ಪಾದುಕಾ ದರ್ಶನ 4ರಂದು

oppo_2
oppo_2
Published on

ಕಲಬುರಗಿ: ನಾಣಿಜ್‌ಧಾಮದ ಜಗದ್ಗುರು ಶ್ರೀ ರಾಮಾನಂದಾಚಾರ್ಯ, ಶ್ರೀ ನರೇಂದ್ರಚಾರ್ಯಜಿ ಮಹಾರಾಜರ ಪಾದುಕಾ ದರ್ಶನ ಕಾರ್ಯಕ್ರಮವೂ ಕಮಲಾಪುರ ತಾಲೂಕಿನ ಮಹಾಗಾಂವ ಕ್ರಾಸ್‌ನಲ್ಲಿನ ಮಹಾಗಾಂವ್ ಕಲ್ಯಾಣ ಮಂಟಪದಲ್ಲಿ ಫೆ.೪ರಂದು ಬೆಳಗ್ಗೆ ೮ರಿಂದ ಸಂಜೆ ೬ರವರೆಗೆ ನಡೆಯಲಿದೆ ಎಂದು ಸ್ವ ಸ್ವರೂಪ ಸಂಪ್ರದಾಯ ಸಂಘಟನೆಯ ಜಿಲ್ಲಾ ನಿರೀಕ್ಷಕ ಸಂಜುಕುಮಾರ ಬಿರಾದಾರ ಹೇಳಿದರು.

ಸ್ವ ಸ್ವರೂಪ ಸಂಪ್ರದಾಯದಿAದ ಮಹಾರಾಷ್ಟç, ಕರ್ನಾಟಕ ಸೇರಿ ವಿವಿಧೆಡೆ ಪೂಜ್ಯರ ನೇತೃತ್ವದಲ್ಲಿ ವಿವಿಧ ಸೇವಾ ಕಾರ್ಯಗಳನ್ನು ಮಾಡುತ್ತಿದ್ದು, ಫೆ.೪ರಂದು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಳಗ್ಗೆ ೮ಕ್ಕೆ ಶ್ರೀಗಳ ಪಾದುಕೆಯ ಭವ್ಯ ಶೋಭಾಯಾತ್ರೆ ನಡೆಯಲಿದೆ. ಬೆಳಗ್ಗೆ ೧೦ಕ್ಕೆ ಪಾದುಕೆ ಮತ್ತು ಗುರುಪೂಜಾ ಸಮಾರಂಭ ನಡೆಯಲಿದ್ದು, ಬೆಳಗ್ಗೆ ೧೦.೩೦ಕ್ಕೆ ಸಾಮಾಜಿಕ ಉಪಕ್ರಮ ನಡೆಯಲಿದೆ. ನಂತರ ಗುರುಪೂಜೆ, ಆರತಿ ಸಮಾರಂಭ ನಡೆಯಲಿದೆ. ನಂತರ ನಾಣಿಜಧಾಮದ ಶ್ರೀದೇವಿ ಪಂಚಾಳ ಅವರಿಂದ ಪ್ರವಚನ ನೆರವೇರಲಿದೆ. ಭಕ್ತರಿಗೆ ಗುರುದೀಕ್ಷೆ ನೆರವೇರಲಿದೆ. ಭಕ್ತರಿಗೆ ಪ್ರಸಾದ ವ್ಯವಸ್ಥೆ ಇರಲಿದೆ ಎಂದರು.

ಬಡ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು. ಸೋಮನಾಥ ನಾಗಭುಜಂಗೆ, ಶ್ರದ್ಧಾ ಪವಾರ್, ಹಣಮಂತರೆಡ್ಡಿ, ಉಜ್ವಲ್‌ಜಾಧವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net