ಪಾರಂಪರಿಕ ವೈದ್ಯ ಪದ್ಧತಿಯೇ ಅತ್ಯುತ್ತಮ ಚಿಕಿತ್ಸಾ ವಿಧಾನ: ಅನುಗನಾಳು ಕೃಷ್ಣಮೂರ್ತಿ

Published on

ಹಾಸನ: ಸರ್ವ ರೋಗಗಳಿಗೂ ಪಾರಂಪರಿಕ ವೈದ್ಯ ಚಿಕಿತ್ಸಾ ಪದ್ಧತಿಯು ಉತ್ತಮವಾಗಿ ಕೆಲಸ ಮಾಡುತ್ತದೆ ಎಂದು ಪಾರಂಪರಿಕ ವೈದ್ಯ ಪರಿಷತ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ ತಿಳಿಸಿದರು.
ಬೇಲೂರು ತಾಲೂಕಿನ ಅರೆಹಳ್ಳಿ ಹೋಬಳಿಯ ಬಾಸುರ ಗ್ರಾಮದಲ್ಲಿ ಪಾರಂಪರಿಕ ರಾಜ್ಯ ವೈದ್ಯ ಪರಿಷತ್‌ಹಾಗೂ ಜಿಲ್ಲಾ ಪಾರಂಪರಿಕ ವೈದ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಹಾಸನ ಜಿಲ್ಲಾ ಪಾರಂಪರಿಕ ವೈದ್ಯರ ಸಭೆಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ರೋಗಗಳಿಗೂ ಪಾರಂಪರಿಕ ವೈದ್ಯ ಚಿಕಿತ್ಸಾ ಪದ್ಧತಿ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ. ನಮ್ಮ ಪದ್ಧತಿಯಿಂದ ತೊಂದರೆ ಆಗಿರುವ ಉದಾಹರಣೆಗಳಿಲ್ಲ. ಈ ಪದ್ಧತಿಯನ್ನು ಮುಂದಿನ ಪೀಳಿಗೆಗಾಗಿ ಉಳಿಸಿ ಬೆಳೆಸಲು ಸರ್ಕಾರ ಒತ್ತು ನೀಡಬೇಕಾಗಿದೆ ಎಂದು ಮನವಿ ಮಾಡಿದರು.
ಗ್ರಾಮೀಣ ಮಟ್ಟದಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರುಗಳನ್ನು ಗುರುತಿಸುವ ಕೆಲಸವನ್ನು ಮಾಡಲಾಗುತ್ತಿದೆ. ಈಗಾಗಲೇ ಪರಿಷತ್ ಸ್ಥಾಪನೆಯಾಗಿ 20 ವರ್ಷಗಳಾಗಿದ್ದು, ಅಂದಿನಿಂದಲೂ ಕರ್ನಾಟಕದ್ಯಂತ 3000ಕ್ಕೂ ಹೆಚ್ಚು ವೈದ್ಯರನ್ನು ಗುರುತಿಸುವ ಕೆಲಸ ಮಾಡಲಾಗಿದೆ. ಕರ್ನಾಟಕ ಜೀವವೈವಿಧ್ಯ ಕಾಯ್ದೆಯಡಿ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಏಳು ಜನರ ಒಳಗೊಂಡ ಜೀವವೈವಿಧ್ಯ ಸಮಿತಿ ಇದೆ. ಈ ಸಮಿತಿಯಲ್ಲಿ ಪಾರಂಪರಿಕ ವೈದ್ಯರುಗಳನ್ನು ಒಳಗೊಂಡಂತೆ ಸಮಿತಿ ರಚನೆ ಮಾಡಬೇಕೆಂದು ಸರ್ಕಾರದ ಆದೇಶವಿದೆ. ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ತಮ್ಮ ಗ್ರಾಮದಲ್ಲಿರುವ ಪಾರಂಪರಿಕ ನಾಟಿ ವೈದ್ಯರನ್ನು ಈ ಸಮಿತಿಗೆ ಸೇರಿಸಬೇಕೆಂದು ಮನವಿ ಮಾಡಿದರು.
