಂತ ನೀರು ತುಂಬಾ ಕಲುಶಿತವಾಗಿದೆ. ಮಕ್ಕಳಿಗೆ ವಿವಿಧ ರೀತಿಯ ಕಾಯಿಲೆ ಬರುತ್ತಿವೆ. ಆದ್ದರಿಂದ ಪಾಲಕರು ಕಳುಹಿಸಲು ಮುಂದೆ ಬರುತ್ತಿಲ್ಲ. ಪಾಲಯ್ಯನಕೋಟೆ ನಿವಾಸಿಗಳು ಪಿಡಿಒ, ಬಿಇಓ ಸೇರಿದಂತೆ ಜನಪ್ರತಿನಿಧಿಗಳಿಗೆ ತಿಳಿಸಿದರು, ಪ್ರಯೋಜನವಾಗಿಲ್ಲ. ಆದ್ದರಿಂದ ಕೆರೆ ನೀರು ಶಾಲೆ ಆವರಣದಲ್ಲಿ ನಿಲ್ಲದಂತೆ ಕ್ರಮಕೈಗೊಂಡು, ಮಕ್ಕಳ ಕಲಿಕೆಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ನಾಗಪ್ಪ, ಸುರೇಶ್, ಹನುಮಂತ, ಓಬಳೆಶ್, ಕುಮಾರಸ್ವಾಮಿ, ದುರಗಪ್ಪ, ಶಾಂತಪ್ಪ ಇತರರಿದ್ದರು.