ಪಾಲಕರು, ಹುಡುಗನ ವಿರುದ್ಧ ಪೋಕ್ಸೋ ಪ್ರಕರಣ

Crime Logo
Published on

ಹನೂರು: ಅಪ್ರಾಪ್ತೆಯನ್ನು ವಿವಾಹ ಮಾಡಿದ ಹಿನ್ನೆಲೆಯಲ್ಲಿ ಆಕೆಯ ಪಾಲಕರು ಹಾಗೂ ಮದುವೆಯಾಗಿರುವ ಹುಡುಗನ ವಿರುದ್ಧ ಬುಧವಾರ ಮಲೆ ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.


ಮಲೆ ಮಹದೇಶ್ವರ ಬೆಟ್ಟ ಸಮೀಪದ ಆಲಂಬಾಡಿ ಗ್ರಾಮದ ಬಾಲಕಿಯನ್ನು ರಾಮೇಗೌಡನಹಳ್ಳಿ ಮಾದೇಶನೊಂದಿಗೆ ಕಳೆದ ವರ್ಷ ವಿವಾಹ ಮಾಡಿದ್ದರು. ದಂಪತಿ ಹೈದರಾಬಾದ್‌ನಲ್ಲಿ ವಾಸವಾಗಿದ್ದು, ಅಪ್ರಾಪ್ತೆ ಗರ್ಭಿಣಿ ಆಗಿದ್ದರಿಂದ ಇತ್ತೀಚೆಗೆ ಆಲಂಬಾಡಿ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ಬಾಲಕಿ ತಾಯಿ ಕಾರ್ಡ್ ಮಾಡಿಸುವ ಸಂಬಂಧ ಆಶಾ ಕಾರ್ಯಕರ್ತೆಗೆ ತಿಳಿಸಿದ್ದಾಳೆ.


ಹುಟ್ಟಿದ ದಾಖಲೆಗಳನ್ನು ಪರಿಶೀಲಿಸಿದಾಗ 18 ವರ್ಷವಾಗದೆ ಇರುವುದು ಗೊತ್ತಾಗಿದೆ. ಪೊನ್ನಾಚಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಬಗ್ಗೆ ಬಾಲಕಿಯನ್ನು ತಪಾಸಣೆ ನಡೆಸಿದಾಗ 5 ತಿಂಗಳ ಗರ್ಭಿಣಿಯಾಗಿರುವುದನ್ನು ಖಚಿತಪಡಿಸಿಕೊಂಡ ವೈದ್ಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ನಾಗೇಶ್ ಅವರಿಗೆ ವರದಿ ನೀಡಿದ್ದಾರೆ. ಇದರನ್ವಯ ನಾಗೇಶ್ ಅವರು ಮಾದೇಶ, ಆತನ ತಂದೆ, ತಾಯಿ ಹಾಗೂ ಬಾಲಕಿಯ ತಂದೆ ವಿರುದ್ಧ ಮ.ಬೆಟ್ಟ ಪೊಲೀಸ್ ಠಾಣೆಗೆ ದೂರು ನೀಡಿದರು. ಇನ್ಸ್‌ಪೆಕ್ಟರ್ ನಂಜುಂಡಸ್ವಾಮಿ ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net