ಬಾಸುರ ಗ್ರಾಮದಲ್ಲಿ ಈ ಸಭೆ ನಡೆಸಲು ಕಾರಣ ಇಲ್ಲಿರುವ ಸುತ್ತಮುತ್ತ ಗ್ರಾಮೀಣ ಜನರಿಗೆ ನಮ್ಮ ಪರಂಪರಾ ವೈದ್ಯ ಪದ್ಧತಿಯ ಅರಿವು ಮೂಡಿಸುವುದು ಹಾಗೂ ಈ ಗ್ರಾಮದ ಪಾರಂಪರಿಕ ನಾಟಿ ವೈದ್ಯೆ ಲಲಿತಮ್ಮ ಅವರು ನೀಡುತ್ತಿರುವ ಚಿಕಿತ್ಸೆಗೆ ರಾಜ್ಯದ ಮೂಲೆ ಮೂಲೆಗಳಿಂದ ರೋಗಿಗಳು ಬರುತ್ತಿರುವುದು. ವಿಶೇಷವಾಗಿ ಬಂಜೆತನ ನಿವಾರಣೆಗಾಗಿ ನೀಡಿರುವ ಚಿಕಿತ್ಸೆಯಲ್ಲಿ ಶೇಕಡ 90 ಭಾಗ ಯಶಸ್ವಿಯಾಗಿದೆ. ಇವರ ಹೆಸರನ್ನು ರಾಜ್ಯದ್ಯಂತ ಪರಿಚಯಿಸುವ ಸಲುವಾಗಿ ಈ ಕಾರ್ಯಕ್ರಮ ಇಲ್ಲಿ ಆಯೋಜನೆ ಮಾಡಲಾಗಿದೆ ಎಂದರು.
ಪಾರಂಪರಿಕ ಹಿರಿಯ ವೈದ್ಯ ಕೃಷ್ಣೇಗೌಡ ಅವರು ಮಾತನಾಡಿ, ಋಷಿಮುನಿಗಳಿಂದ ಹಾಗೂ ನಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ಈ ಪರಂಪರಾ ವೈದ್ಯ ಪದ್ಧತಿ ಇಂದಿಗೂ ಕೂಡ ಜೀವಂತವಾಗಿ ಕೆಲಸ ಮಾಡುತ್ತಿದೆ. ಈ ಪದ್ಧತಿಯನ್ನು ಉಳಿಸಿ ಬೆಳೆಸಲು ಇಂದಿನ ಮಠಮಾನ್ಯಗಳು ಸಹಕರಿಸುತ್ತಿವೆ. ಅದಕ್ಕೆ ನಾವು ಕೃತಜ್ಞರಾಗಿರುತ್ತೇವೆ. ನಮ್ಮ ಎಲ್ಲಾ ಪಾರಂಪರಿಕ ವೈದ್ಯರನ್ನು ಸಂಘಟಿಸುವ ಕೆಲಸವನ್ನು ಪಾರಂಪರಿಕ ವೈದ್ಯ ಪರಿಷತ್ ಮಾಡುತ್ತಿದೆ. ಅದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪಾರಂಪರಿಕ ವೈದ್ಯ ಪರಿಷತ್ ಹಾಸನ ಘಟಕದ ಕಾರ್ಯದರ್ಶಿ ಲವ ಕುಮಾರ್ ಮತ್ತು ಖಜಾಂಚಿ ದೊರೆಸ್ವಾಮಿ, ಚಿಕ್ಕಮಗಳೂರು ತಾಲೂಕು ವೈದ್ಯ ಪರಿಷತ್ತಿನ ಸಂಚಾಲಕರಾದ ಹೇಮಂತ್, ಮೈಸೂರು ತಾಲೂಕು ವೈದ್ಯ ಪರಿಷತ್ ಖಜಾಂಚಿ ಹೇಮಂತ್, ಬಾಸುರ ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರಶೇಖರ್, ವೈದ್ಯ ಪರಿಷತ್‌ನ ಸದ್ಯಸರಾದ ಸತ್ಯನಾರಾಯಣ, ಸೈಯದ್ ರಫೀಕ್, ಲಕ್ಷ್ಮಣ್, ಲಲಿತಮ್ಮ ಇತರರು ಇದ್ದರು.

