ಪಾಲಕರಿಗೆ ಮತ ಜಾಗೃತಿ ಮೂಡಿಸಿ

18ydg04
Published on


ಯಾದಗಿರಿ: ಜಿಲ್ಲೆಯ ಪ್ರತಿಯೊಬ್ಬರ ಸಾರ್ವಜನಿಕರು ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಶೇ.100 ರಷ್ಟು ಮತದಾನವಾಗಲು ಶ್ರಮಿಸುವಂತೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆದ ಜಿಪಂ ಸಿಇಒ ಗರಿಮಾ ಪನ್ವಾರ ಮನವಿ ಮಾಡಿದರು.
ಮಂಗಳವಾರ ನಗರದ ಡಿ. ದೇವರಾಜ ಅರಸು ಮೆಟ್ರಿಕ್ ನಂತರ (ವೃತ್ತಿಪರ) ಬಾಲಕಿಯರ ವಸತಿ ನಿಲಯದಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಸ್ವೀಪ್ ಸಮಿತಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ನಿಲಯಾಥರ್ಿಗಳಿಗೆ ಮತದಾನದ ಕುರಿತು ಜಾಗೃತಿ ಮೂಡಿಸುವ ಫೋನ್ ಇನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸದೃಢ ದೇಶ ನಿಮರ್ಾಣಕ್ಕೆ ಮತದಾನ ಅತ್ಯಂತ ಅವಶ್ಯವಾಗಿದೆ. ಪ್ರಜ್ಞಾವಂತರು ಹಾಗೂ ಯುವಕರು ಮತದಾನ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಿರುವ ಸರಿಯಾದ ಬೆಳವಣಿಗೆಯಲ್ಲ ಎಂದರು.
ಇಲ್ಲಿ ವಿದ್ಯಾಥರ್ಿನಿಯರು ತಮ್ಮ ಪಾಲಕರಿಗೆ ಮತ್ತು ಮನೆಯ ಅಕ್ಕಪಕ್ಕದವರಿಗೆ ಮೇ.10ರಂದು ನಡೆಯಲಿರುವ ಚುನಾವಣೆಯಲ್ಲಿ ತಪ್ಪದೆ ಪತದಾನ ಮಾಡುವ ಮೂಲಕ ಸಮಾಜ ಕಟ್ಟುವ ಉತ್ತಮ ನಾಯಕನನ್ನು ಆಯ್ಕೆ ಮಾಡಲು ತಿಳಿವಳಿಕೆ ಮೂಡಿಸುವಂತೆ ಕಿವಿಮಾತು ಹೇಳಿದರು.
ಸ್ವೀಪ್ ಜಾಗೃತಿಗಾಗಿ ತಾಪಂ ಯೋಜನಾಕಾರಿ ಶಶಿಧರ ಸ್ವಂತ ರಚಿಸಿದ ಹಾಡಿನ ಸಿಡಿಯನ್ನು ಇದೇ ವೇಳೆ ಬಿಡುಗಡೆಗೊಳಿಸಲಾಯಿತು.

ಇಲಾಖೆ ಜಿಲ್ಲಾ ಅಕಾರಿ ರಾಘವೇಂದ್ರ, ತಾಲೂಕು ಅಕಾರಿ ಸಂತೋಷ ರೆಡ್ಡಿ, ಸಿದ್ದಾರೆಡ್ಡಿ, ಸಂಗಮೇಶ ಪೂಜಾರಿ, ಲಕ್ಷ್ಮೀಬಾಯಿ, ಈಶಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net