ಪಾಲಕರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಮಕ್ಕಳು

Published on

ಚಾಮರಾಜನಗರ: ಪ್ರಸ್ತುತ ದಿನಗಳಲ್ಲಿ ಮಕ್ಕಳು ತಂದೆ-ತಾಯಿಯನ್ನ ದೂರು ಮಾಡುತ್ತಿರುವುದು ಬಹಳ ಬೇಸರದ ಸಂಗತಿಯಾಗಿದೆ. ಮಕ್ಕಳಿಂದ ದೂರಾದ ವೃದ್ಧರಿಗೆ ಆಶ್ರಯಕ್ಕಾಗಿಯೇ ವೃದ್ಧಾಶ್ರಮಗಳಿದ್ದು, ಅಂತಹವರಿಗೆ ಹೊಸ ಬದುಕು ಕಟ್ಟಿಕೊಡುತ್ತವೆ ಎಂದು ಮಡಿವಾಳ ಶಿವಲಂಕಾರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ದೇವರಾಜು ತಿಳಿಸಿದರು.

ನಗರದ ಉತ್ತುವಳ್ಳಿಯಲ್ಲಿರುವ ವೃದ್ಧ ಮತ್ತು ಅನಾಥಶ್ರಮದಲ್ಲಿ ಬುಧವಾರ ಆಶ್ರಯ ಸೇವಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಬುಧವಾರ ಆಯೋಜಿಸಿದ್ದ ಲಿಂಗೈಕ್ಯಪೂಜ್ಯ ಶ್ರೀಬಸವಣ್ಣಸ್ವಾಮಿ ಅವರ ಸ್ಮರಣೋತ್ಸವ ಹಾಗೂ ಆಶ್ರಮದ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸ್ಮಾನ್ಮಾನಿತರಾಗಿ ಆಗಮಿಸಿ ಮಾತನಾಡಿದರು.

ತಂದೆ-ತಾಯಿಗಳು ಮಕ್ಕಳನ್ನು ಅತ್ಯಂತ ಪ್ರೀತಿಯಿಂದ ಪಾಲನೆ ಮಾಡುತ್ತಾರೆ. ವಯಸ್ಸಿಗೆ ಬಂದ ಮಕ್ಕಳು ವಯಸ್ಸಾದ ತಂದೆ-ತಾಯಿಯನ್ನ ದೂರಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಕುಂತೂರು ವೀರಸಿಂಹಾಸನ ಮಠದ ಶಿವಪ್ರಭುಸ್ವಾಮೀಜಿ ಮಾತನಾಡಿ, ಅನಾಥೋ ದೈವ ರಕ್ಷಕ ಎಂಬಂತೆ ಈ ಆಶ್ರಮವನ್ನು ಹಲವಾರು ವರ್ಷಗಳಿಂದ ಹಲವಾರು ಜನರ ಉತ್ತಮ ಜೀವನದೊಂದಿಗೆ ಬಹಳ ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವುದು ಬಹಳ ದೊಡ್ಡ ಕೆಲಸವಾಗಿದೆ ಎಂದರು.

ಮಡಿವಾಳದ ಶಿವಾಲಂಕಾರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ದೇವರಾಜು, ಹಾಸ್ಯ ಕಲಾವಿದ ಉಮ್ಮತ್ತೂರು ಬಸವರಾಜು, ಕಳಲೆ ಭಾಸ್ಕರ ಹಾಗೂ ಸಮಾಜ ಸೇವಕರಾದ ಶೋಭಾ ಅವರನ್ನು ಸನ್ಮಾನಿಸಲಾಯಿತು. ಆಶ್ರಯ ಸೇವಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಂ.ರಮೇಶ್ ಪ್ರಭು, ಉಪಾಧ್ಯಕ್ಷ ಗುರುಸ್ವಾಮಿ, ಸದಸ್ಯ ಮಹಾದೇವಪ್ಪ, ಗಾಯಕರಾದ ಸುರೇಶ್‌ನಾಗ್, ಎಂ.ಶಿವಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net