ಪಾರಂಪರಿಕ ವೈದ್ಯ ಪದ್ಧತಿಯೇ ಅತ್ಯುತ್ತಮ ಚಿಕಿತ್ಸಾ ವಿಧಾನ: ಅನುಗನಾಳು ಕೃಷ್ಣಮೂರ್ತಿ

ಸರ್ವ ರೋಗಗಳಿಗೂ ಪಾರಂಪರಿಕ ವೈದ್ಯ ಚಿಕಿತ್ಸಾ ಪದ್ಧತಿಯು ಉತ್ತಮವಾಗಿ ಕೆಲಸ ಮಾಡುತ್ತದೆ ಎಂದು ಪಾರಂಪರಿಕ ವೈದ್ಯ ಪರಿಷತ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ ತಿಳಿಸಿದರು.
ಬೇಲೂರು ತಾಲೂಕಿನ ಅರೆಹಳ್ಳಿ ಹೋಬಳಿಯ ಬಾಸುರ ಗ್ರಾಮದಲ್ಲಿ ಪಾರಂಪರಿಕ ರಾಜ್ಯ ವೈದ್ಯ ಪರಿಷತ್‌ಹಾಗೂ ಜಿಲ್ಲಾ ಪಾರಂಪರಿಕ ವೈದ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಹಾಸನ ಜಿಲ್ಲಾ ಪಾರಂಪರಿಕ ವೈದ್ಯರ ಸಭೆಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ರೋಗಗಳಿಗೂ ಪಾರಂಪರಿಕ ವೈದ್ಯ ಚಿಕಿತ್ಸಾ ಪದ್ಧತಿ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ. ನಮ್ಮ ಪದ್ಧತಿಯಿಂದ ತೊಂದರೆ ಆಗಿರುವ ಉದಾಹರಣೆಗಳಿಲ್ಲ. ಈ ಪದ್ಧತಿಯನ್ನು ಮುಂದಿನ ಪೀಳಿಗೆಗಾಗಿ ಉಳಿಸಿ ಬೆಳೆಸಲು ಸರ್ಕಾರ ಒತ್ತು ನೀಡಬೇಕಾಗಿದೆ ಎಂದು ಮನವಿ ಮಾಡಿದರು.
ಗ್ರಾಮೀಣ ಮಟ್ಟದಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರುಗಳನ್ನು ಗುರುತಿಸುವ ಕೆಲಸವನ್ನು ಮಾಡಲಾಗುತ್ತಿದೆ. ಈಗಾಗಲೇ ಪರಿಷತ್ ಸ್ಥಾಪನೆಯಾಗಿ 20 ವರ್ಷಗಳಾಗಿದ್ದು, ಅಂದಿನಿಂದಲೂ ಕರ್ನಾಟಕದ್ಯಂತ 3000ಕ್ಕೂ ಹೆಚ್ಚು ವೈದ್ಯರನ್ನು ಗುರುತಿಸುವ ಕೆಲಸ ಮಾಡಲಾಗಿದೆ. ಕರ್ನಾಟಕ ಜೀವವೈವಿಧ್ಯ ಕಾಯ್ದೆಯಡಿ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಏಳು ಜನರ ಒಳಗೊಂಡ ಜೀವವೈವಿಧ್ಯ ಸಮಿತಿ ಇದೆ. ಈ ಸಮಿತಿಯಲ್ಲಿ ಪಾರಂಪರಿಕ ವೈದ್ಯರುಗಳನ್ನು ಒಳಗೊಂಡಂತೆ ಸಮಿತಿ ರಚನೆ ಮಾಡಬೇಕೆಂದು ಸರ್ಕಾರದ ಆದೇಶವಿದೆ. ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ತಮ್ಮ ಗ್ರಾಮದಲ್ಲಿರುವ ಪಾರಂಪರಿಕ ನಾಟಿ ವೈದ್ಯರನ್ನು ಈ ಸಮಿತಿಗೆ ಸೇರಿಸಬೇಕೆಂದು ಮನವಿ ಮಾಡಿದರು.
