

ಚಿತ್ರದುರ್ಗ: ಗುರು,ಲಿಂಗ,ವಿಭೂತಿ ಜಂಗಮವೆಂಬುದು ಅಮೋಘ ಪದಗಳಾಗಿವೆ,ಲಿಂಗ,ಪಾದೋದಕ ಹಾಗೂ ಪ್ರಸಾದ ಶಕ್ತಿ ಎಲ್ಲರಿಗೂ ತಿಳಿಯುವಂತಾಗ ಬೇಕೆಂದು ಛಲವಾದಿ ಗುರು ಪೀಠದ ಶ್ರೀ ಬಸವನಾಗೀದೇವ ಸ್ವಾಮೀಜಿ ಹೇಳಿದರು.
ಶರಣ ಸಂಸ್ಕೃತಿ ಉತ್ಸವ ಹಾಗೂ ಶ್ರೀ ಜಯದೇವ ಶ್ರೀ 150ನೇ ಜಯಂತ್ಯುತ್ಸವದ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ವಚನಗೋಷ್ಠಿಯಲ್ಲಿ ಮಾತನಾಡಿದ ಅವರು,ಶಿವಪಥದಲ್ಲಿ ಸಾಗ ಬೇಕಾದರೆ ಆಧ್ಯಾತ್ಮಿಕ ಜ್ಞಾನದ ಅರಿವು ಮುಖ್ಯವೆಂದರು.
ಪ್ರಾಚಾರ‌್ಯೆ ಶೀಲಾದೇವಿ ಮಳಿಮಠ ಮಾತನಾಡಿ ಪವಿತ್ರತೆಯ ಸಂಕೇತವಾಗಿರುವ ಪಾದೋದಕವನ್ನು ನಮ್ಮ ಅಂತರಂಗ-ಬಹಿರಂಗದ ಶುದ್ಧಿಗೆ ಬಳಸಬೇಕು. ಪಾದೋದಕ ಕೇವಲ ನೀರಲ್ಲ ಅದು ಅಮೃತವೆಂದರು. ನಿವೃತ್ತ ಪ್ರಾಚಾರ‌್ಯ ಸಿ.ಕೆ.ಜಗದೀಶ,ಹಾಸನದ ಕೊಟ್ರೇಶ ಎಸ್.ಉಪ್ಪಾರ ಮಾತನಾಡಿದರು.ಡಾ.ಶ್ರೀ ಬಸವಕುಮಾರ ಸ್ವಾಮಿಜಿ ಉಪಸ್ಥಿತರಿದ್ದರು.
ಆಧ್ಯಾತ್ಮ ಎಂಬುದು ಕಥೆಯಲ್ಲ
ಭಾರತ ಆಧ್ಯಾತ್ಮಿಕತೆ ತವರೂರು,ಆಧ್ಯಾತ್ಮವೆಂಬುದು ಕಥೆಯಲ್ಲ ಅದು ಪ್ರಾಯೋಗಿಕವೆಂದು ಯೋಗ ಗುರು ಚನ್ನಬಸವಣ್ಣ ಹೇಳಿದರು. ಭಾ ನುವಾರ ಏರ್ಪಡಿಸಿದ್ದ ಯೋಗ,ಆಧ್ಯಾತ್ಮ, ಆರೋಗ್ಯ ಶಿಬಿರದಲ್ಲಿ ಮಾತನಾಡಿದ ಅವರು,ಅನ್ನದಾಸೋಹ,ಅರಿವಿನ ದಾಸೋಹವನ್ನು ನೀಡಿದ ಕೀರ್ತಿ ಶ್ರೀ ಜಯದೇವ ಜಗದ್ಗುರುಗಳಿಗೆ ಸಲ್ಲುತ್ತದೆ. ಮಹಾತ್ಮರಿಗೆ ಮರಣವಿಲ್ಲ. ಅಂತವರ ಸಾಲಿನಲ್ಲಿ ಜಯದೇವ ಶ್ರೀಗಳು ಸೇರುತ್ತಾರೆ ಎಂ ದರು.
