

ಕಲಬುರಗಿ: ಮಂಡ್ಯ ಜಿಲ್ಲಾ ನಾಗಮಂಗಲ ತಾಲೂಕಿನ ಆದಿ ಚುಂಚನಗಿರಿಯ ಮಠದಲ್ಲಿ ಪಾರಂಪರಿಕ ವೈದ್ಯ ಪರಿಷತ್‌ನಿಂದ ಮಠದ ಸಹಯೋಗದಲ್ಲಿ ಅ.೨೬, ೨೭, ೨೮ರಂದು ಪಾರಂಪರಿಕ ವೈದ್ಯರ ರಾಷ್ಟ್ರೀಯ ಮತ್ತು ರಾಜ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ವೈದ್ಯಶ್ರೀ ಈರಣ್ಣ ರಾಮಪುರ ತಿಳಿಸಿದರು.
ಪಾರಂಪರಿಕ, ನಾಟಿ, ಜನಪದ ವೈದ್ಯಕೀಯ ಪದ್ಧತಿಯ ಜಾಗೃತಿ ಮೂಡಿಸಲು ಸಮ್ಮೇಳನ ಹಮ್ಮಿಕೊಂಡಿದ್ದು, ಶ್ರೀ ಡಾ.ರ್ಮಲಾನಂದನಾಥ ಸ್ವಾಮೀಜಿ, ಶ್ರೀ ಪ್ರಸನ್ನನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಪರಿಷತ್ ಗೌರವಾಧ್ಯಕ್ಷ ದಜಿ.ಮಹಾದೇವಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಆರೋಗ್ಯ ಸಚಿವ ದಿನೇಶ ಗುಂಡುರಾವ ಉದ್ಘಾಟಿಸಲಿz್ದÁರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೂರು ದಿನದ ಸಮ್ಮೇಳನದಲ್ಲಿ ಆರು ಗೋಷ್ಠಿಗಳಿದ್ದು, ಕೊರೋನಾ ರೋಗ ಮತ್ತು ಜ್ವರ, ಸೀ ರೋಗ, ಸಂದಿವಾತ, ಚರ್ಮರೋಗ, ಪಶುವೈದ್ಯ, ಮಧುಮೇಹ ಸೇರಿ ವಿವಿಧ ವಿಷಯಗಳ ಕುರಿತು ಗೋಷ್ಠಿ ನಡೆಯಲಿವೆ. ಐವರು ವೈದ್ಯರಿಗೆ ಪಾರಂಪರಿಕ ವೈದ್ಯ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ವಿವಿಧ ರಾಜ್ಯಗಳ ೫೦೦, ಕರ್ನಾಟಕದ ಸುಮಾರು ೩೦೦೦ ಪಾರಂಪರಿಕ ವೈದ್ಯರು ಪಾಲ್ಗೊಳ್ಳಲಿದ್ದಾರೆ. ಕೃಷಿ ಸಚಿವ ಚಲುವರಾಯಸ್ವಾಮಿ ವೈದ್ಯರ ಮಾಹಿತಿ ಕೋಶ ಕೋಶ ಬಿಡುಗಡೆ ಮಾಡಲಿದ್ದಾರೆ. ಜಿಲ್ಲೆಯ ಪಾರಂಪಕರಿ ವೈದ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ವೈದ್ಯರಾದ ಸಿದ್ದಣ್ಣ ಮಾಡಿಯಾಳರ್, ರಾಚಯ್ಯ ಸ್ವಾಮಿ ಪತ್ರಿ, ಪ್ರಕಾಶ ಜಾಧವ್, ಗುರುಲಿಂಗಪ್ಪ ಹಣಮಂತರಾವ, ಶಿವಪುತ್ರಪ್ಪ ಮಹಾಂತಪ್ಪ, ಮಲ್ಲಯ್ಯ ಹಿರೇಮಠ ಇತರರಿದ್ದರು.