ಬಾಸುರ ಗ್ರಾಮದಲ್ಲಿ ಈ ಸಭೆ ನಡೆಸಲು ಕಾರಣ ಇಲ್ಲಿರುವ ಸುತ್ತಮುತ್ತ ಗ್ರಾಮೀಣ ಜನರಿಗೆ ನಮ್ಮ ಪರಂಪರಾ ವೈದ್ಯ ಪದ್ಧತಿಯ ಅರಿವು ಮೂಡಿಸುವುದು ಹಾಗೂ ಈ ಗ್ರಾಮದ ಪಾರಂಪರಿಕ ನಾಟಿ ವೈದ್ಯೆ ಲಲಿತಮ್ಮ ಅವರು ನೀಡುತ್ತಿರುವ ಚಿಕಿತ್ಸೆಗೆ ರಾಜ್ಯದ ಮೂಲೆ ಮೂಲೆಗಳಿಂದ ರೋಗಿಗಳು ಬರುತ್ತಿರುವುದು. ವಿಶೇಷವಾಗಿ ಬಂಜೆತನ ನಿವಾರಣೆಗಾಗಿ ನೀಡಿರುವ ಚಿಕಿತ್ಸೆಯಲ್ಲಿ ಶೇಕಡ 90 ಭಾಗ ಯಶಸ್ವಿಯಾಗಿದೆ. ಇವರ ಹೆಸರನ್ನು ರಾಜ್ಯದ್ಯಂತ ಪರಿಚಯಿಸುವ ಸಲುವಾಗಿ ಈ ಕಾರ್ಯಕ್ರಮ ಇಲ್ಲಿ ಆಯೋಜನೆ ಮಾಡಲಾಗಿದೆ ಎಂದರು.
ಪಾರಂಪರಿಕ ಹಿರಿಯ ವೈದ್ಯ ಕೃಷ್ಣೇಗೌಡ ಅವರು ಮಾತನಾಡಿ, ಋಷಿಮುನಿಗಳಿಂದ ಹಾಗೂ ನಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ಈ ಪರಂಪರಾ ವೈದ್ಯ ಪದ್ಧತಿ ಇಂದಿಗೂ ಕೂಡ ಜೀವಂತವಾಗಿ ಕೆಲಸ ಮಾಡುತ್ತಿದೆ. ಈ ಪದ್ಧತಿಯನ್ನು ಉಳಿಸಿ ಬೆಳೆಸಲು ಇಂದಿನ ಮಠಮಾನ್ಯಗಳು ಸಹಕರಿಸುತ್ತಿವೆ. ಅದಕ್ಕೆ ನಾವು ಕೃತಜ್ಞರಾಗಿರುತ್ತೇವೆ. ನಮ್ಮ ಎಲ್ಲಾ ಪಾರಂಪರಿಕ ವೈದ್ಯರನ್ನು ಸಂಘಟಿಸುವ ಕೆಲಸವನ್ನು ಪಾರಂಪರಿಕ ವೈದ್ಯ ಪರಿಷತ್ ಮಾಡುತ್ತಿದೆ. ಅದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪಾರಂಪರಿಕ ವೈದ್ಯ ಪರಿಷತ್ ಹಾಸನ ಘಟಕದ ಕಾರ್ಯದರ್ಶಿ ಲವ ಕುಮಾರ್ ಮತ್ತು ಖಜಾಂಚಿ ದೊರೆಸ್ವಾಮಿ, ಚಿಕ್ಕಮಗಳೂರು ತಾಲೂಕು ವೈದ್ಯ ಪರಿಷತ್ತಿನ ಸಂಚಾಲಕರಾದ ಹೇಮಂತ್, ಮೈಸೂರು ತಾಲೂಕು ವೈದ್ಯ ಪರಿಷತ್ ಖಜಾಂಚಿ ಹೇಮಂತ್, ಬಾಸುರ ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರಶೇಖರ್, ವೈದ್ಯ ಪರಿಷತ್‌ನ ಸದ್ಯಸರಾದ ಸತ್ಯನಾರಾಯಣ, ಸೈಯದ್ ರಫೀಕ್, ಲಕ್ಷ್ಮಣ್, ಲಲಿತಮ್ಮ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net