ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ ಬೈಕ್ ಕಳ್ಳತನ

Crime Logo
Published on

ಕಲಬುರಗಿ: ನಗರದ ಏಷಿಯನ್ ವ್ಯಾಪಾರ ಮಳಿಗೆಯ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ ದ್ವಿಚಕ್ರ ವಾಹನವನ್ನು ಕಳ್ಳತನ ಆಗಿರುವ ಕುರಿತು ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಗರದ ಗಾಜಿಪುರ ನಿವಾಸಿ ಉಮೇಶ ರಾನಸರ್ಜೆ ಅವರು ಏಷಿಯನ್ ವ್ಯಾಪಾರ ಮಳಿಗೆಯಲ್ಲಿ ಕಚೇರಿ ಇದ್ದು, ವ್ಯಾಪಾರ ಮಾಡುತ್ತಿದ್ದು, ಬೆಳಗ್ಗೆ ಪಾರ್ಕಿಂಗ್‌ನಲ್ಲಿ ವಾಹನ ನಿಲ್ಲಿಸಿದ್ದಾರೆ. ರಾತ್ರಿ ವ್ಯಾಪಾರ ಮುಗಿಸಿ ವಾಪಸ್ ಬಂದಾಗ ವಾಹನ ಕಳ್ಳತನವಾಗಿರುವುದು ತಿಳಿದಿದೆ ಎಂದು ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net