ಪಾದಯಾತ್ರೆಯಿಂದ ಭಕ್ತರ ಇಷ್ಟಾರ್ಥ ಈಡೇರಿಕೆ

1KEM2
ಕರಡಕಲ್‌ನ ಕೋರಿಸಿದ್ಧೇಶ್ವರ ಶ್ರೀಗಳ ೩೧ನೇ ವರ್ಷದ ಭಾವೈಕ್ಯತಾ ಹಾಗೂ ಶೈಕ್ಷಣಿಕ ಪಾದಯಾತ್ರೆಗೆ ಶ್ರೀ ಶಾಂತರುದ್ರಮುನಿ ಸ್ವಾಮೀಜಿ ಚಾಲನೆ ನೀಡಿದರು. ಸಂಗನಗೌಡ ಮರಡ್ಡಿ, ಮಲ್ಕನಗೌಡ ಪಾಟೀಲ್, ನಾನಾಗೌಡ ಮೇಟಿ, ವಿಶ್ವನಾಥರೆಡ್ಡಿ ನಾಡಗೌಡ, ಪಂಚಾಕ್ಷರಿ ಶೆಳ್ಳಗಿ ಇತರರಿದ್ದರು.
Published on

ಕೆಂಭಾವಿ: ಭಾರತದ ಭೂಮಿ ಆಧ್ಯಾತ್ಮಿಕ ಶಕ್ತಿ ಕೇಂದ್ರವಾಗಿದೆ. ಧಾರ್ಮಿಕ ಕ್ಷೇತ್ರಗಳಿಗೆ ಭಕ್ತರು ಶ್ರದ್ಧಾ-ಭಕ್ತಿಯಿಂದ ಕೈಗೊಳ್ಳುವ ಪಾದಯಾತ್ರೆಯಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗುತ್ತಾರೆ ಎಂದು ಕರಡಕಲ್ ಶ್ರೀ ಕೋರಿಸಿದ್ಧೇಶ್ವರ ಶಾಖಾ ಮಠದ ಪೀಠಾಧಿಪತಿ ಶ್ರೀ ಶಾಂತರುದ್ರಮುನಿ ಸ್ವಾಮೀಜಿ ನುಡಿದರು.

ಕರಡಕಲ್‌ನಲ್ಲಿ ಕೋರಿಸಿದ್ಧೇಶ್ವರ ಶ್ರೀಗಳ ೩೧ನೇ ವರ್ಷದ ಭಾವೈಕ್ಯತಾ ಹಾಗೂ ಶೈಕ್ಷಣಿಕ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಪಾದಯಾತ್ರೆಯಿಂದ ಭಕ್ತರ ಇಷ್ಟಾರ್ಥ ಈಡೇರುತ್ತವೆ. ಅವರ ಮಾನಸಿಕ ಸ್ಥಿತಿಯು ಸಕಾರಾತ್ಮಕವಾಗಿ ಬದಲಾವಣೆಯಾಗುತ್ತಾ ಹೋಗುತ್ತದೆ ಎಂದರು.

ಸಂಗನಗೌಡ ಮರಡ್ಡಿ, ಮಲ್ಕನಗೌಡ ಪಾಟೀಲ್, ನಾನಾಗೌಡ ಮೇಟಿ, ವಿಶ್ವನಾಥರೆಡ್ಡಿ ನಾಡಗೌಡ, ಪಂಚಾಕ್ಷರಿ ಶೆಳ್ಳಗಿ ಇತರರಿದ್ದರು. ಮಠದ ವಕ್ತಾರ ಶಿವಪ್ರಕಾಶ ಸ್ವಾಮಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಪರಸನಹಳ್ಳಿ ನಿರೂಪಣೆ ಮಾಡಿದರು. ಸೋಮನಾಥ ಯಾಳಗಿ ಸಂಗೀತ ಸೇವೆ ಸಲ್ಲಿಸಿದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು. ಈಶ್ವರ ಗೊಂಬೆ ಕುಣಿತ, ಸಾರವಾಡ ಮತ್ತು ಜುಮನಾಳ ಸಿದ್ದೇಶ್ವರ ಡೊಳ್ಳಿನ ಕುಣಿತ, ಬಲಶೆಟ್ಟಿಹಾಳ ಕಲಾವಿದರ ಕಲಾ ಪ್ರದರ್ಶನ ನೋಡುಗರ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net