ಪಾನಿಪುರಿ ಅಂಗಡಿ ಮೇಲೆ ಬಿದ್ದ ಮರ

PH 01
Published on

ಚಿಂಚೋಳಿ: ಮರವೊಂದು ಉರುಳಿ ಬಿದ್ದು ವ್ಯಕ್ತಿಯೋರ್ವ ಗಾಯಗೊಂಡ ಘಟನೆ ಕೋಡ್ಲಿ ಕ್ರಾಸ್ ಬಳಿ ಭಾನುವಾರ ಬೆಳಗ್ಗೆ ಜರುಗಿದೆ.

ರಾಜಸ್ಥಾನ ಮೂಲದ ಪಾನಿಪುರಿ ವ್ಯಾಪಾರಿ ದರ್ಶನ (30) ಗಾಯಗೊಂಡಾತ. ಬೆಳಗ್ಗೆ ಮುಖ್ಯರಸ್ತೆಯಲ್ಲಿ ಪಾನಿಪುರಿ ವ್ಯಾಪಾರ ಮಾಡುತ್ತಿದ್ದ. 12ರ ಸುಮಾರಿಗೆ ಡಬ್ಬಾ ಹಾಗೂ ಪಕ್ಕದಲ್ಲಿದ್ದ ಬೈಕ್‌ಗಳ ಮೇಲೆ ಬೃಹತ್ ಮರ ಬಿದ್ದಿದೆ. ಅದೃಷ್ಟವಶಾತ್ ವ್ಯಾಪಾರಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಜೀವ ಉಳಿಯಿತು, ಆದರೆ ಕುಟುಂಬ ನಿರ್ವಹಣೆಗಾಗಿ ಇದ್ದ ವ್ಯಾಪಾರವೂ ಹೋಯಿತು. ಮುಂದೇನು ಮಾಡಬೇಕು ಎಂಬುದು ತೋಚದಂತಾಗಿದೆ ಎಂದು ವ್ಯಾಪಾರಿ ದರ್ಶನ ಅಳಲು ತೋಡಿಕೊಂಡಿದ್ದಾನೆ.

ಕೋಡ್ಲಿ ಕ್ರಾಸ್ ಬಳಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಯಾವುದೇ ಮುಂಜಾಗೃತ ಕ್ರಮಗಳಿಲ್ಲದೇ ಮರ ಕಡೆಯಲಾಗುತ್ತಿದೆ. ಗುತ್ತಿಗೆದಾರರ ನಿರ್ಲಕ್ಷÈದಿಂದಾಗಿ ಜನರು ಜೀವ ಕೈಯಲ್ಲಿ ಹಿಡಿದು ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net