ಪಾಲಕರ ನಂಬಿಕೆಯನ್ನು ಉಳಿಸಿಕೊಳ್ಳಿ

ಫೋಟೋ ಶೀರ್ಷಿಕೆ 22 ಸಿಆರ್_ಪಿ-2 ಎ
Published on

ಚನ್ನರಾಯಪಟ್ಟಣ: ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಫೋಕಸ್ ಇದೆ ಎಂಬುದನ್ನು ಸಾಬೀತುಪಡಿಸುವ ಸಲುವಾಗಿ ಫೋಕಸ್ ಎಂಬ ಹೆಸರಿನಲ್ಲೆ ಶಿಕ್ಷಣ ಸಂಸ್ಥೆ ತೆರೆದು ಗುಣಾತ್ಮಕ ಬೋಧನೆಗೆ ಸದ್ವಿದ್ಯಾ ಸಂಸ್ಥೆ ಮುಂದಾಗಿದೆ ಎಂದು ಹಾಸ್ಯಗಾರ್ತಿ ಸುಧಾ ಬರಗೂರು ಹೇಳಿದರು.


ಪಟ್ಟಣದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಪಟ್ಟಣದ ಸದ್ವಿದ್ಯಾ ವಿದ್ಯಾಸಂಸ್ಥೆಯ ‘ಫೋಕಸ್’ ಪದವಿಪೂರ್ವ ಕಾಲೇಜಿನ 2023-24ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭ ಹಾಗೂ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಪಟ್ಟಣದ ಸುತ್ತಮುತ್ತ ಸಾಕಷ್ಟು ವಿದ್ಯಾಸಂಸ್ಥೆಗಳಿದ್ದು, ಅವುಗಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಸಮಾಜಕ್ಕೆ ಉತ್ತಮ ವಿದ್ಯಾರ್ಥಿಗಳನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಫೋಕಸ್ ಸಂಸ್ಥೆ ಮುಂದಾಗಿದೆ ಎಂದರು.


ಪಾಲಕರು ನಿಮ್ಮ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳುವಲ್ಲಿ ವಿದ್ಯಾರ್ಥಿಗಳು ಮುಂದಾಗಬೇಕು. ಅದೃಷ್ಟದ ಮೇಲೆ ನಂಬಿಕೆ ಇಟ್ಟು ಓದದೇ ಕಾಲಕಳೆಯುವುದು ಸರಿಯಲ್ಲ, ಅದೃಷ್ಟ ಎನ್ನುವುದು ಲಿಫ್ಟ್ ಇದ್ದಂತೆ, ಯಾವಾಗ ಬೇಕಾದ್ರೂ ನಿಲ್ಲಬಹುದು. ನಿರಂತರ ಅಭ್ಯಾಸ ಎನ್ನುವುದು ಸ್ಟೇರ್‌ಕೇಸ್ ಇದ್ದಂತೆ ಎಂದೂ ತಪ್ಪುವ ಭಯವಿರುವುದಿಲ್ಲ. ನಿರಂತರ ಶ್ರಮದಿಂದ ಗುರಿ ಸಾಧನೆ ಸಾಧ್ಯವೆಂದರು.


ಜಿ.ಪಂ. ಮಾಜಿ ಸದಸ್ಯೆ ಕುಸುಮಾ ಬಾಲಕೃಷ್ಣ ಮಾತನಾಡಿದರು. ಸದ್ವಿದ್ಯಾ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಿ.ಆರ್.ಗೋಪಾಲಕೃಷ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಬಿ.ಪಿ.ಮೋಹನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯದರ್ಶಿ ಎ.ಆರ್.ಜೀವನ್, ಕಾಲೇಜಿನ ಅಧ್ಯಾಪಕ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net