ಪಾಲಕರು ಹಾಗೂ ಗುರು ಹಿರಿಯರು ಬಾಲ್ಯದಿಂದಲೇ ಮಕ್ಕಳ ಬುದ್ಧಿ ವಿಕಾಸಕ್ಕೆ ಪ್ರೇರಣೆಯಾಗಬೇಕು

ಪಾಲಕರು ಹಾಗೂ ಗುರು ಹಿರಿಯರು ಬಾಲ್ಯದಿಂದಲೇ ಮಕ್ಕಳ ಬುದ್ಧಿ ವಿಕಾಸಕ್ಕೆ ಪ್ರೇರಣೆಯಾಗಬೇಕು
Published on

ಅರಸೀಕೆರೆ: ನಗರದ ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ದ್ವಿತೀಯ ಪಿಯಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಶಾರದಾ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಆದಿಚುಂಚನಗಿರಿ ಮಹಾ ಸಂಸ್ಥಾನ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಮಾತನಾಡಿ,ವಿಜ್ಞಾನ, ತಂತ್ರಜ್ಞಾನದ ಭರಾಟೆ ನಡುವೆಯೂ ವಿದ್ಯಾರ್ಥಿಗಳು ಮಾತೃದೇವೋಭವ ಪಿತೃದೇವೋಭವ,ಮಾತೃ ಭೋಜನ,ಹಾಗೂ ಸರಸ್ವತಿ ಪೂಜೆಯತಹ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಶ್ಲಾಘನೀಯ. ಪಾಲಕರು ಹಾಗೂ ಗುರು ಹಿರಿಯರು ಬಾಲ್ಯದಿಂದಲೇ ಮಕ್ಕಳ ಬುದ್ಧಿ ವಿಕಾಸಕ್ಕೆ ಪ್ರೇರಣೆಯಾಗಬೇಕೆ ವಿನಹಃ ತಮ್ಮ ಆಸೆ ಆಕಾಂಕ್ಷೆಗಳನ್ನ ಮಕ್ಕಳ ಮೇಲೆ ಏರಿ ಅವಸನಕ್ಕೆ ಕಾರಣರಾಗಬಾರದು.ಲಿಂಗೈಕ್ಯ ಡಾ.ಶ್ರೀಬಾಲಗಂಗಾಧರನಾಥ ಮಹಾ ಸ್ವಾಮೀಜಿಗಳು ತೋರಿದ ಹಾದಿಯಲ್ಲಿ ನಾವೆಲ್ಲ ಸಾಗುತ್ತಿದ್ದೇವೆ. ನಾಡಿನ ಉದ್ದಗಲಕ್ಕೂ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕೇವಲ ಪಠ್ಯಪುಸ್ತಕದಲ್ಲಿರುವ ಶಿಕ್ಷಣವನ್ನು ಮಾತ್ರ ಬೋಧನೆ ಮಾಡುತ್ತಿಲ್ಲ.ಬದಲಾಗಿ ಸಂಸ್ಕಾರಯುತ ನಡವಳಿಕೆ ಗುರು ಹಿರಿಯರನ್ನ ಗೌರವದಿಂದ ಕಾಡುವ ಮನಸ್ಥಿತಿ ರೂಢಿಸಲು ಉತ್ತೇಜನ ನೀಡುತ್ತಿದ್ದೇವೆ ಎಂದರು.

ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳ ಟ್ರಸ್ಟ್ ನ ಆಡಳಿತ ಅಧಿಕಾರಿ ಎ.ಟಿ ಶಿವರಾಂ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.ಬಿಇಒ ಮೋಹನ್ ಕುಮಾರ್, ನಗರ ಠಾಣೆಯ ಸಬ್ ಇನ್ಸಪೆಕ್ಟರ್ ಭಾರತಿ ರಾಯನ್‌ಗೌಡ, ಡಾ.ಲಿಂಗರಾಜ್, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜ್ಞಾನೇಶ್ವರಿ ಸರಿ ಹಲವು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net