

ನೇಸರಗಿ: ಪಾರ್ಥೇನಿಯಂ ದೇಶದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದು, ವಿಷಕಾರಿ, ಹಾನಿಕಾರಕ ಕಳೆಯಾಗಿದೆ ಎಂದು ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಜಿ.ಬಿ. ವಿಶ್ವನಾಥ ಹೇಳಿದರು.
ಸ್ಥಳಿಯ ಚನ್ನವೃಷಬೇಂದ್ರ ದೇವರಕೊಂಡಜ್ಜನ ಸಭಾಭವನದಲ್ಲಿ ಎಡಿಎಂ ಅಗ್ರೋ ಇಂಡಸ್ಟ್ರೀಸ್ ಇಂಡಿಯಾ ಪೆ ಲಿ. ಬಾಯರ್ ಕ್ರಾಪ್ ಸೆನ್ಸ್ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ರೆತರಿಗಾಗಿ ಸೋಮವಾರ ಹಮ್ಮಿಕೊಂಡಿದ್ದ ತರಬೇತಿ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಾರ್ಥೇನಿಯಂ ಮನುಷ್ಯರು ಹಾಗೂ ಜಾನುವಾರುಗಳಿಗೆ ಅಪಾಯವನ್ನುಂಟು ಮಾಡುವ ಕಳೆಯಾಗಿದ್ದು, ಸೂಕ್ಷ$್ಮವಾಗಿ ನಿರ್ವಹಿಸಬೇಕು ಎಂದರು
ನೇಸರಗಿ ರೆತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಆರ್.ಐ. ಕುಂಬಾರ ಮಾತನಾಡಿ, ನೇಸರಗಿ ಹೋಬಳಿಯಲ್ಲಿ ಅತಿ ಹೆಚ್ಚು ಸೋಯಾಬೀನ್ ಬೆಳೆಯುತ್ತಿದ್ದು, ಪ್ರಸಕ್ತ ವರ್ಷ ಹೆಚ್ಚು ಮಳೆಯಾಗುತ್ತಿರುವುದರಿಂದ ರೋಗಕ್ಕೀಡಾಗುವ ಸಾಧ್ಯತೆ ಹೆಚ್ಚಿದ್ದು, ರೆತರು ಸೂಕ್ತ ನಿರ್ವಹಣಾ ಕ್ರಮ ಕೆಗೊಳ್ಳಬೇಕೆಂದರು. ಬಸವರಾಜ ತುರಾಯಿ, ಪ್ರಗತಿಪರ ರೆತ ಮಲ್ಲೇಶಪ್ಪ ಮಾಳಣ್ಣವರ, ರವಿ ಅಂಬರಶೆಟ್ಟಿ, ಬಸವರಾಜ ಮಡಿವಾಳರ, ನೇಸರಗಿ, ಸೋಮನಟ್ಟಿ, ಮದನಬಾವಿ,ಮುರ್ಕಿಭಾವಿ ಗ್ರಾಮದ ರೆತರು ಉಪಸ್ಥಿತರಿದ್ದರು.