

ಮೈಸೂರು: ಹೆಬ್ಬಾಳಿನ ಲಕ್ಷ್ಮೀಕಾಂತ ನಗರದಲ್ಲಿ ಪಾರ್ಶ್ವವಾಯು ಪೀಡಿತ ರಾಜು(53)ಎಂಬಾತ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತನ್ನ ಪತ್ನಿಗೆ ಸೆಲ್ಫಿ ವಿಡಿಯೋ ಮಾಡಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ತಕ್ಷಣ ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.
ವಿಡಿಯೋದಲ್ಲಿ ಹೇಳಿರುವಂತೆ ಆತ್ಮಹತ್ಯೆಗೆ ನೆರೆಯ ನಿವಾಸಿಗಳಾದ ಶ್ರೀನಿವಾಸ ಮತ್ತು ಮಂಜುಳಾ ದಂಪತಿ ಕಾರಣ ಎಂದು ಮೃತರ ಪತ್ನಿ ದೂರು ನೀಡಿದ್ದು, ಹೆಬ್ಬಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.