ರಾವಂದೂರಿನ ಶ್ರೀ ಮೋಕ್ಷಪತಿ ಸ್ವಾಮೀಜಿ ಮಾತನಾಡಿ,ಜಯದೇವ ಜಗದ್ಗುರುಗಳು ನಾಡಿನಾದ್ಯಂತ ಶಾಖಾ ಮಠಗಳನ್ನು ಜೀರ್ಣೋದ್ದಾರ ಮಾಡಿದರು.ಶೈಕ್ಷಣಿಕ ಸಂಸ್ಥೆಗಳು,ವಸತಿ ನಿಲಯಗಳನ್ನು ನಿರ್ಮಿಸಿದ್ದರು, ಬಸವಣ್ಣನವರ ವಚನಗಳನ್ನು ತಮ್ಮ ಆಚಾರ,ವಿಚಾರ,ನಡೆ,ನುಡಿಗಳಲ್ಲಿ ಅಳವಡಿಸಿಕೊಂಡು ಮುರುಘಾ ಪರಂಪರೆಯನ್ನು ಬೆಳೆಸಿದರೆಂದರು.
ಸಿರಸಂಗಿ ಮುರುಘಾಮಠದ ಶ್ರೀ ಬಸವ ಮಹಾಂತ ಸ್ವಾಮೀಜಿ ಮಾತನಾಡಿ,ನಾವಿಂದು ನಮ್ಮ ಸಂಸ್ಕಾರವನ್ನು ಮರೆತಿದ್ದೇವೆ. ಆದ್ದರಿಂದ ಶರಣ ವಿಚಾರಗಳನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ ಎಂದರು.
ಹಿರಿಯ ಇತಿಹಾಸ ಸಂಶೋಧಕ ಡಾ.ಲಕ್ಷ್ಮಣ್‌ತೆಲಗಾವಿ ಮಾತನಾಡಿ,ತಾಳೆ ಗರಿಗಳ ಮುಖಾಂತರ ಶ್ರೀ ಮಠದ ಪರಂಪರೆಯನ್ನು ಬೆಳಕಿಗೆ ತಂದ ವರು ಶ್ರೀ ಮಲ್ಲಿಕಾರ್ಜುನ ಶ್ರೀಗಳೆಂದರು. ಮೌಢ್ಯ ಆಚರಣೆಗಳ ವಿರೋಧಿ ಹೋರಟಗಾರ ಶ್ರೀ ಹುಲಿಕಲ್‌ನಟರಾಜ್ ಮಾತನಾಡಿ,ಇಂದು ಬಸವ ತತ್ವ ಮತ್ತು ಶರಣರ ವಿಚಾರಗಳನ್ನು ಅಧ್ಯಯನಕ್ಕೆ ಬಳಸಿ ಕೊಂಡಿದ್ದೇವೆ ಹೊರತು ಆಚರಣೆಗೆ ತಂದಿಲ್ಲವೆಂದು ವಿಷಾದಿಸಿದರು.
ಶ್ರೀ ಗುರುಬಸವ ಸ್ವಾಮೀಜಿ ಮಾತನಾಡಿ,ಭಕ್ತಿಯೆಂಬುದು ಬಹಳ ದೊಡ್ಡ ಸಂಪತ್ತು. ಆರೋಗ್ಯ,ಧನ ಸಂಪತ್ತಿಗಿಂತ ಭಕ್ತಿ ಸಂಪತ್ತು ಬಹಳ ಮು ಖ್ಯವೆಂದರು. ಮೆದೇಹಳ್ಳಿ ಬಸವರಾಜ ಮಾತನಾಡಿದರು.ಡಾ.ಶ್ರೀ ಬಸವಕುಮಾರ ಸ್ವಾಮಿಜಿ ಮತ್ತು ಹರಗುರು ಚರಮೂರ್ತಿಗಳು ಇದ್ದರು.