ಪಾಪದ ಕೃತ್ಯಕ್ಕೆ ಒಪ್ಪದ ಪತ್ನಿ ಕೊಲೆ

Published on

ಶಹಾಪುರ: ಸಾಲ ಕೊಟ್ಟವರೊಂದಿಗೆ ಸಹಕರಿಸು ಎಂಬ ಮಾತು ಕೇಳದ ಹೆಂಡತಿಯನ್ನು ಕೊಲೆ ಮಾಡಿದ ಗಂಡ ಕಂಬಿ ಎಣಿಸುತ್ತಿದ್ದಾನೆ. ಶರಣಬಸಮ್ಮ ಬಾಗಲೇರ್ (೨೫) ಮೃತಳು.

ಸಾಲ ಮಾಡಿ ವಿಲಾಸಿ ಜೀವನ ನಡೆಸಿ ಕೊನೆಗೆ ಮಡದಿಯನ್ನೇ ಸಾಲಗಾರರೊಂದಿಗೆ ಸಹಕರಿಸಲು ಹೇಳಿದ ನೀಚ ಗಂಡ ಭೀಮಣ್ಣ ಬಾಗಲೇರ್ ಎಂಬ ಕೊಲೆಗಡುಕನೇ ಜೈಲು ಪಾಲಾದವ.

ಈ ಘಟನೆ ನಡೆದಿದ್ದು ೨೦೨೪ರ ಜು.೨೫ರಂದು. ಗೋಗಿ ಪೊಲೀಸ್ ಠಾಣೆಯಲ್ಲಿ ಇದೊಂದು ಸಹಜ ಸಾವು ಎಂದು ದೂರು ದಾಖಲಾಗಿತ್ತು. ಆದರೆ ಸಹೋದರಿ ಸಾವಿನ ಬಗ್ಗೆ ಅನುಮಾನ ಪಟ್ಟ ಮೃತಳ ಅಣ್ಣ ಅಂಬ್ಲಪ್ಪ ಬಿರಾದಾರ, ಭೀಮಣ್ಣನೇ ಕೊಲೆ ಮಾಡಿದ್ದಾನೆ ಎಂದು ದೂರು ನೀಡಿದ. ತನಿಖೆ ನಡೆಸಿದ ಪೊಲೀಸರು, ಭೀಮಣ್ಣ ತನ್ನ ಹೆಂಡತಿಯೊAದಿಗೆ ಮಾತನಾಡಿದ್ದ ಆಡಿಯೋ ಕೊಲೆಯ ಸುಳಿವು ನೀಡಿದೆ. ನಂತರ ವಿಚಾರಣೆ ವೇಳೆ ಆರೋಪಿ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ.

ಘಟನೆ ವಿವರ: ಗಂಗನಾಳ್ ಗ್ರಾಮದ ಶರಣಬಸಮ್ಮಳನ್ನು ಹುಸಣಗಿಯ ಭೀಮಣ್ಣ ಜತೆ ೨೦೨೩ರ ಮೇ ೩೦ರಂದು ಮದುವೆಯಾಗಿತ್ತು. ಸುರಳಿತ ಸಂಸಾರ ನಡೆದಿರಬೇಕಾದರೆ ಗಂಡ ಭೀಮಣ್ಣ ಸಾಲ ಮಾಡಿಕೊಂಡು ತೊಂದರೆಗೆ ಸಿಲುಕಿದ. ಮಾಡಿದ ಸಾಲ ಹಿಂದಿರುಗಿಸಲು ಆಗದೆ ಒದ್ದಾಡಿ ಕೊನೆಗೆ ಕೆಟ್ಟ ಬುದ್ಧಿ ಉಪಯೋಗಿಸಿ ಸಾಲಗಾರರಿಗೆ ಸಹಕರಿಸಲು ಹೆಂಡತಿಗೆ ಹೇಳಿದ್ದಾನೆ. ಆಕೆ ಒಪ್ಪದಿದ್ದಾಗ ಅವಳ ತವರೂರು ಗಂಗನಾಳ್‌ಗೆ ಜು.೨೫ರಂದು ಕರೆದೊಯ್ದು ರಾತ್ರಿ ಮನೆ ಮಹಡಿ ಮೇಲೆ ಮಲಗಿದಾಗ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನನ್ನ ಹೆಂಡತಿ ಮಾತಾಡುತ್ತಿಲ್ಲ, ಸತ್ತಿದ್ದಾಳೆ ಎಂದು ಅತ್ತು ಮನೆಯವರಿಗೆ ಹೇಳಿ ನಂಬಿಸಿದ್ದಾನೆ. ಅವರು ಏನೋ ಆಗಿರಬಹುದೆಂದು ಮರುದಿನ ಅಂತ್ಯಕ್ರಿಯೆ ನೆರವೇರಿಸಿದರು. ಸಹಜ ಸಾವು ಎಂದು ಗೋಗಿ ಠಾಣೆಯಲ್ಲಿ ದೂರು ನೀಡಿದ್ದ.

ಪ್ರಕರಣ ಬಯಲು ಮಾಡಿದ ಮೊಬೈಲ್: ಆರೋಗ್ಯವಾಗಿದ್ದ ತಂಗಿ ಏಕಾಏಕಿ ಹೇಗೆ ಸತ್ತಳು ಎಂಬ ಸಂಶಯಪಟ್ಟ ಸಹೋದರ ಅಂಬ್ಲಪ್ಪ ಆಕೆಯ ಮೊಬೈಲ್ ಪರಿಶೀಲನೆ ನಡೆಸಿದಾಗ ಕಾಲ್ ರಿಕಾರ್ಡಿಂಗ್‌ನಲ್ಲಿ ಗಂಡ-ಹೆAಡತಿ ಮಾತಾಡಿರುವ ಸಂಭಾಷಣೆ ಕೇಳಿದ್ದಾನೆ. ಸಾಕಷ್ಟು ಸಾಲವಾಗಿದೆ. ನೀನು ಸಾಲ ಕೊಟ್ಟವರೊಂದಿಗೆ ಸಹಕರಿಸು. ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಸಿರುವ ಮಾತು ಕೇಳಿ ಕೆರಳಿದ ಅಂಬ್ಲಪ್ಪ ನೇರವಾಗಿ ತೆರಳಿ ತಂಗಿಯನ್ನು ಗಂಡನೇ ಕೊಲೆ ಮಾಡಿದ್ದಾನೆಂದು ಆತ ಸೇರಿ ಇತರ ಆರು ಜನರ ವಿರುದ್ಧ ದೂರು ದಾಖಲಿಸಿದ್ದಾನೆ. ಬಳಿಕ ಗೋಗಿ ಪೊಲೀಸರು ಭೀಮಣ್ಣನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net